ವಿವಿಧ ಪಕ್ಷ, ಸಮಾಜದ ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆ
ಕೊಪ್ಪಳ ನಗರದ ಶೋಭಾ ಫಂಕ್ಷನ್ ಹಾಲ್’ನಲ್ಲಿ ನಡೆದ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೊಪ್ಪಳದ ವಿವಿಧ ಸಮಾಜದ ಮುಖಂಡರು ಹಾಗೂ ಮಹಿಳಾ ಮುಖಂಡರು ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ್ ಹಾಗೂ ರಾಜಶೇಖರ ಹಿಟ್ನಾಳ್ ಅವರ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಮುಖಂಡರಾದ ಪ್ರಸನ್ನ ಗಡಾದ್ ಜೊತೆಗಿದ್ದರು.
ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಟ್ಟಡ ಕಾರ್ಮಿಕರ ಕಮ್ಯುನಿಸ್ಟ್ ಪಕ್ಷ ಕೊಪ್ಪಳ, ಅಂಗನವಾಡಿ ಕಾರ್ಯಕರ್ತರ ಒಕ್ಕೂಟ ಹಾಗೂ ನಗರದ ಕೂಲಿ ಕಾರ್ಮಿಕರ ಸಂಘಗಳ ಒಕ್ಕೂಟದ ಸದಸ್ಯರ ಸೇರ್ಪಡೆಯಾದರು
ಕಟ್ಟಡ ಕಾರ್ಮಿಕರ ಕಮ್ಯುನಿಸ್ಟ್ ಪಕ್ಷ ಕೊಪ್ಪಳ ಜಿಲ್ಲಾಧ್ಯಕ್ಷರಾದ ತುಕಾರಮ ಬಿ ಪಾತ್ರೊಟಿ, ಜಿಲ್ಲಾ ಸಂಚಾಲಕರು ಎಸ್. ಐ ಗಫರ್, ಕಾರ್ಯದರ್ಶಿ ಹುಲಗಪ್ಪ, ಚೆನ್ನಪ್ಪ, ನೂರ್ ಸಾಬ ಹೊಸಮನಿ ಜಿಲ್ಲಾ ಪಾದ್ರಿಗಳ ಸಂಘದ ಅಧ್ಯಕ್ಷರು ಚೆನ್ನಬಸಪ್ಪ ಹಾಗೂ ಅನೇಕ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷರು ಕಾಟನ್ ಪಾಷಾ, ಹಾಗೂ ಯುವ ನಾಯಕ ಕೆ ಸೋಮಶೇಖರ ಹಿಟ್ನಾಳ ಉಪಸ್ಥಿತರಿದ್ದರು.
Comments are closed.