ಕಡೆ ಬಾಗಿಲು ಚೆಕ್ ಪೋಸ್ಟ್ ಹತ್ತಿರ ದಾಖಲೆಗಳಿಲ್ಲದೆ ಸಾಗಣೆ ಮಾಡುತ್ತಿದ್ದ ರೂ. 32,92,500 ವಶ

Get real time updates directly on you device, subscribe now.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರ ನೇತೃತ್ವದಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಕೊಪ್ಪಳ ಉಪ ವಿಭಾಗಾಧಿಕಾರಿ ಗಳಾದ ಕ್ಯಾಪ್ಟನ್ ಮಹೇಶ ಎಸ್ ಮಾಲಗಿತ್ತಿ ಅವರ ಮಾರ್ಗದರ್ಶನದಲ್ಲಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಗಂಗಾವತಿ ವಿಧಾನಸಭಾ ಕ್ಷೇತ್ರ ಕಡೆ ಬಾಗಿಲು ಚೆಕ್ ಪೋಸ್ಟ್ ಹತ್ತಿರ ಯಾವುದೇ ದಾಖಲೆಗಳಿಲ್ಲದೆ ಸಾಗಣೆ ಮಾಡುತ್ತಿದ್ದ ರೂಪಾಯಿ 32,92, 500 ರೂಪಾಯಿಗಳು ಮೊತ್ತವನ್ನು ಚೆಕ್ ಪೋಸ್ಟ್ ಅಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿಯವರು ತಪಾಸಣೆ ಮಾಡಿ ವಶಪಡಿಸಿಕೊಂಡಿರುತ್ತಾರೆ .ಸದರಿ ವಿಷಯದ ಕುರಿತು ಸ್ಥಳಕ್ಕೆ ಮಾನ್ಯ ತಹಸೀಲ್ದಾರರು ಗಂಗಾವತಿ, ಪೊಲೀಸ್ ವೃತ್ತ ಆರಕ್ಷಕ ನಿರೀಕ್ಷಕರು ಎಂಸಿಸಿ ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಹಾಗೂ ಸದರಿ ವಿಷಯದ ಕುರಿತು ಮುಂದಿನ ಕ್ರಮಕ್ಕಾಗಿ ಇನ್ಕಮ್ ಟ್ಯಾಕ್ಸ್ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗಿದ್ದು  ಬಳ್ಳಾರಿ ಜಿಲ್ಲೆಯ ಶಿರಗುಪ್ಪಾ ತಾಲೂಕಿನ ನಡವಿ ಗ್ರಾಮದಿಂದ ಹೊಸಪೇಟೆಗೆ ಸಾಗಿಸುತ್ತಿದ್ದ ಹಣ ಕಾರ ಪರೀಶೀಲನೆ ನಡೆಸಿದ ವೇಳೆ ಪತ್ತೆಯಾದ ಹಣ  ಪೀರಸಾಬ ಎನ್ನುವವರ ಹಣ ಸಾಗಿಸುತ್ತಿದ್ರು. ಹಣ ವಶಕ್ಕೆ ಪಡೆದ ವಿಚಾರಣೆ ನಡೆಸಿದ ಪೋಲೀಸರು

Get real time updates directly on you device, subscribe now.

Comments are closed.

error: Content is protected !!
%d bloggers like this: