ಬಾಲಮೇಳ ಕಾರ್ಯಕ್ರಮ : ಚಟುವಟಿಕೆ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಿ: ಜಿಲ್ಲಾಧಿಕಾರಿ ನಲಿನ್ ಅತುಲ್

0

Get real time updates directly on you device, subscribe now.

ಮನೆಗಳಲ್ಲಿ ಪೋಷಕರು ಮಕ್ಕಳಿಗೆ ಮೊಬೈಲ್ ಕೋಡುವ ಬದಲಿಗೆ ಸಣ್ಣ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.  
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಹಾಗೂ ಕಲಿಕೆ ಟಾಟಾ ಟ್ರಸ್ಟ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದಡಿಯಲ್ಲಿ ಯಲಬುರ್ಗಾ ಯೋಜನೆಯ ತಳಕಲ್ ಗ್ರಾಮದ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಅಂಗನವಾಡಿ ಮಕ್ಕಳ “ಬಾಲಮೇಳ ಕಾರ್ಯಕ್ರಮ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ನಡೆಯುತ್ತಿರುವ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮ ಮಾದರಿಯಾಗಿದ್ದು, ಪಠ್ಯ ಕ್ರಮದಂತೆ ಚಟುವಟಿಕೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಕಾರ್ಯಕ್ರಮದ ವಿಕ್ಷಣೆಗಾಗಿ 6 ರಾಜ್ಯಗಳಿಂದ ಅಧಿಕಾರಿಗಳು ವಿಕ್ಷಣೆಮಾಡಿದ್ದು, 2024-25ನೇ ಸಾಲಿನಲ್ಲಿ ರಾಷ್ಟ್ರೀಯ ನೆಕ್ಸಸ್ ಪ್ರಶಸ್ತಿ ಲಭಿಸಿರುತ್ತದೆ. “ಪೋಷಕರ ನಡೆ ಅಂಗನವಾಡಿಯ ಕಡೆ” ಸಭೆಗಳು ಮತ್ತು “ಹಲೋ ಪೋಷಕರೇ” ಇಂತಹ ವಿನೂತನ ಕಾರ್ಯಕ್ರಮಗಳನ್ನು ಅಂಗನವಾಡಿ ಮಕ್ಕಳ ಪೋಷಕರಿಗಾಗಿ ಮಾಡಲಾಗುತ್ತಿದ್ದು, ಬಾಲ ಮೇಳ ಕಾರ್ಯಕ್ರಮ ಮಕ್ಕಳ ಕಲಿಕೆ ಮತ್ತು ಪ್ರತಿಭೆಯನ್ನು ಪರದರ್ಶೀಸಲು ಉತ್ತಮ ವೇದಿಕೆಯಾಗಿದೆ ಎಂದರು.
ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪಿ.ವಾಯ್.ಶೇಟ್ಟಪ್ಪನವರ್ ಮಾತನಾಡಿ, ಅಂಗನವಾಡಿಯ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಾಲಾ ಪೂರ್ವ ಶಿಕ್ಷಣ ಸಹಕಾರಿಯಾಗಿದೆ. ಮಕ್ಕಳ ಆರೋಗ್ಯ ಹಾಗೂ ಪೌಷ್ಠಿಕ ಆಹಾರ ನೀಡುವುದು ಅತ್ಯವಶ್ಯಕವಾಗಿದೆ. ಮಕ್ಕಳ ಕಲಿಕೆಗೆ ಶಾಲಾ ಪೂರ್ವ ಶಿಕ್ಷಣ ಸಹಕಾರಿಯಾಗಿದೆ. ಚಟುವಟಿಕೆ ಮೂಲಕ ಶಿಕ್ಷಣ ನೀಡುವದರಿಂದ ಮಕ್ಕಳ ಕಲಿಕೆ ಸುಲಭವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಜಹೀರಾ ಬೇಗಂ ಹಾಗೂ ಗ್ರಾ.ಪಂ ಉಪಾಧ್ಯಕ್ಷರು, ಸರ್ವಸದ್ಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಗ್ರಾಮ  ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಮೇಲ್ಚಿಚಾರಕರು, ಕಲಿಕೆ ಟಾಟಾ ಟ್ರಸ್ಟ÷್ಸ ಜಿಲ್ಲಾ ವ್ಯವಸ್ಥಾಪಕರು ಹಾಗೂ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಭಾಗವಹಿಸಿದರು.
ಸ್ಟಾಲ್ ಉದ್ಘಾಟನೆ: ಅಂಗನವಾಡಿ ಮಕ್ಕಳ ಜೊತೆಗೆ ಜಿಲ್ಲಾಧಿಕಾರಿಗಳು, ಶಾಲಾ ಪೂರ್ವ ಶಿಕ್ಷಣ ಸ್ಟಾಲ್ ಉದ್ಘಾಟನೆ ಮಾಡಿ, “ಬಾಲಮೇಳ” ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳು ಅಂಗನವಾಡಿಯಲ್ಲಿ ನಡೆಯುವ ಶಾಲಾಪೂರ್ವ ಶಿಕ್ಷಣದ ಚಟುವಟಿಕೆಗಳಾದ ಅಂಗನವಾಡಿಯ ನಿಯಮಗಳು, ಆಕಾರಗಳ ಪರಿಚಯ, ಬಣ್ಣಗಳ ಪರಿಚಯ, ಇಂದಿನ ಕ್ಯಾಲೆಂಡರ್ ಚಟುವಟಿಕೆಗಳ ಪ್ರದರ್ಶನವನ್ನು ವೀಕ್ಷಿಸಿದರು. ಬಳಿಕ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಎಂಬ ಹಾಡಿಗೆ ಮಕ್ಕಳೊಂದಿಗೆ ಜಿಲ್ಲಾಧಿಕಾರಿಗಳು ನೃತ್ಯ ಮಾಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ 10 ಅಂಗನವಾಡಿಗಳ 3 ರಿಂದ 6 ವರ್ಷದ ಮಕ್ಕಳು ಹಾಗೂ ಮಕ್ಕಳ ತಂದೆ ತಾಯಂದಿರು ಸಾರ್ವಜನಿಕರು ಭಾಗವಹಿಸಿದರು ಅಂಗನವಾಡಿ ಕೇಂದ್ರದಲ್ಲಿ ಶಾಲಾ ಪೂರ್ವ ಶಿಕ್ಷಣದಲ್ಲಿ ಕಲಿತಿರುವ ವಿಷಯವನ್ನು ಮಕ್ಕಳ ಸಾಮರ್ಥ್ಯವನ್ನು ಬಾಲಮೇಳ ಕಾರ್ಯಕ್ರಮದ ವೇದಿಕೆ ಮೇಲೆ ಪ್ರದರ್ಶಿಸಿ ಪಾಲಕರಿಂದ ಪ್ರೋತ್ಸಾಹಿಸುವ ಅತ್ಯುತ್ತಮ ಕಾರ್ಯಕ್ರಮವಾಗಿ ಜನಮೆಚ್ಚುಗೆ ಗಳಿಸಿತು 400 ರಿಂದ 500 ಪಾಲಕರು ಭಾಗವಹಿಸಿದ್ದರು.
ಬಾಲಮೇಳ ಕಾರ್ಯಕ್ರಮದ ನಿಮಿತ್ಯ ಪಾಕರಿಗೆ ಆಟಗಳನ್ನು ಆಡಿಸಲಾಯಿತು, ಶಾಲಾ ಪೂರ್ವ ಶಿಕ್ಷಣ ಸ್ಟಾಲ್, ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ವೇಷ ಬೂಷಣ ಹಾಗೂ ಮಕ್ಕಳು ಅಂಗನವಾಡಿಯಲ್ಲಿ ಕಲಿತ ಚಟುವಟಿಕೆಗಳನ್ನು ಪ್ರಸ್ತುತ ಪಡಿಸುವಿಕೆ ಸೇರಿದಂತೆ ಇತರ ಕಾರ್ಯಕ್ರಮಗಳು ನಡೆದವು.
****

Get real time updates directly on you device, subscribe now.

Leave A Reply

Your email address will not be published.

error: Content is protected !!