ಚುನಾವಣಾ ವೆಚ್ಚ ವೀಕ್ಷಕರ ಆಗಮನ: ಸಾರ್ವಜನಿಕರ ಭೇಟಿಗೆ ಅವಕಾಶ
ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ 8-ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ವೆಚ್ಚ ವೀಕ್ಷಕರಾಗಿ ನೇಮಕವಾಗಿರುವ ಚಂದ್ರಶೇಖರ್ ಎ ತಂಬವೇಕರ್ ಅವರು ಜಿಲ್ಲೆಗೆ ಆಗಮಿಸಿದ್ದು, ಸಾರ್ವಜನಿಕ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ.
ವೆಚ್ಚ ವೀಕ್ಷಕರು ಕೊಪ್ಪಳ ಜಿಲ್ಲಾ ಕೇಂದ್ರಸ್ಥಾನದಲ್ಲಿದ್ದು ಸಾರ್ವಜನಿಕರಿಗೆ ಲಭ್ಯವಿರುತ್ತಾರೆ. ಇವರನ್ನು ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ (ಐಬಿ) ಮಧ್ಯಾಹ್ನ 1 ರಿಂದ ಸಂಜೆ 4 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಅಹವಾಲು, ಮಾಹಿತಿ ನೀಡಬಹುದಾಗಿದೆ. ಇವರ ಮೊಬೈಲ್ ಸಂಖ್ಯೆ 8660446768, ಆಗಿರುತ್ತದೆ

ಬಸಾಪಟ್ಟಣದಲ್ಲಿ ಮೇಣದಬತ್ತಿ ಬೆಳಗಿಸುವ ಮತದಾನ ಜಾಗೃತಿ ಕಾರ್ಯಕ್ರಮ
—
ಎಲ್ಲರ ಗಮನಸೆಳೆದ ವಿವಿಪ್ಯಾಟ್ ಚಿತ್ರದ ರಂಗೋಲಿ
ಎಲ್ಲರ ಗಮನಸೆಳೆದ ವಿವಿಪ್ಯಾಟ್ ಚಿತ್ರದ ರಂಗೋಲಿ
: ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾ.ಪಂ. ಕಾರ್ಯಾಲಯದ ಮುಂದೆ ಲೋಕಸಭಾ ಚುನಾವಣೆ ಅಂಗವಾಗಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರ ಅಧ್ಯಕ್ಷತೆಯಲ್ಲಿ ಮೇಣದ ಬತ್ತಿ ಬೆಳಗಿಸುವ ಮೂಲಕ ಶುಕ್ರವಾರ ರಾತ್ರಿ ಮತದಾನ ಜಾಗೃತಿ ಮೂಡಿಸಲಾಯಿತು.
ಗ್ರಾಮದ ಚುನಾವಣೆ ರಾಯಭಾರಿಗಳಾದ ತೃತಿಯ ಲಿಂಗಿಗಳಾದ ಶರಣಮ್ಮ ಹಾಗೂ ರಾಜಶೇಖರ ಅವರು ನನ್ನ ಮತ, ನನ್ನ ಹಕ್ಕು ಚುನಾವಣೆ ಘೋಷವಾಖ್ಯಕ್ಕೆ ಮೇಣದಬತ್ತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಲಕ್ಷ್ಮೀದೇವಿ ಅವರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನ ಮಾಡಬೇಕು. ಯಾರೂ ಕೂಡ ಯಾವುದೇ ಆಸೆ, ಆಮೀಷಕ್ಕೆ ಬಲಿಯಾಗಬಾರದು. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. 2024 ರ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ನಂತರ ಮತದಾನ ಮಹತ್ವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಗ್ರಾ.ಪಂ. ಕಾರ್ಯಾಲಯದ ಮುಂದೆ ಬಿಡಿಸಲಾಗಿದ್ದ ವಿವಿಪ್ಯಾಟ್ ಚಿತ್ರದ ರಂಗೋಲಿ ಎಲ್ಲರ ಗಮನ ಸೆಳೆಯಿತು.
ಬಸಾಪಟ್ಟಣ ಗ್ರಾಪಂ ಪಿಡಿಓ ವಿದ್ಯಾವತಿ, ಕಾರ್ಯದರ್ಶಿಗಳಾದ ನಾಗೇಶ ಸಜ್ಜನ್, ಎಸ್.ಡಿ.ಎ ಶ್ರೀನಿವಾಸ, ತಾಲೂಕು ಐಇಸಿ ಸಂಯೋಜಕರು, ಗ್ರಾ.ಪಂ. ಸಿಬ್ಬಂದಿಗಳು, ಎನ್.ಆರ್.ಎಲ್.ಎಂ ಎಂ.ಬಿ.ಕೆ., ಸ್ವಸಹಾಯ ಗುಂಪುಗಳ ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

Comments are closed.