ನಗರಾಭಿವೃದ್ದಿ ಪ್ರಾದಿಕಾರದ ಅಧ್ಯಕ್ಷತೆ ಯಾರ ಪಾಲಿಗೆ ?
ಕೊಪ್ಪಳ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕೊಪ್ಪಳದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಾದಿಗೆ ಸಾಕಷ್ಟು ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಸರ್ಕಾರದಲ್ಲಿ ಮಹಾಂತೇಶ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು ಈಗ ಕಾಂಗ್ರೆಸ್ ನಲ್ಲಿ ಸಾಕಷ್ಟು ಆಕಾಂಕ್ಷಿಗಳ ಹಿಂಡು ಅಧ್ಯಕ್ಷ ಗಾದಿಗಾಗಿ ಕಾದುಕುಳಿತಿದೆ. ಅದರಲ್ಲಿ ಮುಖ್ಯವಾಗಿ ಕಾಟನ್ ಪಾಷಾ, ಶಿವಕುಮಾರ್ ಶೆಟ್ಟರ್ , ಶ್ರೀನಿವಾಸ ಗುಪ್ತಾ, ಕೃಷ್ಣ ಇಟ್ಟಂಗಿ ಸೇರಿದಂತೆ ಇತರರು ಆಕಾಂಕ್ಷಿಗಳಾಗಿದ್ದಾರೆ ಈ ಹಿಂದೆ ಮುಸ್ಲಿಂ ಸಮುದಾಯದ ಎಸ್ ಆಸೀಪ್ ಅಲಿ ಹಾಗೂ ಸೈಯದ್ ಜುಲ್ಲುಸಾಬ ಖಾದ್ರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪ್ರಾಧಿಕಾರಕ್ಕಾಗಿ ಸಾಕಷ್ಟು ಜನ ಪ್ರಯತ್ನಪಟ್ಟಿದ್ದರಾದರೂ ಯಾರಿಗೂ ನೇಮಕ ಮಾಡಲಾಗಿರಲಿಲ್ಲ ಈ ಸಲ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಕೊಪ್ಪಳದಲ್ಲಿ ಸಹ ಕಾಂಗ್ರೆಸ್ ನ ಕೆ.ರಾಘವೇಂದ್ರ ಹಿಟ್ನಾಳ ಮೂರನೇ ಸಲ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ಜೊತೆ ಇರುವ ಸಾಕಷ್ಟು ಮುಖಂಡರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾದೆಯ ಮೇಲೆ ಕಣ್ಣಿಟ್ಟಿದ್ದಾರೆ. ಶಾಸಕ ರಾಘವೇಂದ್ರ ಹಿಟ್ನಾಳ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಿವಕುಮಾರ ಶೆಟ್ಟರ್ ಹಾಗೂ ಕಾಟನ್ ಪಾಷಾ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಜೊತೆಗೆ ಶಾಸಕರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಹಳಷ್ಟು ನಾಯಕರು ಸಹ ತಮ್ಮ ಅದೃಷ್ಟ ಪರೀಕ್ಷೆ ಮಾಡುವುದಕ್ಕೆ ಸಿದ್ಧವಾಗಿದ್ದಾರೆ ಇದರಲ್ಲಿ ಭಾಗ್ಯನಗರದ ಶ್ರೀನಿವಾಸ ಗುಪ್ತಾ, ಕೃಷ್ಣಾ ಇಟ್ಟಂಗಿ ಪ್ರಮುಖರಾಗಿದ್ದಾರೆ.
ಅಧ್ಯಕ್ಷಗಿರಿಯ ಆಕಾಂಕ್ಷೆಯ ಕುರಿತು ಮಾತನಾಡಿರುವ ಕಾಟನ್ ಪಾಷಾ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ೨-೩ ದಶಗಳಿಂದ ಸತತವಾಗಿ ಕೆಲಸ ಮಾಡುತ್ತಿದ್ದು ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ ಪಕ್ಷ ಸಂಘಟನೆ ಜೊತೆಗೆ ಕೊಪ್ಪಳದ ಮುಸ್ಲಿಂ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಪ್ರಮುಖ ಕಾರಣಕರ್ತನಾಗಿದ್ದೇನೆ. ಪಕ್ಷದ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ/ ಕೊಪ್ಪಳದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಅವಕಾಶ ಇರುವುದು ಕೇವಲ ನಗರಸಭೆ ಹಾಗೂ ಪ್ರಾಧಿಕಾರದಲ್ಲಿ ಮಾತ್ರ ಜಿಲ್ಲಾ ಪಂಚಾಯತ್ ಸೇರಿದಂತೆ ಇತರೆ ಅವಕಾಶಗಳು ಸಿಗುತ್ತಿಲ್ಲ. ಕಳೆದ ೨೦ ವರ್ಷಗಳಿಂದ ಈ ಕ್ಷಣದವರೆಗೆ ನಗರಸಭೆಯ ಅಧ್ಯಕ್ಷ ಗಾದೆ ದಕ್ಕಿಲ್ಲ ಕೇವಲ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ ಹೀಗಾಗಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಾಗಿದ್ದು ಖಂಡಿತವಾಗಿಯೂ ಈ ಸಲ ದೊರೆಯುವ ನಿರೀಕ್ಷೆ ಇದೆ ಎಂದು ಕಾಟನ್ ಪಾಷಾ ಹೇಳುತ್ತಿದ್ದಾರೆ. ೨೦೧೩ರಲ್ಲಿಯೇ ಮಾತು ಕೊಟ್ಟಿದ್ದರು ಕೆ.ಬಸವರಾಜ್ ಹಿಟ್ನಾಳ ಮಾತು ಕೊಟ್ಟರೆ ತಪ್ಪುವವರಲ್ಲ. ಅವರ ಮಾತಿನ ಮೇಲೆ ಭರವಸೆ ಇದೆ. ಹೀಗಾಗಿ ಖಂಡಿತ ಈ ಸಲ ನನಗೆ ಅವಕಾಶ ಸಿಕ್ಕೇ ಸಿಗುತ್ತದೆ ಇದು ನಮ್ಮ ಹಕ್ಕು ನಮ್ಮದೇ ಸಮುದಾಯದ ವ್ಯಕ್ತಿ ಚುನಾವಣೆಗೆ ನಿಂತರೂ ನಾವು ಮಾಡಿಲ್ಲ ಇಡೀ ಸಮುದಾಯ ಒಂದಾಗಿ ಕಾಂಗ್ರೆಸ್ ಬೆಂಬಲಿಸುವಲ್ಲಿ ನನ್ನ ಪಾತ್ರದೊಡ್ಡದಿದೆ ಇದು ಪಕ್ಷದ ಮುಖಂಡರಿಗೂ ಗೊತ್ತು ಎಲ್ಲರೂ ಕುಳಿತು ಮಾತನಾಡಿ ಒಂದು ನಿರ್ಣಯಕ್ಕೆ ಬರೋಣ ಎಂದು ಹೇಳಿದ್ದಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಕಾಟನ್ ಪಾಷಾರ ಆಪ್ತಸ್ನೇಹಿತ ಶಿವಕುಮಾರ್ ಶೆಟ್ಟರ್ ಸಹ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರ ಸಮುದಾಯದಿಂದ ಶಿವಕುಮಾರ್ ಶೆಟ್ಟರ್ ಆಕಾಂಕ್ಷಿಯಾಗಿದ್ದು ಕೇಳುವುದು ತಪ್ಪಲ್ಲ ಆದರೆ ಹೈಕಮಾಂಡ್ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎನ್ನುತ್ತಾರೆ.
ಭಾಗ್ಯನಗರದ ಉದ್ಯಮಿ ಕೆ.ಶ್ರೀನಿವಾಸ ಗುಪ್ತಾ ಸಹ ಈ ಸಲ ಪ್ರಾಧಿಕಾರದ ಅಧ್ಯಕ್ಷಗಾದೆಯ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ೩೦ ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಸೇವೆ ಮಾಡಿದ್ದೇನೆ. ಪಕ್ಷ ವಹಿಸಿದ ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಈ ಹಿಂದೆಯೂ ಸಹ ಪ್ರಾದಿಕಾರದ ಅಧ್ಯಕ್ಷ ಸ್ಥಾನದ ಬಗ್ಗೆ ಪೈಪೋಟಿ ನಡೆದಾಗ ಹಿರಿಯರಾದ ಸೈಯದ್ ಜುಲ್ಲುಸಾಬ್ ಖಾದ್ರಿಯವರಿದ್ದಾರೆ ಅವರ ನಂತರ ನಿಮಗೆ ನೀಡುತ್ತೇವೆ ಎಂದು ಪಕ್ಷದ ವರಿಷ್ಠರು ಹೇಳಿದ್ದರು. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ದನಾಗಿ ನಾನು ಹಿಂದೆ ಸರಿದಿದ್ದೆ. ೨೦೧೩ರಲ್ಲಿ ಅವಕಾಶ ಸಿಗಲಿಲ್ಲ. ನಾನು ಯಾವತ್ತೂ ಯಾವುದೇ ಸ್ಥಾನಮಾನಕ್ಕಾಗಿ ಕೇಳಿದವನಲ್ಲ. ಈ ಸಲ ಅವಕಾಶ ಇದೆ. ಖಂಡಿತ ಸಿಗುತ್ತದೆ ಮಾತು ಕೊಟ್ಟಿದ್ದಾರೆ ಮಾತಿನಂತೆ ನಡೆದುಕೊಳ್ಳುತ್ತಾರೆ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎನ್ನುವ ನಿರೀಕ್ಷೆ ಇದೆ ಎಂದು ಶ್ರೀನಿವಾಸ ಗುಪ್ತಾ ಹೇಳುತ್ತಾರೆ.
ಕಾಂಗ್ರೆಸ್ ಪಕ್ಷದ ಜೊತೆಗೆ ಇಡೀ ಸಮುದಾಯ ಇದೆ. ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ನಮ್ಮ ಪಾತ್ರವೂ ದೊಡ್ಡದಿದೆ. ಇವರೆಗೂ ನಮ್ಮ ಸಮುದಾಯಕ್ಕೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ದೊರೆತಿಲ್ಲ. ಈ ಸಲ ಕೊಡುತ್ತಾರೆ ಎನ್ನುವ ನಿರೀಕ್ಷೆ ಇದೆ ಎನ್ನುತ್ತಾರೆ ಇನ್ನೊರ್ವ ಮುಖಂಡ ಶಿವಕುಮಾರ್ ಶೆಟ್ಟರ್. ಈ ಹಿಂದೆ ಬೇರೆ ಸಮುದಾಯಗಳಿಗೆ ಕೊಟ್ಟಿದ್ದಾರೆ ನಗರದಲ್ಲಿ ದೊಡ್ಡ ಸಮುದಾಯ ನಮ್ಮದು ೧೦೦ಕ್ಕೆ ನೂರರಷ್ಟು ಕೊಟ್ಟೆ ಕೊಡುತ್ತಾರೆ ಎನ್ನುವ ಆತ್ಮವಿಶ್ವಾಸವನ್ನು ಶಿವಕುಮಾರ್ ಶೆಟ್ಟರ್ ವ್ಯಕ್ತಪಡಿಸುತ್ತಾರೆ.
ಇನ್ನೊರ್ವ ಕಾಂಗ್ರೆಸ್ ಮುಖಂಡ ಕೃಷ್ಣಾ ಇಟ್ಟಂಗಿ ಸಹ ಆಕಾಂಕ್ಷಿಯಾಗಿದ್ದಾರೆ. ದಶಕಗಳಿಂದ ಶಾಸಕ ರಾಘವೇಂದ್ರ ಹಿಟ್ನಾಳರ ತಂದೆ ಬಸವರಾಜ ಹಿಟ್ನಾಳರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಕೃಷ್ಣಾ ಇಟ್ಟಂಗಿ ಪಕ್ಷ ಸಂಘಟನೆಯಲ್ಲಿ ಡಿಸಿಸಿ ಸದಸ್ಯನಾಗಿ, ಜಿಲ್ಲಾ ಕಾರ್‍ಯದರ್ಶಿಯಾಗಿ,ಪ್ರದಾನ ಕಾರ್ಯದರ್ಶಿಯಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿರುವ ಕೃಷ್ಣಾ ಇಟ್ಟಂಗಿ ಈ ಸಲ ಪ್ರಾಧಿಕಾರದ ಅಧ್ಯಕ್ಷನಾಗುವುದು ಖಚಿತ ಎನ್ನುವ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ. ಪಕ್ಷದಲ್ಲಿ ಹಿರಿಯನಾಗಿದ್ದೇನೆ, ಪಕ್ಷದ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ, ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವವಿದೆ, ವಿವಿಧ ಸಂಘಟನೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ನಗರದ ಅಭಿವೃದ್ದಿಗೆ ನನ್ನದೇ ಆದ ಕನಸುಗಳು ಇವೆ. ಈ ಸಲ ನನಗೆ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಕೊಡುವ ವಿಶ್ವಾಸವಿದೆ. ಹಿರಿಯ ನಾಯಕರ ಒಲವು ಸಲ ನನ್ನ ಮೇಲಿದೆ ಎನ್ನುತ್ತಾರೆ.
ಇದರ ಜೊತೆಗೆ ಉದ್ಯಮಿ ಹಾಗೂ ಸಮಾಜ ಸೇವಕ ಕೆ.ಎಂ ಸಯ್ಯದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಾರಿಗೆ ಗಾದೆಯ ಮೇಲೆ ಕಣ್ಣಿಟ್ಟಿದ್ದಾರೆ ಇದಕ್ಕಾಗಿ ಬೆಂಗಳೂರು ಮಟ್ಟದಲ್ಲಿ ಲಾಭಿ ನಡೆಸುತ್ತಿರುವ ಕೆಎಂಸಿ ಕೊಪ್ಪಳದಲ್ಲಿ ಸಾಕಷ್ಟು ಸಮಾಜ ಸೇವೆ ಮಾಡಿದ್ದೇನೆ ಹಾಗೂ ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ ಶಾಸಕರ ಗೆಲುವಿನಲ್ಲಿ ನಮ್ಮದು ಪಾತ್ರವಿದೆ ಈ ಕಾರಣಕ್ಕಾಗಿ ಪ್ರಾಧಿಕಾರ ಇಲ್ಲವೇ ನಿಗಮ ಮಂಡಳಿಯ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಹೇಳುತ್ತಿದ್ದಾರೆ. ಇವರಷ್ಟೇ ಅಲ್ಲದೇ ಇನ್ನೂ ನಾಲ್ಕೈದು ಜನರ ಹೆಸರು ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯುತ್ತದೆಯೋ ಕಾದು ನೋಡಬೇಕು.
Comments are closed.