ಗ್ಯಾರಂಟಿ ಯೋಜನೆಗಳು ಸಮರ್ಥವಾಗಿ ನಡೆಯುತ್ತಿವೆ : ಜ್ಯೋತಿ ಹೇಳಿಕೆ
ಕೊಪ್ಪಳ : ಬಿಜೆಪಿ ಅವರು ಕಾಂಗ್ರೆಸ್ ಸರಕಾರದ ಮೇಲೆ ಸುಳ್ಳು ಗೂಭೆ ಕೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ, ರಾಜ್ಯದ ಕಾನೂನು ಅತ್ಯಂತ ಸುವ್ಯವಸ್ಥಿತವಾಗಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಗ್ಯಾರಂಟಿ ಪ್ರಾಧಿಕಾರ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ವಿಪ ಸದಸ್ಯೆ ಹೇಮಲತಾ ನಾಯಕ ಮಾಧ್ಯಮಗೋಷ್ಠಿ ನಡೆಸಿ ಸುಳ್ಳುಗಳನ್ನು ಉದುರಿಸಿದ್ದಾರೆ, ಬಿಜೆಪಿ ಅಂತಹ ಸುಳ್ಳುಗಳಿಂದಲೇ ಹತ್ತು ವರ್ಷ ಜನರನ್ನು ಮೂರ್ಖರನ್ನಾಗಿ ಮಾಡಿದ್ದು ಈಗ ಅವು ನಡೆಯಲ್ಲ ಎಂದು ಟಾಂಗ್ ನೀಡಿದ್ದಾರೆ.
ಪದೇ ಪದೇ ಗ್ಯಾರಂಟಿಗಳ ಆಸರೆಯಿಂದ ಕಾಂಗ್ರೆಸ್ ಅಧಿಕಾರಕ್ಕೇರಿದೆ ಎನ್ನುತ್ತಾ ಬಿಜೆಪಿ ತನ್ನ ಅವಧಿಯ ಬ್ರಹ್ಮಾಂಡ ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಆರಂಭದಿಂದಲೇ ಮಾಡುತ್ತಿದೆ. ಗ್ಯಾರಂಟಿಗಳನ್ನು ಘೋಷಿಸಿದಂತೆ ಯಥಾವತ್ತಾಗಿ ಜಾರಿ ಮಾಡಲಾಗಿದೆ, ರಾಜ್ಯದ ಜನತೆಗೆ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ವಿಶ್ವಾಸ ಇದೆ, ಅದರ ಲಾಭ ಪಡೆದವರಿಗೆ ಗೊತ್ತಿದೆ, ಬಿಜೆಪಿ ಬೆಂಬಲಿಸಿದ ಮಹಿಳೆಯರು ಸಹ ರಾಜ್ಯ ಕಾಂಗ್ರೆಸ್ ಬೆಂಬಲಿಸುವ ವಿಚಾರ ತಿಳಿದು ಭಯದಿಂದ ಬಿಜೆಪಿ ಮಾತನಾಡುತ್ತಿದೆ, ಸಿದ್ದರಾಮಯ್ಯ ಅವರು ಗ್ಯಾರಂಟಿ ಜೊತೆಗೆ ಈ ವರ್ಷ ಅಭಿವೃದ್ಧಿಯ ದಿಕ್ಸೂಚಿಯನ್ನೇ ನೀಡಿದ್ದಾರೆ, ಮಾಜಿ ತಾ. ಪಂ. ಅಧ್ಯಕ್ಷ ಬಾಲಚಂದ್ರನ್ ಅವರ ನೇತೃತ್ವದ ಗ್ಯಾರಂಟಿ ಸಮಿತಿ ಜನರಿಗೆ ಯೋಜನೆ ತಲುಪಿಸುವ ಕೆಲಸ ಮಾಡುತ್ತಿದೆ, ಕೆಲವೇ ದಿನಗಳಲ್ಲಿ ತಾಂತ್ರಿಕ ಧೀಷದಿಂದ ಯಾರಿಗಾದರೂ ಯೋಜನೆ ತಲುಪದಿದ್ದಲ್ಲಿ ಅವರಿಗೂ ಕೊಡಿಸಲು ಸಮಿತಿ ಆಗಿದೆ ಅಲ್ಲದೇ ಕಾಂಗ್ರೆಸ್ ಒಂದೇ ವರ್ಗದ ಓಲೈಕೆಯಲ್ಲಿ ತೊಡಗಿದೆ ಎಂಬುದು ಕೇವಲ ಬಿಜೆಪಿಯ ಚುನಾವಣೆಯ ಅಜೆಂಡಾ, ಪ್ರಜಾಪ್ರಭುತ್ವದ ಅರ್ಥವೇ ಬಿಜೆಪಿಗೆ ಗೊತ್ತಿಲ್ಲ.
ವಿದಾನಸೌಧದ ಒಳಗೆ ದೇಶದ್ರೋಹಿ ಘೋಷಣೆ ಕೂಗಿದ ವಿಚಾರವನ್ನು ತನಿಖಾ ಸಂಸ್ಥೆಗೆವಹಿಸಿದ್ದು ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಘೋಷಿಸಿದ ಗ್ಯಾರಂಟಿಗಳಿಗೆ ರಾಜ್ಯದ ಜನತೆಯ ತೆರಿಗೆ ಹಣವನ್ನು ಕೊಡಬೇಕೆ ಹೊರತು ಮೋದಿ ಕೊಡುತ್ತಾರೆಯೇ ಎಂದು ಪ್ರಶ್ನಿಸಿರುವ ಅವರು ಜಿಎಸ್‌ಟಿ ರಿಟರ್ನ್ಸ್ ಕೊಡಿಸುವ ಧೈರ್ಯ ಇಲ್ಲದವರು ಇಲ್ಲಿ ಮಾತನಾಡುತ್ತಾರೆ, ತಮ್ಮ ಕಾರ್ಯಕರ್ತರಿಗೆ ಬೂಟಿನಲ್ಲಿ ಹೊಡೆಯುವ ಇವರು ಜನಸಾಮಾನ್ಯರನ್ನು ಬಿಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಿರುವ ಒಂದು ವರ್ಷದ ಹಿಂದೆ ಬಿಜೆಪಿ ಸರಕಾರದಲ್ಲಿ ಇದ್ದ ಪೊಲೀಸರೇ ಈಗಲೂ ಇದ್ದಾರೆ, ನಮ್ಮ ರಾಜ್ಯದ ಪೊಲೀಸರನ್ನು ಅವಮಾನಿಸುವ ಕೆಲಸ ಇವರಿಂದ ಆಗಿದೆ, ಗ್ಯಾರಂಟಿಗಳ ಮೂಲಕ ಜನರಿಗೆ ಮೋದಿಶಾ ನೀಡಿದ ಬರೆಯನ್ನು ಸ್ವಲ್ಪ ತಗ್ಗಿಸಲು ನೇರವಾಗಿ ಫಲಾನುಭವಿ ಖಾತೆಎ ಡಿಬಿಟಿ ಮೂಲಕ ಸಹಾಯ ಮಾಡುತ್ತಿದ್ದು ಜನಪರ ಆಡಳಿತ ನೀಡಿದೆ, ಗ್ಯಾರಂಟಿಗಳನ್ನು ಪುಗಸಟ್ಟೆ ಯೋಜನೆ ಅನ್ನುವ ಮೂಲಕ ಬಿಜೆಪಿ ಬಡ ಮಧ್ಯಮ ವರ್ಗದ ಜನರನ್ನು ಅಣಕಿಸುತ್ತಿದೆ, ಅವರು ಕಾರ್ಪೋರೇಟ್ ಕಂಪನಿಗಳ ದಾಸರಾಗಿದ್ದು, ಜನಸಾಮಾನ್ಯರಿಗೆ ಸಹಾಯ ಮಾಡಿದರೆ ಸಹಿಸಿಕೊಳ್ಳದ ನೀಚ ಸಂಸ್ಕೃತಿ ಉಳ್ಳವರು ಎಂದು ಕಿಡಿ ಕಾರಿದ್ದಾರೆ. ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಹನ್ನೊಂದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ, ಅದಕ್ಕೆ ಅವರು ಹ್ಯಾಟ್ರಿಕ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮುಚ್ಚುತ್ತಿದೆ ಎಂಬ ಗುಳಗಣ್ಣವರ ಹೇಳಿಕೆ ಹಾಸ್ಯಾಸ್ಪದವಾಗಿದೆ, ಅದು ಸ್ಥಳಿಯ ಆಡಳಿತದ ವ್ಯಾಪ್ತಿಗೆ ಬರುವ ಯೋಜನೆ ಆಗಿದೆ, ಇನ್ನು ಕಕ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ನೂರಾರು ಅಂತಹ ಘಟಕಗಳನ್ನು ನೀತಿ ಸಂಹಿತೆ ಮುಗಿದ ತಕ್ಷಣ ಜಾರಿ ಮಾಡಲಾಗುತ್ತಿದೆ, ನೀರಿನ ಟ್ಯಾಂಕರ್‌ಗಳು ಖಾಸಗಿ ಜನರು ನಡೆಸುವರು ಅದು ಸರಕಾರಕ್ಕೆ ಸಂಬಂದವೇ ಇಲ್ಲ. ಜನರ ದಿಕ್ಕು ತಪ್ಪಿಸುವ ಹೇಳಿಕೆ ಕೊಡುವದನ್ನು ಬಿಟ್ಟು ಜನರಿಗೆ ಒಳ್ಳೆಯದನ್ನು ಮಾಡಿದಾಗ ಬೆಂಬಲಿಸಿ ಪ್ರಜಾಪ್ರಭುತ್ವದ ಮಹತ್ವ ಉಳಿಸಿ ಎಂದು ಜ್ಯೋತಿ ಗೊಂಡಬಾಳ ಕುಟುಕಿದ್ದಾರೆ.
Comments are closed.