ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ 20 ಸಾವಿರ ಲೀಡ್ ಬರಲಿದೆ-ಸಿ.ವಿ.ಚಂದ್ರಶೇಖರ್,

Get real time updates directly on you device, subscribe now.

ಕೊಪ್ಪಳ: ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಅವರ ನೇತೃತ್ವದಲ್ಲಿ ಮಾಜಿ ತಾಲೂಕು ಪಂಚಾಯತ ಅಧ್ಯಕ್ಷರು ಹಾಗೂ ಮಾದಿಗ ಸಮುದಾಯದ ಪ್ರಭಾವಿ ನಾಯಕ ವೆಂಕಟೇಶ ಹಾಲವರ್ತಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ವೇಳೆ ಮಾತನಾಡಿದ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್, ಬಿಜೆಪಿಯ ತತ್ತ್ವ, ಸಿದ್ದಾಂತ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವ ಒಪ್ಪಿ ವಿಪಕ್ಷಗಳ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿಗೆ ಬರುತ್ತಿದ್ದಾರೆ. ಅವರಿಗೆ ಬಿಜೆಪಿಯಿಂದ ಸ್ವಾಗತ. ಬಿಜೆಪಿ ಸಾಧನೆ ತಿಳಿಸಿ ಮತದಾರಿಗೆ ಮನವರಿಕೆ ಮಾಡಬೇಕು. ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಮಾಡಬೇಕು ಎಂದರು.
ಪಕ್ಷ ಬಂದಿರುವ ವೆಂಕಟೇಶ್
ಅವರ ಅನುಭವ, ನಾಯಕತ್ವ ನಮಗೆ ಮಾರ್ಗದರ್ಶನ ನೀಡಲಿದೆ. ನರೇಂದ್ರ ಮೋದಿ ಜೀ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಅವರ ಆಶಯಕ್ಕೆ ಧನ್ಯವಾದಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ ಹೆಸರೂರು ಹಾಗೂ ಇನ್ನಿತರರು ಜೊತೆಗಿದ್ದರು.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ 13 ಸಾವಿರ ಮತ ಲೀಡ್ ಬಂದಿತ್ತು. ಈ ಬಾರಿ 20 ಸಾವಿರ ಲೀಡ್ ಬರಲಿದೆ. ಎನ್‌ಡಿಎ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಅವರಿಗೆ ಮತ ನೀಡಿ.
– ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ.

Get real time updates directly on you device, subscribe now.

Comments are closed.

error: Content is protected !!