ಡಾ.ಬಸವರಾಜ ಕ್ಯಾವಟರ್ ಪರ ಪ್ರಚಾರ ಮಾಡಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು -ಸುರೇಶ ಭೂಮರಡ್ಡಿ,

Get real time updates directly on you device, subscribe now.

ದೇಶದ ಅಭಿವೃದ್ಧಿ ಬಿಜೆಪಿಯ ಸಂಕಲ್ಪ: ನವೀನ್
ಕೊಪ್ಪಳ: ಭಾರತದ ನಾಲ್ಕು ಬಲಿಷ್ಠ ಸ್ತಂಭಗಳಾದ ಯುವಶಕ್ತಿ, ನಾರಿ ಶಕ್ತಿ, ರೈತರು ಮತ್ತು ಬಡವರನ್ನು ಸಶಕ್ತಗೊಳಿಸುವುದು ಬಿಜೆಪಿಯ ಸಂಕಲ್ಪವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಹೇಳಿದರು.
ಕೊಪ್ಪಳ ವಿಧಾನಸಭಾ ಕ್ಷೆತ್ರದ ಬೇಟೆಗೇರಿ ಗ್ರಾಮದಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಸಮಗ್ರ ಅಭಿವೃದ್ಧಿಯೇ ಬಿಜೆಪಿ ಸಂಕಲ್ಪ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹತ್ತು ವರ್ಷದಲ್ಲಿ ರಸ್ತೆ, ರೈಲ್ವೆ, ಕುಡಿಯುವ ನೀರು, ಶೌಚಾಲಯ ಸೇರಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿ ಜನರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಹಲವಾರು ಯೋಜನೆ ಜಾರಿ ಮಾಡಿದ್ದಾರೆ. ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡುವುದು ನಮ್ಮ ಗುರಿ ಎಂದು ತಿಳಿಸಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರಿಗೆ ಮತ ನೀಡಿ ಅಭೂತಪೂರ್ವ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು. ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆ ಹಾಗೂ ಸಾಧನೆ ಮನೆ ಮನೆಗೆ ತಿಳಿಸಿ. ಇನ್ನು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಬಿಜೆಪಿ ಗೆಲುವು ಸಾಧಿಸಿದ್ದು, ಈ ಬಾರಿಯೂ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಚಂದ್ರಶೇಖರ ಕವಲೂರ್,ಮಾಜಿ ನಗರಸಭೆ ಸದಸ್ಯ ಮಾಂತೇಶ ಮೈನಹಳ್ಳಿ, ಈಶಪ್ಪ ಮಾದಿನೂರ್ ದೇವಪ್ಪ ಕಟ್ಟಿಮನಿ, ಮಾಜಿ ತಾಲೂಕ ಪಂಚಾಯತ್ ಮಾಜಿ ಸದಸ್ಯ ವಿರೇಶ್ ಸಜ್ಜನ , ಮಾಧ್ಯಮ ವಕ್ತಾರರಾದ ಸೋಮಶೇಖರಗೌಡ್ರು ಸೋಂಪುರ್,ನಾಗನಗೌಡ್ರುಮಾಲಿಪಾಟೀಲ,ವಿರೂಪಾಕ್ಷಗೌಡ್ರು,
ನೀಲಕಂಠಯ್ಯ ಹಿರೇಮಠ್,ಶರಣಪ್ಪ ಜಡ್ಡಿ, ರೈತ ಮೋರ್ಚಾ ಜಿಲ್ಲಾಉಪಾಧ್ಯಕ್ಷ ವಿರೂಪಾಕ್ಷ ಹುಳ್ಳಿ, ವಿರೂಪಾಕ್ಷಗೌಡ್ರು ಪಾಟೀಲ್, ತಿಪ್ಪಣ್ಣ ಮಾದನೂರ, ಹನುಮ ರೆಡ್ಡಿ, ಶೇಕಪ್ಪ ಲಕ್ಷೀಣಿ, ನವೀನ್ ಮಾದಿನೂರ್, ಬರಮಪ್ಪ ಬಾವಿ, ಗವಿಸಿದ್ದಪ್ಪ ಮಾಳೆಕೊಪ್ಪ , ಹೇಮರಡ್ಡಿ ನಾಗರಾಳ, ಜಗದೀಶ್ ಯತ್ನಾಳ್,ಹಾಗೂ ಎರಡು ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಎನ್‌ಡಿಎ ಅಭ್ಯರ್ಥಿಜೆಡಿಎಸ್ ಜಿಲ್ಲಾಧ್ಯಕ್ಷರು.

Get real time updates directly on you device, subscribe now.

Comments are closed.

error: Content is protected !!