ಹೆಣ್ಣು ಮಕ್ಕಳನ್ನು ಮುಖ್ಯವಾಹಿನಿಗೆ ತಂದರೆ ಮಾತ್ರ ಸಮಾಜಅಭಿವೃದ್ಧಿ ಸಾಧ್ಯ. : ಗೌರಮ್ಮದೇಸಾಯಿ
ಹೆಣ್ಣು ಮಕ್ಕಳನ್ನು ಮುಖ್ಯವಾಹಿನಿಗೆ ತಂದರೆ ಮಾತ್ರ ಸಮಾಜಅಭಿವೃದ್ಧಿ ಸಾಧ್ಯ, ಎಕೇಂದರೆಸಮಾಜ ನಿಂತಿರುವುದೇ ಮಹಿಳೆಯರಿಂದ ಎಂದು ಕೊಪ್ಪಳ ಜಿಲ್ಲಾ ಪೋಕ್ಸೋ ನ್ಯಾಯಲಯದ ಸರಕಾರಿಅಭಿಯೋಜಕರಾದಗೌರಮ್ಮದೆಸಾಯಿಅವರು ಹೇಳಿದರು.
ನಗರದ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಳೇಜಿನಲ್ಲಿಶುಕ್ರವಾರದಂದುಕಾಲೇಜಿನ ಐಕ್ಯೂಎಸಿ ಘಟಕ ಮತ್ತು ಸಾಂಸ್ಕೃತಿಕ ಘಟಕಗಳ ಅಡಿಯಲ್ಲಿ ಹಮ್ಮಿಕೊಂಡಿದ್ದಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರುಮಾತನಾಡಿದರು.
ಹೆಣ್ಣು ಮಕ್ಕಳಿಗೆ ಜವಾಬ್ದಾರಿಇರಬೇಕು. ಪ್ರತಿಕುಟುಂಬದಲ್ಲಿ ಹೆಣ್ಣು ಮಕ್ಕಳ ಪಾತ್ರ ಬಹಳ ದೊಡ್ಡದು.ನಮಗೆ ಕೊಡುವ ಸ್ವತಂತ್ರವನ್ನು ಮಹಿಳೆಯರು ಸ್ವೇಚ್ಚವಾಗಿ ಬಳಸಿಕೊಳ್ಳಬಾರದು.ಮಹಿಳೆಯರು ಇಂದು ಅನೇಕ ಸಾಧನೆಗಳನ್ನು ಮಾಡಿ ಸಮಾಜಕ್ಕೆತೋರಿಸುತ್ತಿದ್ದಾರೆ.ಇಂದು ಮಹಿಳೆಯರು ರಾಜಕೀಯವಾಗಿ, ಶೈಕ್ಷಣಿಕವಾಗಿ, ಆಥೀಕವಾಗಿ ಮತ್ತು ಸಾಂಸ್ಕೃತಿಕವಾಗಿತಮ್ಮ ಪ್ರಾಭಲ್ಯಯವನ್ನುತೋರಿಸುತ್ತಿದ್ದಾರೆ.ಸಿಕ್ಕ ಅವಕಾಶಗಳನ್ನು ಉಪಯೋಗಮಾಡಿಕೊಳ್ಳಬೇಕು.ಯಾವುದಾದರೂ ಸಾಧನೆಗಳು ಮಾಡಬೇಕಾದರೆ ಬಹಳ ದಿನಗಳು ಬೇಕು. ವಿದ್ಯಾರ್ಥಿಗಳು ಲೇಖನ, ಕಥೆ, ಕವನ ಮತ್ತು ಹಾಡು ಗಳನ್ನು ಬರೆಯಬೇಕು. ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸಬೇಕು.ಗುರುಗಳು ಸಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು.ನಮ್ಮತಂದೆ ತಾಯಿಗಳ ಕನಸ್ಸುಗಳನ್ನು ನಾವು ಈಡೆರಿಸಬೇಕು. ಚನ್ನಾಗಿಓದಬೇಕು.ಸಮಾಜಕ್ಕೆಎನಾದರೂ ಸೇವೆ ಮಾಡಬೇಕು.ಪುಸ್ತಕಗಳನ್ನು ಓದಬೇಕು.ಜೀವನ ಬಹಳ ಇದೆ.ಅತೂರ ಪಡಬಾರದು.ಇಂದು ಹೆಣ್ಣು ಮಕ್ಕಳ ಸಂಖ್ಯೆಕಡಿಮೆಆಗುತ್ತಿದೆಎಂದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿರುವಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸುಮಿತ್ರಅವರು ಮಾತನಾಡುತ್ತ ಪ್ರತಿಯೊಬ್ಬ ಮಹಿಳೆಯರು ಸಾಧಕರೇ.ಪ್ರತಿಯೋಬ್ಬ ಮಹಿಳೆಯರು ತ್ಯಾಗ ಜೀವಿಗಳು.ಈ ತ್ಯಾಗದಗುಣ ಮಹಿಳೆಯರಿಗೆ ಹುಟ್ಟಿನಿಂದಲೇ ಬಂದಿರುತ್ತದೆ.ತಾಯಿಯು ನಮಗೆ ಮಾರ್ಗದರ್ಶಕರಾಗಿರುತ್ತಾರೆ.ಮಹಿಳೆಯರು ಅರ್ಥಿಕವಾಗಿ ಸಬಲೀಕರಣವಾಗಬೇಕು.ಆಗ ಮಾತ್ರ ನಮಗೆ ಹಕ್ಕುಗಳು ಸಿಗುತ್ತವೆ. ಮಹಿಳೆಯರು ಶಿಕ್ಷಣ ಮತ್ತುಉದ್ಯೋಗವನ್ನು ಪಡೆದುಕೊಳ್ಳಬೇಕು.ನಾವು ಇನ್ನೊಬ್ಬರ ಮೇಲೆ ಅವಲಂಬನೆ ಆಗಿರಬಾರದು.
ಇನ್ನೊಬ್ಬಅತಿಥಿಯಾಗಿರುವಇತಿಹಾಸ ವಿಭಾಗದಉಪನ್ಯಾಸಕಿಜಮುನಅವರು ಮಾತನಾಡುತ್ತಎಲ್ಲವನ್ನು ಸಹಿಸಿಕೊಳ್ಳುವ ಶಕ್ತಿ ಮಹಿಳೆಯರಲ್ಲಿದೆ.ಅದ್ದರಿಂದಅವರನ್ನು ಭೂಮಿತಾಯಿಗೆಹೋಲಿಕೆ ಮಾಡುತ್ತಾರೆ.ನಾವು ಲಿಂಗ ತಾರತಮ್ಯ ಮಾಡಬಾರದುಎಂದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿರುವ ಕಾಲೇಜಿನ ಪ್ರಾಚಾರ್ಯಡಾ.ಗಣಪತಿ ಲಮಾಣಿಯವರುಕುಟುಂಬ ಎನ್ನುವುದು ಸಮಾಜದಚಿಕ್ಕಚಿಕ್ಕ ಘಟಕಗಳು.ಇದರಲ್ಲಿ ಮಹಿಳೆಯರ ಪಾತ್ರ ಬಹಳ ಪ್ರಮುಖವಾದದು.ಕುಟುಂಬದಲ್ಲಿಮಕ್ಕಳ ಲಾಲನೆ ಪಾಲನೆ ಮಾಡುವುದುದೊಡ್ಡಜವಾಬ್ದಾರಿಯಾಗಿದೆ.ಪ್ರಾಚೀನ ಕಾಲದಿಂದ ಮಹಿಳೆಯರ ಹಕ್ಕುಗಳಿಗಾಗಿ ಬಸವಣ್ಣ, ಅಂಬೇಡ್ಕರ್, ರಾಜರಾಂ ಮೋಹನ್‌ರಾಯ್, ಗಾಂಧಿಜಿಅನೇಕರು ಹೋರಾಟ ಮಾಡಿದ್ದಾರೆ.ಇದರ ಫಲವಾಗಿ ಇಂದು ಮಹಿಳೆಯರಿಗೆ ಅನೇಕ ಹಕ್ಕುಗಳು ಸಿಕ್ಕಿವೆ. ಸತಿ- ಪತಿ ಸಂಬಂಧಅನೋನ್ಯವಾಗಿರಬೇಕು. ಮಹಿಳೆ ಸಮಾಜದ ಮತ್ತುಕುಟುಂಬದಒಂದು ಭಾಗಎಂದರು.
ಕಾರ್ಯಕ್ರಮದಲ್ಲಿಡಾ. ಹುಲಿಗೆಮ್ಮ, ಡಾ. ಅಶೋಕ ಕುಮರು, ಡಾ. ಪ್ರದೀಪ್‌ಕುಮಾರಅವರು ಮಾತನಾಡಿದರು.ಪತ್ರಿಕೋದ್ಯಮ ವಿಭಾಗದಿಂದ ಮಹಿಳಾ ಟೈಮ್ಸ್ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕಾಲೇಜಿನ ಮಹಿಳಾ ಸಿಬ್ಬಂದಿಗಳಿಗೆ ವಿದ್ಯಾರ್ಥಿಗಳು ಕೆಲವು ಸ್ಪರ್ಧೆಗಳನ್ನುಎರ್ಪಾಡಿಸಲಾಗಿತ್ತು.ಇದರಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು.
ವೇದಿಕೆಯಲ್ಲಿಕಾಲೇಜಿನಉಪನ್ಯಾಸಕರಾಧಡಾ. ನರಸಿಂಹ, ಸೌಮ್ಯ ಹಿರೆಮಠ, ವಿದ್ಯಾಜಂಗಿನ್, ಸುಶ್ಮದೇಶಪಾಂಡೆ, ಡಾ. ಪ್ರಕಾಶ ಹುಲ್ಲುರು, ಶಿವಪ್ರಸಾದ ಹಾದಿಮನಿ, ಅರತಿ ಸಜ್ಜನ್, ಬಸಮ್ಮ, ಪ್ರಮಿಳಾ ದೊಡ್ಡಮನಿ, ಸೂರಪ್ಪ, ಬೊಮ್ಮನಾಳ, ಶಿವಪ್ಪ ಬಡಿಗೇರ, ಯಶೋಧ, ಪಲ್ಲವಿ, ಮಂಜುಳ, ಆಶಾ, ಕಸ್ತೂರಿ ಹೊರಪೇಟಿ, ಶಾಹಿದ ಬೇಗಂ, ಶ್ರೀಕಾಂತ ಸಿಂಗಪೂರ, ಮಲ್ಲಿಕಾರ್ಜುನ್, ಮೆಹಬೋಬ್, ಪರ್ವಿನ್, ತಾರಮ್ಮ, ರುಕ್ಕಮ್ಮ, ಚಾಂದಬಿಇದ್ದರು.
ನಿವೇದಿತ ಪೂಜರ್ ನಿರೂಪಿಸಿದರು, ಬಸವಶ್ರೀ ಪ್ರಾರ್ಥಿಸಿದರು, ಹನುಮಂತಿ ಸ್ವಾಗತಿಸಿದರು.ಜ್ಯೋತಿ ವಂದಿಸಿದರು.
Comments are closed.