ಶ್ರೀಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಡಾ.ಸಿದ್ದಾರ್ಥ ಪಾಟೀಲ್ ಸಾಧನೆ
ರಾಜೀವಗಾಂಧಿ ಆರೋಗ್ಯವಿಜ್ಞಾನಗಳ ವಿಶ್ವವಿದ್ಯಾಲಯದ ತಂಡಕ್ಕೆ ಆಯ್ಕೆಯಾಗಿ ಅಂತರ ವಿಶ್ವವಿದ್ಯಾಲಯಗಳ ರಾಷ್ಟ್ರಮಟ್ಟದ ನೆಟ್ಬಾಲ್ಪಂದ್ಯಾಟಗಳಲ್ಲಿ ಪಾಲ್ಗೊಂಡು ಉತ್ತಮಪ್ರದರ್ಶನ ನೀಡಿರುವ ಶ್ರೀಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಕೊಪ್ಪಳದ ಹೆಮ್ಮೆಯ ವಿದ್ಯಾರ್ಥಿಯಾದ ಡಾಸಿದ್ದಾರ್ಥ ಪಾಟೀಲ್ (ಗೃಹವೈದ್ಯ)ನ ಸಾಧನೆ ಉತ್ತಮವಾದದ್ದು , ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಆಯುರ್ವೇದ ವಿದ್ಯಾರ್ಥಿಗಳಿಗೆ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ತಂಡಕ್ಕೆ ಆಯ್ಕೆಯಾಗುವುದು ಅತ್ಯಂತಕಷ್ಟಕರ , ಅಂತಹದರಲ್ಲಿ ಈ ಸಾಧನೆಯನ್ನು ಸತತ ಎರಡನೇ ಬಾರಿಗೆ ಮಾಡಿದಂತ ಡಾಸಿದ್ದಾರ್ಥ ಪಾಟೀಲ್ನನ್ನು ಮಹಾವಿದ್ಯಾಲಯದ ಆಡಳಿತಮಂಡಳಿ , ಪ್ರಾಚಾರ್ಯರು , ನಿರ್ದೇಶಕರು , ಮತ್ತು ಸರ್ವಸಿಬ್ಬಂದಿ ಅಭಿನಂದಿಸಿದ್ದಾರೆ. ಮುಂಬರುವ ದಿನಗಳಲ್ಲಿ ನಮ್ಮ ಮಹಾ ವಿದ್ಯಾಲಯದಿಂದ ಅನೇಕವಿದ್ಯಾರ್ಥಿಗಳು ಈ ತರಹದಸಾಧನೆ ಮಾಡಲಿ ಎಂದುಪ್ರಾಚಾರ್ಯರಾದ ಡಾಬಿಎಸ್ಸವಡಿ ಆಶಿಸಿದ್ದಾರೆ.
Comments are closed.