ರಾಷ್ಟ್ರಕಂಡ ಮಹಾನ್ ಚೇತನ ಡಾ. ಬಾಬಸಾಹೇಬ ಅಂಬೇಡ್ಕರ್ – ಕೃಷ್ಣ ರೆಡ್ಡಿ ಗಲಬಿ
ಕೊಪ್ಪಳ: ೧೪ ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ೧೩೪ ಜಯಂತಿ ಅಂಗವಾಗಿ ಮಾತನಾಡಿದ ಕೊಪ್ಪಳ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಮ್ಮ ದೇಶದ ಸಂವಿಧಾನ ಶಿಲ್ಪಿ ಎಂದೇ ಖ್ಯಾತಿಯಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವಾಗಿದೆ. ವಿಶ್ವದರ್ಜೆಯ ವಕೀಲರು, ಸಮಾಜ ಸುಧಾಕರರೂ ಆಗಿದ್ದ ಅಂಬೇಡ್ಕರ್ ಅವರು ಭಾರತದ ದಲಿತ ಚಳವಳಿಗಳ ಹಿಂದಿನ ಮಹಾನ್ ಶಕ್ತಿ ಎಂದರೂ ತಪ್ಪಾಗಲಿಕ್ಕಿಲ್ಲ. ಶಿಕ್ಷಣ, ಸಮಾನತೆ, ಅರ್ಥಶಾಸ್ತ್ರಕ್ಕೆ ಇವರು ನೀಡಿದ ಕೊಡುಗೆಗಳು ಅಪಾರ. ಅವರು ಅಸ್ಪೃಶ್ಯರ ವಿರುದ್ಧದ ತಾರತಮ್ಯವನ್ನು ತೊಡೆದು ಹಾಕಲು ಮತ್ತು ಮಹಿಳೆಯರು ಹಾಗೂ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅದ್ದರಿಂದ ಅವರ ಜನ್ಮ ವಾರ್ಷಿಕೋತ್ಸವವನ್ನು ಸಮಾನತೆಯ ದಿನ ಎಂದೂ ಕರೆಯಲಾಗುತ್ತದೆ.
ಈ ಸಂದರ್ಭದಲ್ಲಿ ಗಾಳೆಪ್ಪ ಪೂಜಾರ ನವೋದಯ ವಿರುಪಣ್ಣ ರೇಷ್ಮಾ ಖಾಜಾವಲಿ ನಿಂಗಪ್ಪ ಯತ್ನಟ್ಟಿ ಶಿವಣ್ಣ ಹಂದ್ರಾಳ ಕಾವೇರಿ ರ್‍ಯಾಗಿ ಪದ್ಮಾವತಿ ಕಂಬಳಿ ಪರಶುರಾಮ ಕೆರೆಹಳ್ಳಿ ದೇವರಾಜ ಮುತ್ತಣ್ಣ ಗಿಣಗೇರಾ ಹಸ್ಮಾನ್ ಸಾಬ ರಮೇಶ ಬೇಳೂರು ಮಹೇಶ ಬಿಸರಳ್ಳಿ ಇನ್ನೂ ಮುಂತಾದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.