ಆನೆಗೊಂದಿ ಉತ್ಸವ: ಗಮನ ಸೆಳೆದ ವಿವಿಧ ವಸ್ತು ಪ್ರದರ್ಶನ ಮಳಿಗೆಗಳು
: ಆನೆಗೊಂದಿ ಉತ್ಸವ-2024ರ ಪ್ರಯುಕ್ತ ಶ್ರೀ ರಂಗದೇವರಾಯಲು ವೇದಿಕೆ ಮುಂಭಾಗದಲ್ಲಿ ಆಯೋಜಿಸಿದ್ದ ವಿವಿಧ ವಸ್ತುಗಳ ಪ್ರದರ್ಶನ ಮಳಿಗೆಗಳು ಸಾರ್ವಜನಿಕರ ಗಮನ ಸೆಳೆದವು.
ಈ ವಸ್ತು ಪ್ರದರ್ಶನ ಮಳಿಗೆಗಳಲ್ಲಿ ದಿ ಕಿಷ್ಕಿಂದ ಟ್ರಸ್ಟ್ ವತಿಯಿಂದ ಮೆಕ್ಕೆಜೋಳ, ಬಾಳೆ ಮತ್ತು ಇತರೆ ಒಣಗಿದ ಎಲೆಗಳಿಂದ ಮಾಡಿದ ಗೃಹಲಂಕಾರ ವಸ್ತುಗಳ ಪ್ರದರ್ಶನ, ಬಂಗಾಲಿ ಟ್ರಸ್ಟ್ ವತಿಯಿಂದ ವಿವಿಧ ಖಾಧ್ಯಗಳ ಪ್ರದರ್ಶನ ಮತ್ತು ಮಾರಾಟ, ಗಂಗಾವತಿಯ ಪ್ರಜಾಪಿತ ಬ್ರಹ್ಮಕುಮಾರಿ ವತಿಯಿಂದ ಆದ್ಯಾತ್ಮ ಚಿತ್ರದ ಪ್ರದರ್ಶನ ಮತ್ತು ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ, ಗಂಗಾವತಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಲಯದಿಂದ ಅಂಗನವಾಡಿಯ ಮಕ್ಕಳ ಆಟಿಕೆ ವಸ್ತು ಹಾಗೂ ಇತರೆ ವಸ್ತುಗಳ ಪ್ರದರ್ಶನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ ಒನ್ ಸ್ಟಾಪ್ ಸೆಂಟರಿನ ಸೇವೆಗಳು, ಪಂಪಾವಿರೂಪಾಕ್ಷೇಶ್ವರ ಸ್ವ-ಸಹಾಯ ಸಂಘದಿಂದ ವಿವಿಧ ಅಡುಗೆ ಪದಾರ್ಥ ಪದರ್ಶನ ಮತ್ತು ಮಾರಾಟ, ಧಾತ್ರಿ ಸ್ವ-ಸಹಾಯ ಸಂಘ ವತಿಯಿಂದ ಮುಂಬತ್ತಿ ಮತ್ತು ಕೈಚೀಲಗಳ ಪ್ರದರ್ಶನ ಮತ್ತು ಮಾರಾಟ, ಆರೋಗ್ಯ ಇಲಾಖೆಯಿಂದ ರಾಷ್ಟೀಯ ಆರೋಗ್ಯ ಕಾರ್ಯಕ್ರಮಗಳ ಅರಿವು ಮತ್ತು ಪ್ರದರ್ಶನ ಮಳಿಗೆ ಹಾಗೂ ಸ್ವ-ಸಹಾಯ ಗುಂಪುಗಳ ಸದಸ್ಯರು ತಯಾರಿಸಿದ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಸೇರಿದಂತೆ ಒಟ್ಟು 24 ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿದೆ.
Comments are closed.