ಅಂಬೇಡ್ಕರ್ ಜೀವನ ಮನುಕುಲಕ್ಕೆ ಪ್ರೇರಣೆ- ಡಾ.ಬಸವರಾಜ
ಕೊಪ್ಪಳ: ಭಾರತಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರ ಜೀವನ ಇಡೀ ಮನಕುಲಕ್ಕೆ ಪ್ರೇರಣೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತೋತ್ಸವದಲ್ಲಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದೇಶಕಂಡ ಮಾದರಿ, ಆದರ್ಶ ಪುರುಷರಾಗಿದ್ದಾರೆ. ಇಂತಹ ನಾಯಕರು ದೇಶದಲ್ಲಿ ಮತ್ತೆ ಹುಟ್ಟಿ ಬರಬೇಕು. ಅವರು ಬರೆದ ಸಂವಿಧಾನ ಅಡಿಯಲ್ಲಿ ನಾವೆಲ್ಲರೂ ಇಂದು ಉತ್ತಮವಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವುದು ಹೆಮ್ಮೆಯ ವಿಷಯ ಎಂದರು.
ಅಂಬೇಡ್ಕರ ನಮ್ಮನ್ನು ಅಗಲಿ 6 ದಶಕಗಳೇ ಕಳೆದಿದೆ. ನಾವೆಲ್ಲರೂ ಅವರು ನೀಡಿದ ಸಂವಿಧಾನದ ಮಾರ್ಗದಲ್ಲಿ ಸಾಗುತ್ತಿದ್ದೇವೆ. ಅಂಬೇಡ್ಕರ ಆದರ್ಶವನ್ನು ಎಲ್ಲರು ಅನುಸರಿಸಿಕೊಳ್ಳಬೇಕು ಎಂದರು.
ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ, ಬಿಜೆಪಿ ಮುಖಂಡರಾದ ಗಣೇಶ ಹಾಗೂ ಇನ್ನಿತರರು ಜೊತೆಗಿದ್ದರು.
Comments are closed.