ಸಚಿವ ತಂಗಡಗಿ ಹೇಳಿಕೆ ತಿರುಚಿ ವಿವಾದ ಸೃಷ್ಟಿಸಿದ ಬಿಜೆಪಿ : ಕೃಷ್ಣ ಇಟ್ಟಂಗಿ
ಕೊಪ್ಪಳ : ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿವರಾಜ ತಂಗಡಗಿ ಅವರ ಹೇಳಿಕೆಯನ್ನು ತಿರುಚಿ ವಿವಾದ ಸೃಷ್ಟಿಸಿದ ಬಿಜೆಪಿ ನಡೆಯನ್ನು ಖಂಡಿಸುವುದಾಗಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ ಹೇಳಿದರು.
ಅವರು ಬುಧುವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಕಾರಟಗಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಶಿವರಾಜ್ ತಂಗಡಗಿ ಅವರು, ‘ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾತು ತಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ. ಈಗಲೂ ಮೋದಿ ಜಪ ಮಾಡುತ್ತಿರುವ ಯುವಜನತೆಯ ಕೆನ್ನೆಗೆ ಬಿಗಿದು ವಾಸ್ತವ ಏನೆಂಬುದನ್ನು ಮನವರಿಕೆ ಮಾಡಿಸಿ’ ಎಂದಿದ್ದಾರೆ,ಶಿವರಾಜ ತಂಗಡಗಿ ಅವರು ಆಡಿದ್ದು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಅಲ್ಲ ಈ ನಾಡಿನ ಯುವಜನತೆ, ಉದ್ಯೋಗದ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಿದ್ದರೂ, ಅವರನ್ನು ಈ ವಿಷಯದಿಂದ ಅನಗತ್ಯ ಹಾಗೂ ನಗಣ್ಯ ವಿಷಯಗಳ ಕಡೆ ಸೆಳೆದು. ಅವರನ್ನು ಮತ್ತಷ್ಟು ದುಃಸ್ಥಿತಿಗೆ ತಳ್ಳುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ, ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಈಡೇರದಿರುವ ಕುರಿತು ಬಿಜೆಪಿ ಚರ್ಚಿಸಬೇಕಿತ್ತು. ಅದು ಬಿಟ್ಟು. ಸಚಿವರು ಸಾತ್ವಿಕ ಆಕ್ರೋಶದಲ್ಲಿ ನುಡಿದ ‘ಮಾತಿಗೆ ತಪ್ಪಿದ್ದರೂ, ಇನ್ನೂ ಮೋದಿ ಜಪ ಮಾಡುವ ಯುವಜನತೆಯ ಕೆನ್ನೆಗೆ ಬಿಗಿದು ವಾಸ್ತವದ ಅರಿವು ಮೂಡಿಸಿ’ ಎಂಬ ಅಂಶವನ್ನಷ್ಟೇ ಮುಂದು ಮಾಡಿ. ಇದು ವಿವಾದಾತ್ಮಕ ಹೇಳಿಕೆ ಎಂಬAತೆ ಬಿಂಬಿಸುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದರು.
ಕಾAಗ್ರೆಸ್ ಪಕ್ಷದ ಸೇವಾದಳದ ರಾಜ್ಯ ಉಪಾಧ್ಯಕ್ಷ ಜಾಕೀರಹುಸೇನ ಕಿಲ್ಲೇದಾರ ಮಾತನಾಡಿ ಪ್ರತಿ ಸಲ ಚುನಾವಣೆ ಸಂದರ್ಭದಲ್ಲಿ. ಇಂತಹ ವಿಷಯಗಳನ್ನು ವಿವಾದಕ್ಕೆ ತಿರುಗಿಸುವ ಕೆಲಸವನ್ನು ಬಿಜೆಪಿ ಮಾಡುತ್ತಾ ಬಂದಿದೆ, ಬಿಜೆಪಿಗೆ ನಿಜವಾಗಿಯೂ ಹೊಣೆಗಾರಿಕೆ ಎಂಬುದೇನಾದರೂ ಇದ್ದರೆ ಇಂತಹ ಅಭಿವೃದ್ಧಿ ಪರ ವಿಷಯಗಳನ್ನು ಮುಂದಿಟ್ಟುಕೊAಡು ಜನರ ಬಳಿ ಹೋಗಲಿ ಅದು ಬಿಟ್ಟು ಅಭಿವೃದ್ಧಿ ವಿಷಯಗಳನ್ನೇ ವಿವಾದದ ವಿಷಯಗಳನ್ನಾಗಿಸಲು ಮುಂದಾದರೆ ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರಡ್ಡಿ ಗಲಬಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕಾಟನ್‌ಪಾಶ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟನ್ ಉಪಸ್ಥಿತರಿದ್ದರು.
Comments are closed.