ಕಾಂಗ್ರೆಸ್ ದಲಿತ ವಿರೋಧ ನೀತಿ ತೀವ್ರ ಖಂಡನೀಯ : ಗಣೇಶ ಹೊರತಟ್ನಾಳ
ಕೊಪ್ಪಳ : ದಲಿತರಿಗೆ ಅನ್ಯಾಯ ಮತ್ತು ನಿರಂತರ ವಿರೋಧ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷದ ನಡೆ ತೀವ್ರ ಖಂಡನೀಯ ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ್ ಹೊರತಟ್ನಾಳ ಹೇಳಿದರು.
ಅವರು ಸೋಮವಾರದಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡುತ್ತ ಕಾಂಗ್ರೆಸ್ ಪಕ್ಷ ನಿರಂತರವಾಗಿ ದಲಿತರಿಗೆ ಅನ್ಯಾಯ ಮತ್ತು ನಿರಂತರ ವಿರೋಧ ನೀತಿ ಅನುಸರಿಸುತ್ತ ಪರಿಶಿಷ್ಟರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ಸರಕಾರಗಳು ಎಸ್ಸಿ-ಎಸ್ಟಿ ಸಮುದಾಯಗಳ ಶ್ರೇಯೋಭಿವೃದ್ಧಿಗೆ ನೀರಂತರವಾಗಿ ಮತ್ತು ಪ್ರಾಮಾಣಿಕವಾಗಿ ಶ್ರಮಿಸಿವೆ,ಮೋದಿಯವರು ಪ್ರಧಾನಿಯಾದ ಬಳಿಕ ದೇಶವು ಸರ್ವಾಂಗೀಣ ಅಭಿವೃದ್ಧಿ ಆಗಿದೆ, ದೇಶದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಅಭಿವೃದ್ಧಿಯ ಪ್ರಯೋಜನೆ ತಲುಪಬೇಕು ಎಂಬ ನಿಟ್ಟಿನಲ್ಲಿ ಮೋದಿ ಯವರು ಶ್ರಮಿಸುತ್ತಿದ್ದಾರೆ, ಕಾಂಗ್ರೆಸ್ ಸರಕಾರವು ಕಳೆದ 10 ತಿಂಗಳಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ, ಬರಗಾಲದ ಸಂದರ್ಭದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ, ಬಡವರು, ದೀನದಲಿತರ ಬಗ್ಗೆ ಯಾವುದೇ ಯೋಜನೆ ಹಾಕಿಕೊಳ್ಳದ ಕಾಂಗ್ರೆಸ್ ಸರಕಾರದ ಆಡಳಿತ ವೈಖರಿ ಕುರಿತು ಜನರು ಬೇಸತ್ತಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಯಾವ ಗ್ಯಾರಂಟಿ ಯೋಜನೆಗಳು ವರ್ಕ್ ಔಟ್ ಮಾಡುವದಿಲ್ಲ,ಕಾಂಗ್ರೆಸ್‌ನವರು ಬರೀ ಅಂಬೇಡ್ಕರ್ ಅಂಬೇಡ್ಕರ್ ಎನ್ನುತ್ತಾ ಜಪಾ ಮಾಡುತ್ತಾರೆ, ಆದರೆ ಡಾ.ಬಿ. ಆರ್. ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದಷ್ಟು ಯಾವುದೇ ಪಕ್ಷ ಮಾಡಿಲ್ಲ,ಆದ್ದರಿಂದ ಈ ಲೋಕಸಭೆ ಚುನಾವಣೆಯಲ್ಲಿ ಪರಿಶಿಷ್ಠರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಸೋಮನಗೌಡ್ರು,ಮುಖಂಡರಾದ ಮಂಜುನಾಥ ಮುಸಲಾಪುರ, ವಿರೂಪಾಕ್ಷಪ್ಪ, ಪ್ರಸಾದ ಗಾಳಿ ಉಪಸ್ಥಿತರಿದ್ದರು.
Comments are closed.