ಏ.4 ರಂದು ನಡೆಯಬೇಕಿದ್ದ ಬಾಲ್ಯವಿವಾಹದಿಂದ 5 ಬಾಲಕಿಯರ ರಕ್ಷಣೆ
ಕೊಪ್ಪಳ ತಾಲ್ಲೂಕಿನ ಜಿನ್ನಾಪುರ ತಾಂಡದ ದೇವಸ್ಥಾನದಲ್ಲಿ ನಡೆಯಬೇಕಾಗಿದ್ದ 5 ಅಪ್ರಾಪ್ತ ವಯಸ್ಸಿನ ಬಾಲಕಿಯರ ವಿವಾಹವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ತಡೆಯಲಾಗಿದ್ದು, ಬಾಲಕಿಯರ ಪೋಷಣೆ ಮತ್ತು ರಕ್ಷಣೆಗಾಗಿ ಉದ್ದೇಶದಿಂದ ಅವರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ.
ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ಕುರಿತು ಹಾಗೂ ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಪೋಷಕರಿಗೆ ತಿಳುವಳಿಕೆಯನ್ನು ನೀಡಿ, ಐವರು ಬಾಲಕಿಯರಿಗೆ 18 ವರ್ಷ (ಜನ್ಮ ದಿನಾಂಕ: (1) 27.07.2006 ವಯಸ್ಸು :17-ವರ್ಷ 8 ತಿಂಗಳು, (2) 01.07.2008 ವಯಸ್ಸು: 15 ವರ್ಷ, (3) 10.04.2008 ವಯಸ್ಸು: 15 ವರ್ಷ 11 ತಿಂಗಳು, (4) 15.08.2009 ವಯಸ್ಸು:14 ವರ್ಷ 7 ತಿಂಗಳು, (5) 26.11.2006 ವಯಸ್ಸು :17 ವರ್ಷ 4 ತಿಂಗಳು) ಪೂರ್ಣಗೊಳ್ಳದ ಕಾರಣ ಬಾಲಕಿಯರನ್ನು ರಕ್ಷಿಸಿ, ಪೋಷಣೆ ಮತ್ತು ರಕ್ಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.
Comments are closed.