ಅನಧಿಕೃತ ಮರಳು ಸಾಗಾಣಿಕೆದಾರರಿಗೆ ಎಚ್ಚರಿಕೆ
ಕೊಪ್ಪಳ ತಾಲ್ಲೂಕಿನ ಅಳವಂಡಿ ಹೋಬಳಿಯ ಕೇಸಲಾಪುರ, ಹಲವಾಗಲಿ, ನಿಲೋಗಿಪುರ, ಹಳೇನಿಲೋಗಿಪುರ ಮತ್ತು ತಿಗರಿ ಗ್ರಾಮ ವ್ಯಾಪ್ತಿಯ ತುಂಗಾಭದ್ರಾ ನದಿಯಲ್ಲಿ ಬೇಸಿಗೆ ನಿಮಿತ್ತ ನೀರಿನ ಹರಿವು ಕಡಿಮೆಯಾಗಿದ್ದು, ಮರಳಿನ ಸಂಚಯವಾಗಿದೆ. ನದಿ ಪಾತ್ರ ಮತ್ತು ತುಂಗಾಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ (Project Area) ಅನಧಿಕೃತವಾಗಿ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ನಡೆಯುತ್ತಿದ್ದು, ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವತಿಯಿಂದ ನಿರಂತರ ಗಸ್ತು ಪಹರೆ ನಡೆಸಿ ವಶಪಡಿಸಿಕೊಳ್ಳಲಾಗಿದ್ದು, ಮರಳಿನ ದಾಸ್ತಾನನ್ನು ವಿಲೇವಾರಿ ಮಾಡಲಾಗುತ್ತಿದೆ.
ಆದ್ದರಿಂದ ಅಳವಂಡಿ ಹೋಬಳಿಯ ಕೇಸಲಾಪುರ, ಹಲವಾಗಲಿ, ನಿಲೋಗಿಪುರ, ಹಳೇನಿಲೋಗಿಪುರ ಮತ್ತು ತಿಗರಿ ಗ್ರಾಮಗಳ ಗ್ರಾಮಸ್ಥರು ಅನಧಿಕೃತ ಮರಳು ಎತ್ತುವಳಿ ಮತ್ತು ಸಾಗಾಣಿಕೆ ಚಟುವಟಿಕೆ ಯತ್ನಗಳನ್ನು ಈ ಕೂಡಲೇ ಕೈಬಿಡಬೇಕು. ತಪ್ಪಿದಲ್ಲಿ ಟ್ರಾಕ್ಟರ್ ವಾಹನಗಳ ಮಾಲೀಕರು ಮತ್ತು ಚಾಲಕರ ವಿರುದ್ಧ ಜಿಲ್ಲಾ ಮರಳು ಉಸ್ತುವಾರಿ ಸಮಿತಿ/ ತಾಲೂಕು ಮರಳು ಉಸ್ತುವಾರಿ ಸಮಿತಿ ಹಾಗೂ ಗ್ರಾಮ ಖನಿಜ ಉಸ್ತುವಾರಿ ಸಮಿತಿಗಳ ಸದಸ್ಯ ಇಲಾಖೆಗಳ ಸಕ್ಷಮ ಅಧಿಕಾರಿಗಳ ಸಹಯೋಗದಲ್ಲಿ ದಂಡ ವಿಧಿಸಿ/ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.