ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ
ಕೊಪ್ಪಳ : ಪ್ರತೀ ವರ್ಷದಂತೆ ೨೦೨೪ ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಕಾವ್ಯದ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಕನಿಷ್ಟ ೩೫ ಕವಿತೆಗಳಿರುವ, ಈ ಹಿಂದೆ ಪುಸ್ತಕ ರೂಪದಲ್ಲಿ ಪ್ರಕಟವಾಗಿರದ, ಅನುವಾದಿತ ಅಲ್ಲದ ಕವಿತೆಗಳ ಹಸ್ತಪ್ರತಿಯನ್ನು ದಿ. ೨೫-೦೪-೨೦೨೪ ರ ಒಳಗೆ ಮಹೇಶ ಬಳ್ಳಾರಿ, ಅತ್ತಾರ ಗಲ್ಲಿ, ಜವಾಹರ ರಸ್ತೆ, ಕೊಪ್ಪಳ ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಮತ್ತು ತಳಮಳ ಪ್ರಕಾಶನದ ಪರವಾಗಿ ಮಹೇಶ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೊದಲ ಎರಡು ಸ್ಥಾನ ಗಳಿಸಿದ ಹಸ್ತಪ್ರತಿಗಳಿಗೆ ತಲಾ ೬,೦೦೦ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮಹೇಶ ಬಳ್ಳಾರಿ – ಮೊ. ೯೦೦೮೯೯೬೬೨೪ ಮತ್ತು ರಮೇಶ ಸಿ. ಬನ್ನಿಕೊಪ್ಪ ಮೊ. ೯೯೦೨೭೪೬೨೩೫ ಸಂಪರ್ಕಿಸಲು ಕೋರಲಾಗಿದೆ.
ಪ್ರಕಟಣೆ ಮಾಡಲು ಕೋರಿಕೆ :
ಮಹೇಶ ಬಳ್ಳಾರಿ : ಮೊ. ೯೦೦೮೯೯೬೬೨೪
Comments are closed.