ಮೈನಹಳ್ಳಿ : ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರ ಜಯಂತಿ ಆಚರಣೆ

Get real time updates directly on you device, subscribe now.

 .

ಕೊಪ್ಪಳ: ತಾಲೂಕಿನ ಮೈನಹಳ್ಳಿ ಗ್ರಾಮದ  ಸರಕಾರಿ  ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ರವಿವಾರದಂದು  ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಶಾಲೆಯ ಮುಖ್ಯ ಶಿಕ್ಷಕರಾದ  ಶಂಭುಲಿಂಗನಗೌಡ ಪಾಟೀಲ್, ಶಿಕ್ಷಣ ಪ್ರೇಮಿಗಳಾದ ಸಿದ್ದರಡ್ಡಿ ಡಂಬರಳ್ಳಿ ಹಾಗು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರುಹಾಗು SDMC ಯವರು ಹಾಜರಾಗಿದ್ದರು.

ಶಿಕ್ಷಕರಾದ ಕು. ನಾಗರಾಜ್ ಹಾಗುಸಂಜೀವ ಕುಮಾರ್  ಅಂಬೇಡ್ಕರ ರವರ ಜೀವನ ಚರಿತ್ರೆಯ ಕುರಿತು  ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಂಭುಲಿಂಗನಗೌಡರ್ ಪಾಟೀಲ ಹಲಗೇರಿ ಅವರು ಅಂಬೇಡ್ಕರವರು ಒಬ್ಬ ಮಹಾನ್ ಧೀಮಂತ ವ್ಯಕ್ತಿತ್ವವನ್ನು ಹೊಂದಿದ್ದರು, ನಮ್ಮ ದೇಶದ ಸಂವಿಧಾನ ರಚನೆಯಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸಿದ್ದಾರೆೆ ಅವರ ನೀತಿ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು.ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಿದ  ಸಮಾನತೆಯ ಸಮಾಜಕ್ಕಾಗಿ ಅವರ ದೃಷ್ಟಿಕೋನವು ದೇಶದ ಭವಿಷ್ಯದ ಅಭಿವೃದ್ಧಿಗೆ ಮಾರ್ಗದರ್ಶಿ ತತ್ವವಾಗಿ ಉಳಿದಿದೆ ಎಂದು ತಿಳಿಸಿದರು.

ಕು.ಬಸವರಾಜ್ ಚಿತ್ತಾಪುರ ಕಾರ್ಯಕ್ರಮವನ್ನು ನಿರೂಪಿಸಿದರು. ಬಸವರಾಜ್ ಸಜ್ಜನ್ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: