ಕರಪತ್ರ, ಪೋಸ್ಟರ್‌ಗಳ ಮೇಲೆ ಮುದ್ರಕರ, ಪ್ರಕಾಶಕರ ಹೆಸರು, ವಿಳಾಸ ಕಡ್ಡಾಯ

Get real time updates directly on you device, subscribe now.

  ಸಾರ್ವತ್ರಿಕ ಲೋಕಸಭಾ ಚುನಾವಣೆಯ ಅಂಗವಾಗಿ ಅಭ್ಯರ್ಥಿಗಳ ಪ್ರಚಾರಕ್ಕೆ ಮುದ್ರಿಸುವ ಕರಪತ್ರ, ಪೋಸ್ಟರ್‌ಗಳಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆ 1951 ರ ಸೆಕ್ಷನ್ 127ಎ ಅನ್ವಯ ಮುದ್ರಕರ ಹೆಸರು, ವಿಳಾಸ ಹಾಗೂ ಮುದ್ರಣಗಳ ಪ್ರತಿಗಳ ಸಂಖ್ಯೆಯನ್ನು ಕಡ್ಡಾಯವಾಗಿ ಮುದ್ರಿಸಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ತಿಳಿಸಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಮುದ್ರಿತ ಪ್ರಚಾರ ಸಾಮಗ್ರಿಗಳಲ್ಲಿ ಮುದ್ರಕರ ಹಾಗೂ ಪ್ರಕಾಶಕರ ಗುರುತನ್ನು ಬಹಿರಂಗ ಪಡಿಸುವುದು ಕಡ್ಡಾಯ ಹಾಗೂ ಅವರು ಪ್ರಕಟಿಸಿದ ಕರಪತ್ರ, ಪೋಸ್ಟರ್ ಮುಂತಾದ ಮುದ್ರಿತ ಪ್ರಚಾರ ಸಾಮಗ್ರಿಗಳಲ್ಲಿನ ವಿಷಯಗಳಿಗೆ ಮುದ್ರಕರು ಹಾಗೂ ಪ್ರಕಾಶಕರು ಜವಾಬ್ದಾರರಾಗಿರುತ್ತಾರೆ.
ಆರ್‌ಪಿ ಕಾಯಿದೆ 1951 ರ ಸೆಕ್ಷನ್ 127ಎ ಪ್ರಕಾರ ಚುನಾವಣಾ ಕರಪತ್ರ / ಪೋಸ್ಟರ್‌ನ  ಮೇಲೆ ಮುದ್ರಕ ಮತ್ತು ಪ್ರಕಾಶಕರ ಹೆಸರು ಮತ್ತು ವಿಳಾಸವನ್ನು ಹೊಂದಿರದ ಪ್ರಚಾರ ಸಾಮಗ್ರಿಗಳ ‘ಮುದ್ರಣ ಅಥವಾ ಪ್ರಕಟಿಸುವುದನ್ನು’ ಸ್ಪಷ್ಟವಾಗಿ ನಿಷೇಧಿಸುತ್ತದೆ ಹಾಗೂ ಅಂತವರ ಮೇಲೆ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
ಮೇಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಉದ್ದೇಶದಿಂದ ಹೋರ್ಡಿಂಗ್‌ಗಳು/ಪೋಸ್ಟರ್‌ಗಳು/ಬ್ಯಾನರ್‌ಗಳು ಇತ್ಯಾದಿಗಳಿಗೆ ಜವಾಬ್ದಾರರಾಗಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಂಬAಧಿಸಿದ ಅಧಿಕಾರಿಗಳು ಈ ಬಗ್ಗೆ ಅಗತ್ಯ ನಿಗಾ ವಹಿಸಲು ಸೂಚಿಸಿದೆ. ಎಲ್ಲ ರಾಜಕೀಯ ಪಕ್ಷಗಳು ಕೂಡ ಇದರ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ತಮ್ಮ ಕರಪತ್ರ, ಪೋಸ್ಟರ್ ಅಥವಾ ಬ್ಯಾನರ್‌ಗಳನ್ನು ಪ್ರಕಟಿಸಬೇಕು. ಜನತಾ ಪ್ರಾತಿನಿಧ್ಯ ಕಾಯ್ದೆ 1951ರ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!