ಹೊಸಪೇಟೆ ಸ್ಟೀಲ್ ಲಿಮಿಟೆಡ್ ಕಂಪನಿಯಲ್ಲಿ 53ನೇ ರಾಷ್ಟ್ರೀಯ ಸುರಕ್ಷತಾ ಸಪ್ತಾಹ ದಿನಾಚರಣೆ
Koppal 53ನೇ ರಾಷ್ಟ್ರೀಯ ಸುರಕ್ಷಾ ಸಪ್ತಾಹದ ಅಂಗವಾಗಿ 13 ರಂದು ಹೊಸಪೇಟೆ ಸ್ಟೀಲ್ ಲಿಮಿಟಡ್ ಕಂಪನಿಯ ಟೌನಶಿಪ್ ನ ಪ್ರೇಮ ಜ್ಯೋತಿ ಕಲಾ ಮಂದಿರದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಸುರಕ್ಷಾ ದಿನಾಚರಣೆಯ ವಣ೯ರಂಜಿತ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಂಪನಿಯ ಸಿ ಓ ಓ ಸುಭಾಂಕರ ಎ ಪಾಲ್ ವಹಿಸಿಕೊಂಡಿದ್ದರು , ಮುಖ್ಯ ಅತಿಥಿಗಳಾಗಿ ಕೊಪ್ಪಳ ವಿಭಾಗದ ಕಾಖಾ೯ನೆಗಳ ಉಪ ನಿದೆ೯ಶಕರಾದ ವಿಜಯಕುಮಾರವರು ಭಾಗವಹಿಸಿ ಸುರಕ್ಷತೆಯ ಪಾಲನೆ ಮತ್ತು ಅನುಷ್ಟಾನದ ಕುರಿತು ಕಾಯ೯ಕ್ರಮ ಉದ್ದೇಶಿಸಿ ಮಾತನಾಡಿದರು.
ಸಮಾರಂಭದ ವೇದಿಯ ಮೇಲೆ ಹೊಸಪೇಟೆ ಸ್ಟೀಲ್ ಲಿಮಿಟೆಡ್ ಕಂಪನಿಯ ವಿವಿಧ ಘಟಕದ ಅಧಿಕಾರಿಗಳಾದ ಚಂದ್ರಶೇಖರ್ ಬೆಲ್ಲದ ನಾಗರಾಜ್ ದುಂಡಿ, ಪಿ ಎಲ್ ಸತೀಶ್ ವಿಜಯಕುಮಾರ್ ಗುಪ್ತಾ, ಟಿ ಶ್ರೀನಿವಾಸಲು, ಶಂಕರಗೌಡರು, ಹಾಗೂ ಭಾಸ್ವರರಾಯ್ ಉಪಸ್ಥಿತರಿದ್ದರು, ಈ ಒಂದು ಸಮಾರಂಭದಲ್ಲಿ ಕಂಪನಿಯ ವಿವಿಧ ಘಟಕದ ಮುಖ್ಯಸ್ಥರು ಮತ್ತು ಸಮಸ್ತ ಸಿಬ್ಬಂದಿ ವಗ೯ ಭಾಗವಹಿಸಿದ್ದರು ರಾಷ್ಟ್ರೀಯ ಸುರಕ್ಷಾ ದಿನಾಚರಣೆ ನಿಮಿತ್ತ ಏಪ೯ಡಿಸಿದ್ದ ಸುರಕ್ಷತಾ ಸ್ಪಧೆ೯ಗಳಲ್ಲಿ ವಿಜೇತರಾದ ಕಂಪನಿಯ ನೌಕರರಿಗೆ ವೇದಿಕೆಯ ಮೇಲೆ ಉಪಸ್ಥಿತರಿದ್ದ ಗಣ್ಯರು ಪ್ರಶಸ್ತಿ ಫಲಕ ಮತ್ತು ಬಹುಮಾನವನ್ನು ನೀಡಿ ಗೌರವಿಸಿದರು, ಮತ್ತು ಈ ಸಂದರ್ಭದಲ್ಲಿ ಎಚ್ ಎಸ್ ಭಂಗಿ ಸುರಕ್ಷತೆಯ ಕುರಿತಾದ ಸುರಕ್ಷಾ ಗೀತೆಯನ್ನು ತಮ್ಮ ಅದ್ಭುತ ಕಂಠಸಿರಿಯ ಮೂಲಕ ಹಾಡಿ ಗಮನ ಸೆಳೆದರು,ಹಾಗೂ ಸುರಕ್ಷತಾ ವಿಭಾಗದ ಅಧಿಕಾರಿ ಚಂದ್ರಶೇಖರ್ ಬೆಲ್ಲದ ಈ ಒಂದು ಸಮಾರಂಭದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ನಿರೂಪಣೆಯನ್ನು ನಾಗಶ್ರೀ ಮತ್ತು ಪಾಯಲ್ ನಿವ೯ಹಿಸಿದರು,,,,,,,,,,,,,,,,,,
Comments are closed.