ಬಿಜೆಪಿ ತೊರೆದು ಶಾಸಕ‌ ಕೆ. ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ

Get real time updates directly on you device, subscribe now.

 

ಕೊಪ್ಪಳ:
ಮಾಜಿ ಶಾಸಕ ದಿ. ಎಂ.ಬಿ. ದಿವಟರ್ ನಿವಾಸದಲ್ಲಿ ಬುಧವಾರ ಹಮ್ಮಿಕೊಂಡ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿಯವರ ಆಪ್ತರಾದ ವೈಜನಾಥ ದಿವಟರ್, ನಗರಸಭೆ ಮಾಜಿ ಸದಸ್ಯ ಅಂದಪ್ಪ ಬೆಣಕಲ್ ಸೇರಿದಂತೆ ಅನೇಕ ಮುಖಂಡರು ಕಾಂಗ್ರೆಸ್ ತತ್ವ ಸಿದ್ದಾಂತ ಹಾಗೂ ಜನಪರ ಕಾರ್ಯಕ್ರಮ ಮೆಚ್ಚಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

ಶಾಸಕ‌ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಗೆ ನೀಡಿದ ಆಶ್ವಾಸನೆಯಂತೆ ಐದು‌ ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ತಲುಪಿಸುವ ಕೆಲಸ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ಕೋಟ್ಯಾಂತರ ಬಡಕುಟುಂಬಗಳು ಇಂದು ನೆಮ್ಮದಿ ಜೀವನ ನಡೆಸುತ್ತೇವೆ. ಗ್ಯಾರಂಟಿ ಯೋಜನೆಗಳು ರಾಜ್ಯ ಮಾತ್ರವಲ್ಲದೇ ಇಡೀ ದೇಶಾದ್ಯಂತ ಜನರ ಮನ ಗೆದ್ದಿದೇ. ಹೀಗಾಗಿಯೇ ಅನೇಕ ರಾಜ್ಯಗಳು ನಮ್ಮ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ನಮ್ಮ‌ ಗ್ಯಾರಂಟಿಗಳನ್ನು ಕಾಫಿ ಮಾಡಿದ್ದಾರೆ ಎಂದರು.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಜ್ವಲಂತ ಸಮಸ್ಯೆಗಳನ್ನು ಬರುವ ದಿನದಲ್ಲಿ ಪ್ರಮಾಣಿಕವಾಗಿ ಬಗೆಹರಿಸಿ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಮೇ.7ರಂದು ನಡೆಯಲಿರುವ ಚುನಾವಣೆ ಮಹತ್ತರವಾಗಿದ್ದು, ಅಂದು ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಮತ ನೀಡುವ ಅವರನ್ನು ಗೆಲ್ಲಿಸೋಣ. ಕಾಂಗ್ರೆಸ್ ತತ್ವ ಸಿದ್ದಾಂತ ಮೆಚ್ಚಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಎಲ್ಲರನ್ನೂ ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ ಎಂದು ವಾಗ್ದಾನ ನೀಡಿದರು.

ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆ ಆಗಲಿ ಎನ್ನುವ ಉದ್ದೇಶದಿಂದ ಪಕ್ಷದ ಖಾತೆಗಳನ್ನು ಸೀಜ್ ಮಾಡಿಸಲಾಗಿದೆ.  ದಬ್ಬಾಳಿಕೆಯ ಮೂಲಕ ಹತ್ತಿಕ್ಕುವ ಯತ್ನ ನಡೆದಿದೆ. ಆದರೂ ಕೂಡ ಕಾಂಗ್ರೆಸ್ ಪಕ್ಷದ ಶಕ್ತಿ ನಿತ್ಯವೂ ವೃದ್ಧಿಯಾಗುತ್ತಿದೆ. ಬಿಜೆಪಿ, ಜೆಡಿಎಸ್ ತೊರೆದು ಅನೇಕ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸೋಲುವ ಭಯ ಕಾಡುತ್ತಿದೆ. ಹೀಗಾಗಿ ಅವರು ಇಂಡಿಯಾ ಮೈತ್ರಿಕೂಟದ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಸೇರ್ಪಡೆಗೊಂಡು ಮಾತನಾಡಿದ ಅಂದಪ್ಪ ಬೆಣಕಲ್, ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಯಾವುದೇ ಮನ್ನಣೆಯಿಲ್ಲ. ಅಲ್ಲಿ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿದೆ. ಬಿಜೆಪಿಗೆ ಟಿಕೆಟ್ ಘೋಷಣೆಯಾಗಿ ಎರಡು ವಾರ ಕಳೆದರೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಡೆಗಣಿಸಲಾಗಿದೆ. ಮೊದಲಿನ ಬಿಜೆಪಿಗೂ ಇಂದಿನ ಬಿಜೆಪಿಗೂ ಬಹಳ ಸಾಮ್ಯತೆ ಇದೆ ಎಂದರು.

ಪಕ್ಷಕ್ಕಾಗಿ ಕಳೆದ 15 ವರ್ಷಗಳಿಂದ ಎಲ್ಲವನ್ನೂ ಮಾಡಿದ್ದೇವೆ. ಆದರೆ ಪಕ್ಷ ನಮಗೇನು ಮಾಡಿಲ್ಲ. ಸಂಸದ ಸಂಗಣ್ಣ ಕಡಿಯವರಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ, ನಾವು ಕಾಂಗ್ರೆಸ್ ಸೇರ್ಪಡೆ ಆಗಿಲ್ಲ, ಅಲ್ಲಿ ಇದ್ದು ಅವಮಾನ ಎದುರಿಸುವುದಕ್ಕಿಂತ ಜನಪರವಾಗಿರುವ ಕಾಂಗ್ರೆಸ್ ಗೆ ಹೋಗುವುದೇ ಲೇಸು ಎಂಬ ಕಾರಣದಿಂದ ಎಲ್ಲರೂ ಯೋಚಿಸಿ ತೀರ್ಮಾನಕ್ಕೆ ಬಂದು ಕಾಂಗ್ರೆಸ್ ಸೇರಿದ್ದೇವೆ. ಕಾಂಗ್ರೆಸ್ ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತದೇ ಎಂಬ ವಿಶ್ವಾಸವಿದೆ ಎಂದರು.

ಕಾಂಗ್ರೆಸ್ ಸೇರ್ಪಡೆ:
ಮಾಜಿ ಶಾಸಕ ಎಂ.ಬಿ. ದಿವಟರ್ ಸಹೋದರ ವೈಜನಾಥ ದಿವಟರ್, ನಗರಸಭೆ ಮಾಜಿ ಸದಸ್ಯ ವೀರಣ್ಣ ಗಾಣಿಗೇರ, ಪಂಚಮಸಾಲಿ ಸಮಾಜದ ಮುಖಂಡ ವಿರೂಪಾಕ್ಷಯ್ಯ ಗದಗಿನಮಠ, ವಿಜಯರೆಡ್ಡಿ ರಡ್ಡೇರ್, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ ದಿವಟರ್, ಪ್ರಶಾಂತ ರಾಯ್ಕರ್, ನಗರಸಭೆ ಮಾಜಿ ಸದಸ್ಯರಾದ ವಿನೋದ ಪೂಜಾರ್, ಮಲ್ಲಪ್ಪ ಮುರಡಿ, ಸಂಜೀವ್ ದಾಸರ ಕೌಜಗೇರಿ, ಗುತ್ತಿಗೆದಾರ ಬಸವರಾಜ ಕೊಪ್ಪಳ, ಬಣಜಿಗ ಸಮಾಜದ ಮುಖಂಡ ರೇಣುಕಾ ಪ್ರಸಾದ್ ಕಾಟ್ರಳ್ಳಿ, ವಿರೇಶ ಬೆಣಕಲ್, ಮಲ್ಲಿಕಾರ್ಜುನ ದಿವಟರ್, ವೆಂಕಟೇಶ ದಾಸರ, ಬಸವರಾಜ ಮಂಡಪ್ಪನ್ನವರ್ ಸೇರಿದಂತೆ ಅನೇಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸವರಾಜ ಹಿಟ್ನಾಳ, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೈಯದ್ ಜುಲ್ಲಾ ಖಾದ್ರಿ, ಎಪಿಎಂಸಿ ಮಾಜಿ ಅಧ್ಯಕ್ಷ ಹನಮರಡ್ಡಿ ಹಂಗನಕಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕಾಟನ್ ಪಾಷ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರಡ್ಡಿ ಗಲಭಿ, ಮುಖಂಡರಾದ ಪ್ರಸನ್ನ ಗಡಾದ, ತೋಟಪ್ಪ ಕಾಮನೂರು, ರಾಜಶೇಖರ ಆಡೂರು, ಅಮರೇಶ ಉಪಲಾಪುರ ಸೇರಿದಂತೆ ಮತ್ತಿತರರಿದ್ದರು.

 

Get real time updates directly on you device, subscribe now.

Comments are closed.

error: Content is protected !!