ಅಂಬಿಗರ ಚೌಡಯ್ಯ ನವರದು ಜಾತಿ, ವರ್ಗ ರಹಿತ ಸಮಾಜ ನಿರ್ಮಾಣದ ಗುರಿ

0

Get real time updates directly on you device, subscribe now.

  ವಚನಕಾರ ಅಂಬಿಗರ ಚೌಡಯ್ಯನವರು ಜಾತಿ ರಹಿತ ಮತ್ತು ವರ್ಗ ರಹಿತ ಸಮಾಜ ನಿರ್ಮಾಣ ಮಾಡುವ ಗುರಿ ಹೊಂದಿದ್ದರು ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಡಾ. ಗಣಪತಿ ಲಮಾಣಿ ಅವರು ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರದಂದು ನಿಜ ಶರಣ ಅಂಬಿಗರ ಚೌಡಯ್ಯ ನವರ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
12ನೇ ಶತಮಾನದಲ್ಲಿ ವಚನಕಾರ ಅಂಬಿಗರ ಚೌಡಯ್ಯ ನವರು ತಮ್ಮ ವಚನಗಳ ಮೂಲಕ ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಹೇಳಿದ್ದಾರೆ. ಎಲ್ಲರಿಗೂ ಒಂದೇ ಎಂಬ ಭಾವನೆ ಇರಬೇಕು ಎಂದು ತಿಳಿಸಿದರು.
ಉಪನ್ಯಾಸಕರಾದ  ಡಾ. ನರಸಿಂಹ ಅವರು ಮಾತನಾಡಿ, ಅಂಬಿಗರ ಚೌಡಯ್ಯ ನವರು 1160 ರಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರ್ ತಾಲ್ಲೂಕಿನ ಶಿವಪುರದಲ್ಲಿ ಜನಿಸಿದ್ದಾರೆ. ಇವರ ತಂದೆ ವಿರುಪಾಕ್ಷಿ ತಾಯಿ ಪಂಪದೇವಿ, ಅಂಬಿಗರ ಚೌಡಯ್ಯ ನವರ ಮೂಲ ವೃತ್ತಿ ದೋಣಿ ನಡೆಸುವ ಕಾಯಕ ಮಾಡುತ್ತಿದ್ದರು. ತಮ್ಮ ವಚನಗಳ ಮೂಲಕ ಜಾತಿ, ಅಸಮಾನತೆ ಯನ್ನು ಖಂಡಿಸಿದ್ದಾರೆ.  ಸುಮಾರು 279 ವಚನಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು.
ಸಾಂಸ್ಕೃತಿಕ ಘಟಕದ ಸಂಚಾಲಕರಾದ ಡಾ. ಹುಲಿಗೆಮ್ಮ ಅವರು ಮಾತನಾಡುತ್ತ ಅಂಬಿಗರ ಚೌಡಯ್ಯನವರ ವಚನಗಳಲ್ಲಿ ನಿಷ್ಠುರತೆ, ನೇರ ನುಡಿಗಳೊಗೊಂಡಿದೆ. ಇವರು ತಮ್ಮ ವಚನಗಳ ಮೂಲಕ ಮೌಢ್ಯ, ಕಂದಚಾರಗಳ ಕುರಿತು ಸಮಾಜಕ್ಕೆ ತಿಳಿಸಿದ್ದಾರೆ. ಇವರು ಶೋಷಣೆ ರಹಿತ ಸಮಾಜದ ಆಶಯ ಹೊಂದಿದ್ದರು. ಇವರ ವಚನಗಳಲ್ಲಿ  ದಯಾಪರತೆಯಿಲ್ಲ ಎಲ್ಲಾರೂ ಸುಚಿಗಳಾಗಿರಬೇಕೆಂದು ಹೇಳುತ್ತಾರೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ನಾಗರತ್ನ ತಮ್ಮಿನಾಳ, ಡಾ. ಅಶೋಕ ಕುಮಾರ, ಹನುಮಪ್ಪ, ಶಿವಪ್ಪ ಬಡಿಗೇರ, ಶ್ರೀಕಾಂತ್ ಸಿಂಗಾಪುರ್ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!