ಸಂಸದ ಕರಡಿ ಸಂಗಣ್ಣ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದ ರಾಜಶೇಖರ್ ಹಿಟ್ನಾಳ್
ಕೊಪ್ಪಳ : ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆಗಳ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಸಂಗಣ್ಣ ಕರಡಿ ಮನೆಗೆ ಬೇಟಿ ನೀಡಿದರು.
ಇಂದು ನಾಮಪತ್ರ ಸಲ್ಲಿಸಲಿರುವ ರಾಜಶೇಖರ್ ಹಿಟ್ನಾಳ್ ಮೆರವಣಿಗೆಯಲ್ಲಿ ಭಾಗವಹಿಸುವ ಮೊದಲು ಸಂಗಣ್ಣ ಕರಡಿ ಮನೆಗೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದುಕೊಂಡರು. ಅಲ್ಲಿಯೇ ಉಪಹಾರ ಸೇವಿಸಿದರೂ. ನಂತರ ಮಾತನಾಡಿದ ರಾಜಶೇಖರ್ ಹಿಟ್ನಾಳ್ ೪ ದಶಕಗಳ ಅನುಭವ ಇರುವ ರಾಜಕಾರಣಿ ಕರಡಿ ಸಂಗಣ್ಣ ತಮಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಪಕ್ಷ ಸೇರ್ಪಡೆ ಕುರಿತು ಪಕ್ಷದ ಹಿರಿಯರು ತೀರ್ಮಾನಿಸುತ್ತಾರೆ ಎಂದು ಹೇಳಿದ್ರು.
Comments are closed.