ಅಂತರ ಜಿಲ್ಲಾ ಸುಲಿಗೆ ಹಾಗೂ ಮನೆಗಳ್ಳರ ಬಂಧನ

Get real time updates directly on you device, subscribe now.

ಕನಕಗಿರಿ: ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಗ್ಗೆ ಸುಮಾರು 1 ತಿಂಗಳದಿಂದ ಕುರಿ ಕಳ್ಳತನ, ಮನ ಕಳ್ಳತನದಂತಹ ಹಲವಾರು ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಅವುಗಳನ್ನು ಪತ್ತೆ ಹಚ್ಚುವ ಸಲುವಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಪ್ಪಳ, ಡಿ.ಎಸ್.ಪಿ. ಗಂಗಾವತಿ ರವರ ಮಾರ್ಗ ದರ್ಶನದಲ್ಲಿ ಜಗದೀಶ ಕೆ.ಜಿ. ಪಿ.ಐ. ಕನಕಗಿರಿ ರವರ ನೇತೃತ್ವದಲ್ಲಿ ಬಷೀರ್ ಅಹ್ಮದ ಪಿ.ಎಸ್.ಐ., ಕ. ಅನಿಲಕುಮಾರ ಎ.ಎಸ್.ಐ., ಕ. ಕೃಷ್ಣಾ ಕಿಶೋರ್ ಹೆಚ್ ಸಿ-33, ಪರಶುರಾಮ ಹೆಚ್ ಸಿ-201, ಬಸವರಾಜ ಪಿಸಿ-128, ರಮೇಶ ಚೌಡಕಿ ಪಿಸಿ-15, ಶರೀಪ ಸಾಹೇಬ ಪಿಸಿ-39 ಹಿರೇ ಲಿಂಗಪ್ಪ ಪಿಸಿ-45, ಪ್ರಭಾಕರ ಪಿಸಿ-46, ಕೊಟ್ರೇಶ ಪಿಸಿ-230, ಶ್ರೀಮತಿ ನಿಂಗಮ್ಮ ಮಹಿಳಾ ಪಿಸಿ-245 ರವರನ್ನೊಳಗೊಂಡ 02 ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ಕೈಕೊಳ್ಳಲಾಗಿ ಕನಕಗಿರಿ ಠಾಣೆಯಲ್ಲಿ ದಾಖಲಾದ 1) ಗುನ್ನ ನಂ.77/2023 ಕಲಂ 457 380 ಐಪಿಸಿ, 2) ಗುನ್ನೆ ನಂ.141/2022 ಕಲಂ 379 ಐಪಿಸಿ 3) ಗುನ್ನೆ ನಂ.72/2023 ಕಲಂ 457 380 427 ಐಪಿಸಿ ಪ್ರಕರಣಗಳಲ್ಲಿ ಆರೋಪಿತರಾದ 1) ಅಮರೇಶ ಮಾರಪ್ಪ ಮೋಡಿಕಾರ , ಶಿವು ತಂದೆ ವಂಕಟರಮಣ ಮೋಡಿಕಾರ, ರನ್ನು 27-06-2023 ರಂದು ಬೆಳಿಗ್ಗೆ 08-30 ಗಂಟೆಗೆ ಕಾರಟಗಿ ರಸ್ತೆಯ ನವಲಿ ಗ್ರಾಮದ ಹತ್ತಿರ ಆರೋಪಿತರು ತಮ್ಮ ಪಿಕ್‌ಅಪ್ ವಾಹನ ನಂ.ಕೆಎ-35/ಬಿ-9264 ನೇದ್ದರಲ್ಲಿ ಅತೀ ವೇಗವಾಗಿ ಬರುತ್ತಿರುವಾಗ ಸಂಶಯ ಬಂದು ವಾಹನವನ್ನು ಹಿಡಿದು ನಿಲ್ಲಿಸಿ, ಅದರಲ್ಲಿರುವ ಮೇಲ್ಕಂಡ ಆರೋಪಿತರನ್ನು ವಿಚಾರಿಸಲಾಗಿ ಸರಿಯಾದ ಮಾಹಿತಿ ಕೊಡದೇ ಇರುವದರಿಂದ ಅವರನ್ನು ಠಾಣೆಗೆ ಕರೆ ತಂದು ಕುಲಂಕುಶವಾಗಿ ವಿಚಾರಿಸಲಾಗಿ, ಸದ್ರಿಯವರು ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಗಿರಿ, ನವಲಿ, ಚಿರ್ಚನಗುಡ್ಡಾ ಗ್ರಾಮಗಳಲ್ಲಿ ಮನೆ ಕಳ್ಳತನ, ಕುರಿ ಕಳ್ಳತನ ಬಾರ್ ಶಾಪ್ ಕಳ್ಳತನ ಮಾಡಿದ್ದು, ಅಲ್ಲದೇ ಇನ್ನೂ ಕಾರಟಗಿ, ಬೇವೂರು, ಲಿಂಗಸಗೂರ, ತಾವರಗೇರಾ, ಠಾಣಾ ವ್ಯಾಪ್ತಿಗಳಲ್ಲಿಯ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಹಾಗೂ ಇವರ ಸಂಗಡ ಇನ್ನೂ 03 ಜನರು ಅಪಾದಿತರು ಸೇರಿ ಕಳ್ಳತನಗಳನ್ನು ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಇವರಿಂದ ನಗದು ಹಣ ರೂ.46000/- ಗಳನ್ನು, ರೂ.46000/- ಬೆಲೆ ಬಾಳುವ 8 ಗ್ರಾಂ ಬಂಗಾರದ ಆಭರಣಗಳನ್ನು, ಹಾಗೂ ಒಂದು ಬುಲೋರೋ ಪಿಕ್‌ ಅಪ್ ವಾಹನ ಅಂದಾಜ ಕಿಮ್ಮತ್ತು ರೂ. 9 ಲಕ್ಷ ಬೆಲೆ ಬಾಳುವದನ್ನು ಒಟ್ಟು ರೂ.9,92,000/- ರೂ ಬೆಲೆ ಬಾಳವ ವಸ್ತು, ವಾಹನ, ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ತಲೆ ಮರೆಸಿಕೊಂಡಿರುವ ಆರೋಫಿತರ ಶೋಧ ಕಾರ್ಯ ಮುಂದುವರಿದಿರುತ್ತದೆ. ವಶಕ್ಕೆ ಪಡೆದುಕೊಂಡಿರುವ ಆರೋಪಿತರನ್ನು ನ್ಯಾಯಾಲಯಕ್ಕೆ ಬಂಧನಕ್ಕೆ ಕಳುಹಿಸಿದ್ದು, ಸದರಿ ಪ್ರಕರಣಗಳಲ್ಲಿ ಕಳ್ಳತನ ಮಾಡಿದ ಆರೋಪಿತರನ್ನು ಮತ್ತು ಕಳ್ಳತನ ಮಾಡಿ ಕೃತ್ಯಕ್ಕೆ ಬಳಸಿದ ಬುಲೋರೋ ಪಿಕ್‌ಅಪ್ ವಾಹನ, ಬಂಗಾರ/ಬೆಳ್ಳಿ ಸಾಮಾನುಗಳನ್ನು ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತ ಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: