ಟ್ರ್ಯಾಕ್ಟರ್, ಟ್ರಾಲಿ ಮೋಟಾರ್ ಸೈಕಲ್ ಕಳ್ಳತನ- ಕಳ್ಳರ ಬಂಧನ
ಟ್ರ್ಯಾಕ್ಟರ್, ಟ್ರಾಲಿ ಮೋಟಾರ್ ಸೈಕಲ್ ಕಳ್ಳತನ- ಕಳ್ಳರ ಬಂಧ
- Kustagi : ಕೊಪ್ಪಳ ಜಿಲ್ಲೆಯ ಕುಷ್ಟಗಿ ವೃತ್ತದ ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಷ್ಟಗಿ ಪಟ್ಟಣದಲ್ಲಿ ಮನೆಗಳ ಮುಂದೆ ನಿಲ್ಲಿಸಿದ ಮೋಟಾರ್ ಸೈಕಲ್‌ಗಳನ್ನು ಹಾಗೂ ತೊಣಸಿಹಾಳ ಗ್ರಾಮದ ಹೊಲದಲ್ಲಿ ನಿಲ್ಲಿಸಿದ ಟ್ರ್ಯಾಕ್ಟರ್ ಮತ್ತು ಟ್ರಾಂ ಕಳ್ಳತನ ಮಾಡಿದ್ದ ಕಳ್ಳರನ್ನು ಬಂಧಿಸುವಲ್ಲಿ ಕುಷ್ಟಗಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಕಳ್ಳತನದ ಕುರಿತು ಪ್ರಕರಣಗಳು ದಾಖಲಾಗಿದ್ದವು. ಎಸ್ಪಿ ಶ್ರೀಮತಿ ಯಶೋದಾ ವಂಟಗೋಡಿ ಮತ್ತು DSP ಆರ್.ಎಸ್. ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಕುಷ್ಟಗಿ ವೃತ್ತದ ನಿಂಗಪ್ಪ ರುದ್ರಪ್ಪಗೋಳ ನೇತೃತ್ವದಲ್ಲಿ ಕುಷ್ಟಗಿ ಪೊಲೀಸ್ ಠಾಣೆಯ ಮೌನೇಶ ರಾಠೋಡ, ಮಾನಪ್ಪ ಪಿ.ಎಸ್.ಐ ,ಕುಷ್ಟಗಿ ಠಾಣೆಯ ಸಿಬ್ಬಂದಿಯವರಾದ ಪ್ರಶಾಂತ ಪಿಸಿ-161, ಹನಮಂತ ಪಿಸಿ-612, ಇನಾಯತ್ ಹೆಚ್.ಸಿ-22, ಚವಡಪ್ಪ ಹೆಚ್.ಸಿ-251 ರವರು ಹಾಗೂ ಅಧಿಕಾರಿಗಳು ಸೇರಿ ತಂಡವನ್ನು ರಚಿಸಲಾಗಿತ್ತು. ಟ್ರಾಕ್ಟರ ಕಳ್ಳರಾದ ಬಸವರಾಜ ರಮೇಶ ಉಪನಾಳ, ಅನೀಲ್ ಸಕ್ರಪ್ಪ ಚವ್ಹಾಣರನ್ನು ದಸ್ತಗಿರಿ ಮಾಡಿದ್ದು, ಆರೋಪಿತರಾದ
ಕಿರಣ ತಂದೆ ಶರಣಪ್ಪ ರಾಠೋಡ, ಪ್ರಜ್ವಲ್ ತಂದೆ ಈಶ್ವರಪ್ಪ ರಾಠೋಡ ಆರೋಪಿತರನ್ನು ಪತ್ತೆ ಮಾಡಿ, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸದರಿ ಆರೋಪಿತರಿಂದ 9 ಲಕ್ಷ ರೂಪಾಯಿ `ಬೆಲೆಬಾಳುವ ಟ್ರ್ಯಾಕ್ಟರ್ ಮತ್ತು ಬ್ರಾ ಹಾಗೂ ೮೦ ಸಾವಿರ ರೂಪಾಯಿ ಬೆಲೆಬಾಳುವ 2 ಮೋಟಾರ್ ಸೈಕಲ್ ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಟ್ರ್ಯಾಕ್ಟರ್ ಮತ್ತು ಟ್ರಾಂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಪರಾರಿ ಇರುವ ಆರೋಪಿತನಾದ ಜಗದೀಶ ಯಲ್ಲಪ್ಪ ಉಪನಾಳನ ಪತ್ತೆ ಕಾರ್ಯ ಮುಂದುವರೆದಿದೆ .
Comments are closed.