ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳವರ ೨೧ನೇ ಪುಣ್ಯಸ್ಮರಣೆ

Get real time updates directly on you device, subscribe now.

ಶ್ರೀ ಗವಿಮಠದಲ್ಲಿ ಪರಮ ಪೂಜ್ಯ ಲಿಂ. ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳವರ
೨೧ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ.

ಸಂಸ್ಥಾನ ಶ್ರೀ ಗವಿಮಠದ ೧೭ನೇ ಪೀಠಾಧಿಪತಿಗಳಾದ ಲಿಂ. ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳವರ ೨೧ನೇ ಪುಣ್ಯಸ್ಮರಣೆಯ ನಿಮಿತ್ಯ ಇಂದು ದಿನಾಂಕ ೦೩-೦೪-೨೦೨೪ ಬುಧವಾರದಂದು ಶ್ರೀಮಠದಲ್ಲಿ ಪಾದಯಾತ್ರೆ, ಉಚಿತ ಆರೋಗ್ಯ ತಪಾಸಣೆ, ಉಪದೇಶಾಮೃತ ಹಾಗೂ ಸಂಗೀತ ಕಾರ್ಯಕ್ರಮ ಜರುಗಿದವು.
ಬೆಳಗ್ಗೆ ೬:೦೦ಗಂಟೆಗೆ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದಿಂದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳೊಂದಿಗೆ ಆರಂಭಗೊಂಡ ಪಾದಯಾತ್ರೆಯು ಅಶೋಕ್ ಸರ್ಕಲ್, ಗಡಿಯಾರ ಕಂಬದಿಂದ ಶ್ರೀ ಗವಿಮಠಕ್ಕೆ ತಲುಪಿತು. ಸಾವಿರಾರು ಭಕ್ತರು ಭಾಗಿಯಾಗಿದ್ದರು.

ನಂತರ ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೪:೦೦ಗಂಟೆಯವರೆಗೆ ಗವಿಮಠದ ಆವರಣದಲ್ಲಿರುವ ಜಗದ್ಗುರು ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಸಾಯಂಕಾಲ ೬:೩೦ಗಂಟೆಗೆ ಶ್ರೀಮಠದ ಕೆರೆಯ ದಡದಲ್ಲಿ ಗುರುಸ್ಮರಣೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳು ಉಪದೇಶಾಮೃತವನ್ನು ನೀಡುತ್ತಾ ಈ ನೆಲದಲ್ಲಿ ಗುರುವಿಗೆ ಇರುವ ಸ್ಥಾನ ಮತ್ತು ಗುರುವಿನಂತ ಘನ ವಸ್ತು ಮತ್ತೊಂದಿಲ್ಲ. ಗುರುಗಳಾಗಿದ್ದ ಶ್ರೀ.ಲಿಂ.ಶಿವಶಾಂತವೀರ ಮಹಾಸ್ವಾಮಿಗಳು ಹೂವಿನ ಹಾಗೇ ಬದುಕಿದವರಾಗಿದ್ದರು. ಆಧರ್ಮದಿಂದ ಧರ್ಮದೆಡೆ, ಅಜ್ಞಾನ ದಿಂದ ಸುಜ್ಞಾನದೆಎಡ, ಅಸತ್ಯದಿಂದ ಸತ್ಯದೆಡೆ ಕೊಂಡೊಯ್ದು ನರನನ್ನು ಹರನನ್ನಾಗಿ ಪರಿರ್ತಿಸಿದ ಮಹಾನ್ ತಪಸ್ವಿಗಳಾಗಿದ್ದರು ಇಂತವರನ್ನು ಪಡೆದ ಭಕ್ತರೇ ಧನ್ಯರು ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಉಪ್ಪಿನ ಬೆಟಗೇರಿಯ ಮೂರುಸಾವಿರ ವಿರಕ್ತ ಮಠದ ಶ್ರೀ.ಮ.ನಿ.ಪ್ರ. ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು ಆಶಿರ್ವಚನ ನೀಡುತ್ತಾ ಯಾವ ಭಕ್ತರು ಶ್ರೀ ಶಿವಶಾಂತವೀರ ಮಹಾಸ್ವಾಮಿಗಳನ್ನು ಪ್ರತ್ಯಕ್ಷವಾಗಿ ನೋಡಿರುತ್ತೀರಿ ಅವರೆಲ್ಲರ ಪಾಲಿಗೆ ಸಾಕ್ಷಾತ್ ಪರಮಾತ್ಮರಾಗಿದ್ದರು. ಶ್ರೀಗವಿಮಠದಲ್ಲಿ ಭಕ್ತರ ಪಾಲಿಗೆ ಹುಣ್ಣಿಮೆಯ ಚಂದರಿರನಂತೆ ಬೆಳಗುತ್ತಾ ಭಕ್ತರ ಸಂಕಷ್ಟಗಳನ್ನು ನಿವಾರಿಸುತ್ತಿದ್ದರು. ಸಂಸಾರಿಗಳ ಪಾಲಿಗೆ ತಂದೆ ತಾಯಿಗಳ ಸ್ಮರಣೆ ಮಾಡಿದರೆ ಹೊಟ್ಟೆತುಂಬುವ ಹಾಗೇ ನಮ್ಮಂತಹ ವಿರಕ್ತರಿಗೆ ಶ್ರೀ ಶಿಶಾಂತವೀರ ಮಹಾಸ್ವಾಮಿಗಳ ಸ್ಮರಣೆಯೇ ಮನಸ್ಸಿಗೆ ಆನಂದ ನೀಡುತ್ತದೆ. ಇವರ ಸ್ಮರಣೆಯ ದಿನವೇ ಭಕ್ತರ ಪಾಲಿಗೆ ಪುಣ್ಯದ ದಿನವಾಗಿದೆ ಎಂದರು.
ಆರಂಭದಲ್ಲಿ ಕಲಬುರ್ಗಿಯ ಸಂಗೀತ ಕಲಾವಿದರಾದ ಶ್ರೀ ಶಿವರುದ್ರಯ್ಯ ಕೆ.ಎಂ. ಗೌಡಗಾಂವ್ ಅವರಿಂದ ನಾದಸಂಪದ ಸಂಗೀತ ಕಾರ್ಯಕ್ರಮ ಜರುಗಿತು. ಪರಮ ಪೂಜ್ಯ ಲಿಂ. ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳವರ ಪುಣ್ಯಸ್ಮರಣೆಯಲ್ಲಿ ನಾಡಿನ ಭಕ್ತರು ಭಾಗಿಯಾಗಿ ಗುರುನಾಥನ ನೆನೆದು ಪುನೀತರಾದರು ಎಂದು ಸಂಸ್ಥಾನ ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!
%d bloggers like this: