ಮಹಮ್ಮದ್ ರಿಜ್ವಾನ್ ಮುದ್ದಾಬಳ್ಳಿಯವರಿಗೆ ‘ತಬಲಾ ಮಾರ್ತಾಂಡ’ ಪ್ರಶಸ್ತಿ ಪ್ರದಾನ

0

Get real time updates directly on you device, subscribe now.

.
ಗಂಗಾವತಿ: ನಗರದ ಖ್ಯಾತ ತಬಲಾ ವಾದಕರಾದ ಮಹಮ್ಮದ್ ರಿಜ್ವಾನ್ ಮುದ್ದಾಬಳ್ಳಿಯವರಿಗೆ ಕಳೆದ ಮಾರ್ಚ್-೩೧ ರಂದು ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ‘ತಬಲಾ ಮಾರ್ತಾಂಡ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತಾಲೂಕಿನ ಬಸಾಪಟ್ಟಣ ಗ್ರಾಮದ ಶ್ರೀ ಶರಣಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಬಸನಗೌಡ್ರು ಮಾತನಾಡಿ ಶ್ರೀ ಶರಣಬಸವೇಶ್ವರ ೩೧ನೇ ವರ್ಷದ ಮಹಾರಥೋತ್ಸವದ ಪ್ರಯುಕ್ತ ಬಸವೇಶ್ವರ ಪುರಾಣವು ನಡೆದಿದ್ದು, ಪುರಾಣದಲ್ಲಿ ೨೧ ದಿನಗಳ ಪರ್ಯಂತ ತಬಲಾ ವಾದನ ಸೇವೆ ನೀಡಿದ ಮಹಮ್ಮದ್ ರಿಜ್ವಾನ್ ಮುದ್ದಾಬಳ್ಳಿಯವರು ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ಪುರಾಣ ಪ್ರವಚನದಲ್ಲಿ ತಬಲಾ ಸೇವೆ ನೀಡುತ್ತಾ ಬಂದಿದ್ದು, ಇದರ ಸವಿನೆನಪಿಗಾಗಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಮಹಮ್ಮದ್ ರಿಜ್ವಾನ್ ಮುದ್ದಾಬಳ್ಳಿಯವರು ನಾಡಿನಾಧ್ಯಂತ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದು, ಸರ್ಕಾರಿ ಕಾರ್ಯಕ್ರಮಗಳಲ್ಲಿಯೂ ತಬಲಾ ವಾದನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ಹಲವಾರು ಸಂಗೀತ ಶಾಲೆಗಳನ್ನು ತೆರೆದು ಮಕ್ಕಳಿಗೆ ಸಂಗೀತ ಹಾಗೂ ತಬಲಾ ಶಿಕ್ಷಣ ನೀಡುತ್ತಿದ್ದು, ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂಗೀತ ಕ್ಷೇತ್ರಕ್ಕೆ ಸಾಧನೆ ಮಾಡಿದ್ದಾರೆ. ಆ ಮೂಲಕ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮುದ್ದಾಬಳ್ಳಿ ಕುಟುಂಬದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ಕುಟುಂಬದ ಗೌರವವನ್ನು ಎತ್ತಿಹಿಡಿದಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭಧಲ್ಲಿ ಸಮಿತಿಯ ಸದಸ್ಯರಾದ ಮಲ್ಲಯ್ಯಸ್ವಾಮಿ ನೆಲ್ಲೂರು, ಮಲ್ಲಪ್ಪ ಬಾಳೆಕಾಯಿ, ವಿರುಪಾಕ್ಷಿಗೌಡ, ಭೀಮಣ್ಣ ಮಾಸ್ತರ, ತಿಮ್ಮಣ್ಣ, ಶಿವಮೂರ್ತಯ್ಯಸ್ವಾಮಿ, ಚನ್ನಯ್ಯಸ್ವಾಮಿ, ಮಾದಿನಾಳ ಗೌಡ್ರು, ಪುರಾಣ ಪ್ರವಚನಕಾರರಾದ ಶಿವಲಿಂಗಯ್ಯಶಾಸ್ತ್ರಿ, ಗವಾಯಿಗಳಾದ ಡಾ. ತಿಮ್ಮಣ್ಣ ಭೀಮರಾಯ, ದೇವಸ್ಥಾನದ ಅರ್ಚಕರಾದ ಮಾರ್ಕಂಡಯ್ಯಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: