ಶೈಕ್ಷಣಿಕ ಕಾರ್ಯಗಳಿಗೆ ಶ್ರೀ ಮಠ ಸದಾ ಸಿದ್ಧ….
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಶ್ರೀಮಠದ ಹಿರಿಯ ಧರ್ಮದರ್ಶಿಗಳಾದ ಶ್ರೀ ಕೆ ಚನ್ನಬಸಯ್ಯ ಸ್ವಾಮಿಗಳು ಮಾತನಾಡಿ ತ್ರಿವಿಧ ದಾಸೋಹ ಅಂದರೆ ಅಕ್ಷರ , ಅನ್ನ ಹಾಗೂ ಜ್ಞಾನ ದಾಸೋಹ ಸದಾ ಶ್ರೀಮಠದಲ್ಲಿ ನಡೆಯುತ್ತಿರಬೇಕು ಎಂಬ ಅಪೇಕ್ಷೆಯನ್ನು ಶ್ರೀ ಗುರು ಚನ್ನಬಸವ ಸ್ವಾಮಿಗಳು ಹೊಂದಿದ್ದರು. ಅವರ ಅಪೇಕ್ಷೆಯಂತೆ ಶ್ರೀ ಮಠ ಕಳೆದ 16 ವರ್ಷಗಳಿಂದ ಉಚಿತ ಕೋಚಿಂಗ್ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ.ಕಾರ್ಯಕ್ರಮದ ಯಶಸ್ಸಿಗೆ ಇಲ್ಲಿ ಯಾವುದೇ ಫಲಾಪೇಕ್ಷೆಯ ಅಪೇಕ್ಷೆ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ಬಳಗ ಕಾರಣ ಎಂದರು.ಉಚಿತವಾಗಿ ಕಾರ್ಯನಿರ್ಸುತ್ತಿರುವ ಶಿಕ್ಷಕ ಬಳಗಕ್ಕೆ ಹಾಗೂ ಅವರ ಕುಟುಂಬ ವರ್ಗಕ್ಕೆ ಶಿವಯೋಗಿಗಳು ಎಲ್ಲ ರೀತಿಯ ಅಷ್ಟೇಶ್ವರಗಳನ್ನ ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮಠದ ಮತ್ತೋರ್ವ ಧರ್ಮದರ್ಶಿಗಳಾದ ಚಂದ್ರೇಗೌಡ ಪೊಲೀಸ್ ಪಾಟೀಲ್ ನಿವೃತ್ತ ಉಪನ್ಯಾಸಕರು ಮಾತನಾಡಿ ಜೀವನದಲ್ಲಿ ದೃಢವಾದ ನಂಬಿಕೆ, ಶ್ರದ್ದೆ ಅಚಲವಾದ ನಿರ್ಧಾರದಿಂದ ಏನನ್ನಾದರೂ ಸಾಧಿಸಬಹುದು ಎಂದರು.ನೀವು ಸಹ ತಾತನ ಸನ್ನಿಧಿಯಲ್ಲಿ ಕನಿಷ್ಠ ಶೇಕಡ 90ಕ್ಕೂ ಹೆಚ್ಚು ಅಂಕಗಳನ್ನು ಗಳಿಸುತ್ತೇನೆ ಎಂದು ಸಂಕಲ್ಪ ಮಾಡಿ ಅಭ್ಯಾಸ ಮಾಡಿ ಖಂಡಿತ ನಿಮ್ಮ ಸಂಕಲ್ಪ ಈಡೇರುತ್ತದೆ ಎಂದರು.
ಬಸಾಪಟ್ಟಣದ ಬಾಲಕಿಯರ ಶಾಲೆಯ ಗುರುಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಎನ್ ನಾಗಭೂಷಣ್ ರವರು ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿಕೊಂಡು ಮಾತನಾಡಿದರು.ಇಲ್ಲಿ ಕಲಿಯುತ್ತಿರುವ ನೀವುಗಳು ಅತ್ಯಂತ ಭಾಗ್ಯಶಾಲಿಗಳು ಏಕೆಂದರೆ ಇಲ್ಲಿ ಕಾರ್ಯನಿರ್ವಹಿಸುವ ಸಂಪನ್ಮೂಲ ವ್ಯಕ್ತಿಗಳು ಜಿಲ್ಲೆ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳು.ಅವರಿಂದ ಎಷ್ಟು ಸಾಧ್ಯವೋ ಅಷ್ಟು ಜ್ಞಾನವನ್ನು ಪಡೆಯಲು ನೀವೆಲ್ಲರೂ ಪ್ರಯತ್ನಿಸಿ ಎಂದರು. ವಿದ್ಯಾರ್ಥಿ ಜೀವನದಲ್ಲಿ 10ನೇ ತರಗತಿ ಒಂದು ಮಹತ್ವದ ಘಟ್ಟ ಪ್ರತಿದಿನ ಒಂದು ವೇಳಾಪಟ್ಟಿಯನ್ನು ರಚಿಸಿಕೊಂಡು ಚೆನ್ನಾಗಿ ಅಭ್ಯಾಸ ಮಾಡಿ ಎಂದು ವಿದ್ಯಾರ್ಥಿಗೆ ತಿಳಿ ಹೇಳಿದರು.
ತರಬೇತಿ ಕಾರ್ಯಕ್ರಮದ ಸಂಚಾಲಕರಾದ ಸಿದ್ದಲಿಂಗೇಶ್ವರ ಪೂಲಭಾವಿ ಪ್ರಸ್ತಾವಿಕವಾಗಿ ಮಾತನಾಡಿ ತರಬೇತಿಯ 16 ವರ್ಷಗಳ ಇತಿಹಾಸವನ್ನು ಮೆಲುಕು ಹಾಕಿ ಕೋಚಿಂಗ್ ತರಬೇತಿಯ ಕಾರ್ಯಕ್ಕೆ ನೆರವಾದ ಎಲ್ಲರನ್ನ ಸ್ಮರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಗಂಗಾವತಿ ತಾಲೂಕ ಘಟಕದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಶ್ರೀ ರಾಜೇಶ್ವರ ರೆಡ್ಡಿ , ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಗಂಗಾವತಿ ತಾಲೂಕ ಘಟಕದ ಕಾರ್ಯದರ್ಶಿಗಳಾದ ಶ್ರೀ ಬಸವರಾಜಯ್ಯ ನವರು , ಕರ್ನಾಟಕ ರಾಜ್ಯ ಸರಕಾರಿ ನೌಕರರ ಗಂಗಾವತಿ ತಾಲೂಕ ಘಟಕದ ಕಾರ್ಯದರ್ಶಿಗಳಾದ ಉಮೇಶ್ ಮಲ್ಲಾಪುರ, ಸಂಪನ್ಮೂಲ ಶಿಕ್ಷಕರಾದ ಶ್ರೀ ಶಿವಾನಂದ ತಿಮ್ಮಾಪುರ್ ಶ್ರೀ ಉಲ್ಲಾಸ ರೆಡ್ಡಿ ಶ್ರೀ ಮುರಳಿ ಶ್ರೀ ವಿರೂಪಾಕ್ಷ ಗೌಡ ಪೊಲೀಸ್ ಪಾಟೀಲ್,ಯೋಗ ಶಿಕ್ಷಕರಾದ ಶಾಂತವೀರಯ್ಯ ಗಂಧದ ಮಠ ಶ್ರೀಮಠದ ಮ್ಯಾನೇಜರ್ ಶರಣಪ್ಪ ಬೂದುಗುಂಪಿ,ಅರುಣ್ ಸಚಿನ್ ಹಾಗೂ ಇನ್ನೂರಕ್ಕು ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರು ಹಾಜರಿದ್ದರು.
Comments are closed.