ಹಿರಿಯ ಪತ್ರಕರ್ತ ಗಂಗಲ ತಿರುಪಾಲಯ್ಯ ನಿಧನ
ಗಂಗಾವತಿ: ಸಾಕ್ಷಿ ತೆಲುಗು ದಿನಪತ್ರಿಕೆಯ ಹಿರಿಯ ಪತ್ರಕರ್ತರಾದ ಗಂಗಲ ತಿರುಪಾಲಯ್ಯ(೬೦) ಇವರು ಅನಾರೋಗ್ಯದ ಕಾರಣ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಮಧ್ಯಾನ್ಹ ೧.೨೨ ನಿಮಿಷಕ್ಕೆ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಒರ್ವ ಪುತ್ರ ಇಬ್ಬರೂ ಪುತ್ರಿಯರು, ಅಪಾರ ಬಂಧುಗಳಿದ್ದಾರೆ. ಮೃತರ ಅಂತ್ಯಕ್ರಿಯೆ ಏ.೦೯ ರಂದು ಬೆಳ್ಳಿಗ್ಗೆ ೭ ಗಂಟೆಗೆ ಗಂಗಾವತಿಯ ಹಿಂದುಳಿದ ವರ್ಗಗಳ ರುದ್ರಭೂಮಿಯಲ್ಲಿ ಜರುಗಲಿದೆ.
ಸಂತಾಪ: ಹಿರಿಯ ಪತ್ರಕರ್ತ ಗಂಗಲ ತಿರುಪಾಲಯ್ಯ ನಿಧನಕ್ಕೆ ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಸಂಸದರಾದ ಎಚ್.ಜಿ.ರಾಮುಲು,ಶಿವರಾಮಗೌಡ, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಎಂ.ಮಲ್ಲಿಕಾರ್ಜುನನಾಗಪ್ಪ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಎಚ್.ಎಸ್.ಮುರಳಿಧರ, ಲಲಿತಾರಾಣಿ, ಎಚ್.ಎಂ.ಸಿದ್ದರಾಮಯ್ಯಸ್ವಾಮಿ, ತಿಪ್ಪೇರುದ್ರಸ್ವಾಮಿ,ಶಾಮೀದ್ ಮನಿಯಾರ್, ಗಂಗಾವತಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರು ಸಂತಾಪ ಸೂಚಿಸಿದ್ದಾರೆ.
Comments are closed.