ಸುಲಲಿತ ದಾಂಪತ್ಯಗೀತೆಗೆ ವಿಶ್ವಾಸ ಮುಖ್ಯ – ಲಕ್ಷ್ಮೇಶ್ವರಮಠ ಅಭಿಮತ
ಗದಗ ವಿವಾಹ ಬಂಧ ಎನ್ನುವದು ಪರಸ್ಪರ ತಿಳುವಳಿಕೆ ಮತ್ತು ವಿಶ್ವಾಸದ ಭದ್ರ ಬುನಾದಿಯಾಗಿದ್ದು, ಸುಲಲಿತ ದಂಪತ್ಯಗೀತೆ ಯ ಸರಳ ಸೂತ್ರದ ಕೀಲಿ ಕೈ ಕುಟುಂಬದ ಯಜಮಾನಿಬಳಿ ಇರುತ್ತದೆ ಎಂದು ಹಿರಿಯ ಲೇಖಕ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ವಿಶ್ರಾಂತ ಸದಸ್ಯ ಎಫ್ ಪಿ. ಲಕ್ಷ್ಮೇಶ್ವರ ಮಠ ಅವರು ಅಭಿವ್ಯಕ್ತಿ ಪಡಿಸಿದರು
ಅವರು ಸ್ಥಳೀಯ ಶ್ರೀನಿವಾಸ ಭವನದಲ್ಲಿ ಲಕ್ಷ್ಮೇಶ್ವರಮಠ ಅವರ ಬಂಧುಗಳು ಅಭಿಮಾನಿಗಳು ನಿರಂತರ ಪ್ರಕಾಶನ ಮತ್ತು ಮಕಾನದಾರ ಸಾಹಿತ್ಯ ಪ್ರತಿಷ್ಠಾನ ದ ವತಿಯಿಂದ ನಿರಂತರ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭ ಲಕ್ಷ್ಮೇಶ್ವರ ಮಠ ಅವರ 75ನೇ ಹುಟ್ಟುಹಬ್ಬ ಶ್ರೀಮತಿ ಉಮಾದೇವಿ ಫಕ್ಕಿರಯ್ಯ ಲಕ್ಷ್ಮೇಶ್ವರಮಠ ದಂಪತಿಗಳ 50 ನೇ ವಿವಾಹ ವಾರ್ಷಿಕೋತ್ಸವ ಸಮಾರಂಭದಲ್ಲಿ ನಿರಂತರ ಸಾಹಿತ್ಯ ಪುರಸ್ಕಾರ ಸ್ವೀಕರಿಸಿ ಅಭಿನಂದನಾ ಪರ ನುಡಿ ಮಾತನಾಡುತ್ತಾ ಅಭಿಪ್ರಾಯಪಟ್ಟರು
ಹುಟ್ಟುಹಬ್ಬದ ವಜ್ರ ಮಹೋತ್ಸವ ದಾಂಪತ್ಯ ಜೀವನದ ಸುವರ್ಣ ಮಹೋತ್ಸವ ಸು ಸಂದರ್ಭದಲ್ಲಿ ಅಂದಿನ ಹಿರಿಯರಮದುವೆ ಸಮಾರಂಭ ದ ಫೋಟೋ ಗಳು ಕಪ್ಪು ಬಿಳುಪು ಗಳು ಇರುತ್ತಿದ್ದರೂ ಬದುಕು ಕಲರ್ ಫುಲ್ ಆಗಿರುತ್ತಿತ್ತು ಇಂದಿನ ಯುವಜೋಡಿ ಗಳ ಮದುವೆ ಫೋಟೋ ಕಲರ್ ಫುಲ್ ಆಗುರುತ್ತದೆ ಕೆಲವರ ಬದುಕು ಕಪ್ಪು ಬಿಳುಪು ಗಳಿಂದ ಕೂಡಿರುತ್ತದೆ
ಬದುಕು ವರ್ಣ ರಂಜಿತವಾಗಿರಲು ವಿಶ್ವಾಸ ನಂಬಿಕೆ ಸಹಕಾರ ಗಳು ಅಗತ್ಯವೆಂದು ಯುವ ಪೀಳಿಗೆಗೆ ಕರೆ ನೀಡಿದರು
ಮಕಾನದಾರ ಸಾಹಿತ್ಯ ಪ್ರತಿಷ್ಠಾನ, ನಿರಂತರ ಪ್ರಕಾಶನದ ಸಂಚಾಲಕ, ಹಿರಿಯ ಸಾಹಿತಿ ಎ ಎಸ್ ಮಕಾನದಾರ ಅವರು ಹಿರಿಯ ಸಾಹಿತಿ ಲಕ್ಷ್ಮೇಶ್ವರಮಠ ಅವರಿಗೆ ನಿರಂತರ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಿ ಅವರ ಬದುಕು, ಬರವಣಿಗೆ ಸಲ್ಲಿಸಿದ ಸಾಹಿತ್ಯ ಸೇವೆ, ಸವಿಸಿದ ಸಂಕಷ್ಟದ ಹಾದಿ ಗಳಿಸಿದ ಯಶಸ್ಸು ಕುರಿತು ಅಭಿನಂದನ ಪರ ನುಡಿ ಗಳನ್ನು ನುಡಿದು ಅಭಿನಂದಿಸಿದರು
ಕಳೆದ 14ವರುಷ ಗಳಿಂದ ನಾಡಿನ ವಿವಿಧ ಪ್ರದೇಶಗಳ ವಿಭಿನ್ನ ರಂಗಗಳ ಸಾಧಕರನ್ನು ಗುರುತಿಸಿ ನಿರಂತರ ಪುರಸ್ಕಾರ ನೀಡುತ್ತಿರುವ ಬಗೆ ಸಭೆಯಲ್ಲಿ ವಿವರಿಸಿ ದರು
ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ನಿವೃತ್ತ ನ್ಯಾಯಾ ಧೀಶರಾದ ಎಸ್. ಜಿ. ಪಲ್ಲೇ ದ ಅವರು ಲಕ್ಷ್ಮೇಶ್ವರ ಮಠ ಅವರ ಕಾನೂನು ಆಸಕ್ತಿ,ಕಾಯಕ ನಿಷ್ಠೆ 140ಕ್ಕೂ ಮಿಕ್ಕ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟಿಸಿದ ಸಾಹಿತ್ಯ 10ಕ್ಕೂ ಮಿಕ್ಕು ಕಾನೂನು ಪುಸ್ತಕ ರಚನೆ ಅನುವಾದ ಸಾಹಿತ್ಯ,ನ್ಯಾಯಾಲಯ ದ ಕನ್ನಡ ತೀರ್ಪು ಗಳನ್ನು ಇಂಗ್ಲಿಷ್ ಭಾಷೆಗಳಗೆ ಅನುವಾದ ಗೊಳಿಸಿ ಸರ್ವೋಚ್ಚ ನ್ಯಾಯಾಲಯ ಕ್ಕೆ ದಾವೆ ಸಲ್ಲಿಸಲು ಪಕ್ಷ ಗಾರರಿಗೆ ಮಾಡಿದ ಸಹಕಾರ ಯುವ ನ್ಯಾಯವಾದಿಗಳಿಗೆ ನೀಡಿದ ಮಾರ್ಗದರ್ಶನ ಕುರಿತು ಸಂತಸ ವ್ಯಕ್ತ ಪಡಿಸಿದರು
ಕಲಬುರಗಿ ಯ ಉಪನ್ಯಾಸಕಿ ರಶ್ಮಿ ಸ್ವಾಮಿ.ಪೋಲಂಡ ಅನಿವಾಸಿ ಭಾರತೀಯ ಪಂಚಾಕ್ಷರಯ್ಯ, ಶೀಲಾ ಅಮೇರಿಕಾದಲ್ಲಿ ಸೇವೆ ಸಲ್ಲಿಸಿ ಬೆಂಗಳೂರು ನಲ್ಲಿ ಇಂಜನೀಯರರಾಗಿ ಸೇವೆ ಸಲ್ಲಿಸುತ್ತಿರುವ ನಿರಂಜನ, ರಮ್ಯ ದಂಪತಿಗಳು
ತಮ್ಮ ಸಾಧನೆಗೆ ಪಾಲಕರ ನಿರಂತರ ಪ್ರೋತ್ಸಾಹ ಸ್ಮರಿಸಿದರು
ನ್ಯಾಯವಾದಿ, ಕಾನೂನು ಸಾಹಿತ್ಯ ಲೇಖಕ ಎಸ್. ಕೆ ನದಾಫ್.ಕಿತ್ತೂರು ಕರ್ನಾಟಕ ಪತ್ರಿಕೆ ಸಂಪಾದಕ ಮಂಜುನಾಥ್ನ್ಯಾ ಅಬ್ಬಿಗೇರಿ,
ನ್ಯಾಯಾಂಗ ಇಲಾಖೆಯ ಸಹೋದ್ದೋಗಿಗಳಾದ ಶಿರಸ್ತೇದಾರ ಬಸವರಾಜ್ ಕುಕನೂರ್, ಸಲೀಂ ನಬಿ ನಾಯಕ, ಕಾಂತೇಶ ಕಂಡಿ ಬಾಗಿಲ, ರಾಜ್ಯಮಟ್ಟದ ಶಿಕ್ಷಕರ ಪ್ರಶಸ್ತಿ ಪುರಸ್ಕಾರ ಪಡೆದ ಶಿಕ್ಷಕಿ ರತ್ನಾ ಗಿ.ಬದಿ.ಲಕ್ಷ್ಮೇಶ್ವರ ಮಠ ಕುಟುಂಬ ದ ಬಂಧುಗಳು ಅಭಿಮಾನಿಗಳು ಪಾಲ್ಗೊಂಡು ಶುಭ ಕೋರಿದರು
ಆರಂಭದಲ್ಲಿ ಧಾರವಾಡ ದ ಜ್ಯೋತಿ ಕಿರಣ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಪಂಚಾಕ್ಷರಯ್ಯ ವಂದಿಸಿದರು