ಆನೆಗೊಂದಿ ಉತ್ಸವ: ಮಾರ್ಚ್ 11 ರಂದು ಉದ್ಘಾಟನಾ ಸಮಾರಂಭ

Get real time updates directly on you device, subscribe now.

 ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾಡಳಿತದ ಸಹಯೋಗದಲ್ಲಿ ಮಾರ್ಚ್ 11 ರಂದು ಆನೆಗೊಂದಿಯಲ್ಲಿ ಆನೆಗೊಂದಿ ಉತ್ಸವ – 2024 ಕಾರ್ಯಕ್ರಮ ನಡೆಯಲಿದ್ದು, ಅಂದು ಸಂಜೆ 06.30 ಗಂಟೆಗೆ ಆನೆಗೊಂದಿಯ ತಳವಾರಘಟ್ಟ ರಸ್ತೆಯ ಶ್ರೀರಂಗದೇವರಾಯಲು ವೇದಿಕೆಯಲ್ಲಿ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ.  

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಉತ್ಸವದ ಉದ್ಘಾಟನೆ ನೆರವೇರಿಸುವರು.
ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಹೆಚ್.ಕೆ.ಪಾಟೀಲ್, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸುವರು. ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಸಂಸದರಾದ ಕರಡಿ ಸಂಗಣ್ಣ, ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ವಿಧಾನ ಪರಿಷತ್ ಸದಸ್ಯರುಗಳಾದ ಶಶೀಲ್ ಜಿ.ನಮೋಶಿ, ಡಾ.ಚಂದ್ರಶೇಖರ್ ಬಿ.ಪಾಟೀಲ, ಶರಣಗೌಡ ಅನ್ನದಾನಗೌಡ ಪಾಟೀಲ ಬಯ್ಯಾಪೂರ ಹಾಗೂ ಹೇಮಲತಾ ನಾಯಕ, ಆನೆಗೊಂದಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಕೆ.ಮಹಾದೇವಿ ಅವರು ಪಾಲ್ಗೊಳ್ಳುವರು.
ವಿಶೇಷ ಆಹ್ವಾನಿತರಾಗಿ ಆನೆಗೊಂದಿಯ ರಾಜ ವಂಶಸ್ಥರಾದ ಲಲಿತಾ ರಾಣಿ ಶ್ರೀರಂಗದೇವರಾಯಲು, ರಾಣಿ ಚಂದ್ರಕಾAತ ದೇವಿ ರಾಜ ಶ್ರೀ ಅಚ್ಯುತ ದೇವರಾಯ, ರಾಜಾ ಶ್ರೀ ರಾಮ ದೇವರಾಯ ತಂ.ತಿರುಮಲದೇವರಾಯ, ವೀರ ರಾಘವ ರಾಜು ತಂ. ಎನ್.ಕೆ.ರಾಮರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ.ಎಂ.ಎನ್.ಅಜಯ್ ನಾಗಭೂಷಣ, ಪ್ರವಾಸೋದ್ಯಮ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಾದ ಸಲ್ಮಾ ಕೆ.ಫಾಹಿಮ್, ಕೃಷ್ಣಭಾಗ್ಯ ಜಲ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ.ಮೋಹನರಾಜ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾದ ಡಾ.ವಿ. ರಾಮ ಪ್ರಸಾತ್ ಮನೋಹರ್, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಭಾಜಪೇಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ.ಧರಣಿದೇವಿ ಮಾಲಗಿತ್ತಿ ಅವರು ಆಗಮಿಸುವರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ಸುನೀಲ್ ವಂಟಗೋಡಿ, ಕೊಪ್ಪಳ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು, ಹೋಟೆಲ್ ಉದ್ಯಮಿಗಳು, ವ್ಯವಸ್ಥಾಪಕರು ಹಾಗೂ ಸಂಘ-ಸAಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳು ಮತ್ತು ಜಿಲ್ಲೆಯ ಸಮಸ್ತ ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಆನೆಗೊಂದಿ ಉತ್ಸವ: ಮಾರ್ಚ್ 11 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

 ಆನೆಗೊಂದಿ ಉತ್ಸವ-2024ರ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾಡಳಿತದ ಸಹಯೋಗದಲ್ಲಿ ಮಾರ್ಚ್ 11 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆನೆಗೊಂದಿಯ ಎರಡು ಪ್ರಮುಖ ವೇದಿಕೆಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 09 ಗಂಟೆಗೆ ಶ್ರೀ ಆದಿಶಕ್ತಿ ದುರ್ಗಾದೇವಿ ದೇವಸ್ಥಾನದಿಂದ ಗಗನ್ ಮಹಲ್‌ವರೆಗೆ ಮೆರವಣಿಗೆ ನಡೆಯಲಿದ್ದು, ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಜನಾರ್ಧನ ರೆಡ್ಡಿ ಅವರು  ಮೆರವಣಿಗೆಗೆ ಚಾಲನೆ ನೀಡುವರು.
ಮೆರವಣಿಗೆಯಲ್ಲಿ ಕಲಾವಿದರಾದ ಮಾಳಪ್ಪ, ವೀರಯ್ಯ ಪೂಜಾರ ಹಾಗೂ ಶಾಮೀದ ಅವರಿಂದ ಡೊಳ್ಳು ಕುಣಿತ, ಪ್ರವೀಣ ಅವರಿಂದ ನಂದಿ ಧ್ವಜ ಸಮಾಳ ವಾದನ, ವೀರೇಶ ಅವರಿಂದ ಕಹಳೆ ವಾದನ, ಚಿದಾನಂದಪ್ಪ ಅವರಿಂದ ಕರಡಿ ಮಜಲು, ಯಮನೂರಪ್ಪ ಭಜಂತ್ರಿ ಅವರಿಂದ ಹಲಗೆ ವಾದನ, ಬಸವರಾಜ ಸಿಂಧನೂರ ಅವರಿಂದ ಮಹಿಳಾ ವೀರಗಾಸೆ, ಬಾಲು ಅವರಿಂದ ಗೊರವರ ಕುಣಿತ, ರವಿ ಅವರಿಂದ ಪೂಜಾ ಕುಣಿತ, ಸಿದ್ದಾರೂಢ ಅವರಿಂದ ಜಗ್ಗಲಿಗೆ, ಶ್ರೀ ಚಕ್ರ ಮಹಿಳಾ ಡೊಳ್ಳು ಕುಣಿತ ಕಲಾತಂಡದಿAದ ಮಹಿಳಾ ಡೊಳ್ಳು ಕುಣಿತ, ಕಲ್ಯಾಣಂ ನಾಗರಾಜ ಅವರಿಂದ ಹಗಲುವೇಷ, ಅಮರೇಶ್ ಅಸಮಕಲ್ ಅವರಿಂದ ಮೋಜಿನಗೊಂಬೆ, ಕವಿತಾ ಅವರಿಂದ ಮಹಿಳಾ ತಮಟೆ ವಾದನ, ಮಲ್ಲಾಸಿಂಗ್ ಅವರಿಂದ ಕೀಲುಕುದುರೆ, ಚೇತನ್ ಅವರಿಂದ ನಾಸಿಕ್ ಡೊಲ್, ಮಂಜು ಮೈಸೂರ ಅವರಿಂದ ನಗಾರಿ, ದ್ಯಾಮಣ್ಣ ಮ್ಯಾಗಳಮನಿ ಅವರಿಂದ  ಗಾರುಡಿ ಗೊಂಬೆ, ಬಲರಾಮ ಅವರಿಂದ ಸೋಮನ ಕುಣಿತ, ಮಲ್ಲು ಅವರಿಂದ ಕಂಸಾಳೆ, ಶಾರುಭಾಯೊ ಅವರಿಂದ ಲಂಬಾಣಿ ನೃತ್ಯ, ಧನುಷ್ ಬೆಂಗಳೂರು ಅವರಿಂದ ಹುಲಿವೇಷ, ಶ್ರೀನಿವಾಸ ಅವರಿಂದ ಕೋಳಿ ನೃತ್ಯ, ನಾಗೇಶ್ ಅವರಿಂದ ಬೇಡರ ಪಡೆ, ರಾಜಾವಲಿ ಅವರಿಂದ ಡ್ರಮ್ ವಾದನ, ಶಶಿಕಲಾ ಅಕ್ಕಿ ಅವರಿಂದ ಮಹಿಳಾ ಡೊಳ್ಳು, ಲಕ್ಷಿö್ಮÃ ಅವರಿಂದ ಮಹಿಳಾ ಕೋಲಾಟ, ಬಿಂದು ಎಸ್ ಅವರಿಂದ ಲಂಬಾಣಿ ನೃತ್ಯ, ಗಾದಿಲಿಂಗಪ್ಪ ಅವರಿಂದ ಮರಗಾಲು, ಕೃಷ್ಣಾ ಅವರಿಂದ ಹಗಲುವೇಷ, ಮೋಹನ ಅವರಿಂದ ಚಿಲಿಪಿಲಿಗೊಂಬೆ, ದಿನೇಶ ಅವರಿಂದ ಪಟ ಕುಣಿತ, ವೀರಯ್ಯಸ್ವಾಮಿ ಅವರಿಂದ ವೀರಗಾಸೆ, ಶ್ರೀರಮ್ಯಾ ಅವರಿಂದ ಚಂಡೆ ವಾದನ, ಶರಣಪ್ಪ ಅವರಿಂದ ಕರಡಿ ಮಜಲು, ಸಿದ್ದಪ್ಪಾಜಿ ಅವರಿಂದ ಯಕ್ಷಗಾನ ಕುಣಿತ, ಶಿವಕುಮಾರ ಅವರಿಂದ ಮೋಜಿನ ಗೊಂಬೆ, ಸವಿತಾ ಚೌಹಾಣ ಅವರಿಂದ ಲೇಜಿಮ್ ನೃತ್ಯ ಹಾಗೂ ಮಂಜುನಾತ ಬುಡ್ಗ ಅವರಿಂದ ಹಗಲುವೇಷ ಕಲೆಗಳು ಪ್ರದರ್ಶನಗೊಳ್ಳಲಿವೆ.
ಮಾರ್ಚ್ 11 ರಂದು ಶ್ರೀ ರಂಗದೇವರಾಯಲು ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳು
ಮಾರ್ಚ್ 11 ರಂದು ಸಂಜೆ 4 ರಿಂದ 4.10 ರವರೆಗೆ ವೀರೇಶ ಭಜಂತ್ರಿ ಮಂಗಳೂರು ಅವರಿಂದ ಕ್ಲಾರಿಯೋನೆಟ್ ವಾದನ, 4.10 ರಿಂದ 4.20 ರವರೆಗೆ ಕುಮಾರೇಶ ಬಿನ್ನಾಳ ಅವರಿಂದ ತಬಲಾ ಸೋಲೊ,ಬಸಾಪುರದ ಶ್ಯಾಮ ಅವರಿಂದ ಯೋಗನೃತ್ಯ, 4.30 ರಿಂದ 4.40ರವೆರೆಗೆ ರುದ್ರಯ್ಯಸ್ವಾಮಿ ಅಯೋಧ್ಯ ಅವರಿಂದ ಸುಗಮ ಸಂಗೀತ, 4.40 ರಿಂದ 4.50ರವರೆಗೆ ದಾವಲಸಾಭ ಅತ್ತಾರ ಅವರಿಂದ ಜಾನಪದ ಸಂಗೀತ, 4.50 ರಿಂದ 5ರವೆರೆಗೆ ವಿದ್ಯಾ ಮಂಗಳೂರ ಅವರಿಂದ ಸಮೂಹ ನೃತ್ಯ,  5 ರಿಂದ 5.10 ರವರೆಗೆ ಗೋವರ್ಧನರೆಡ್ಡಿ ಅವರಿಂದ ಕೊಳಲು ವಾದನ, 5.10 ರಿಂದ 5.20ರವರೆಗೆ ದೀಪಾ ದರೋಜಿ ಅವರಿಂದ ಸಮೂಹ ನೃತ್ಯ, 5.20 ರಿಂದ 5.30ರವರೆಗೆ ಮಲ್ಲಿಕಾರ್ಜುನ ಸ್ವಾಮಿ ಅವರಿಂದ ಯುಗಳ ಸಂಗೀತ, 5.30 ರಿಂದ 5.40ರವರೆಗೆ ತಿಪ್ಪಣ್ಣ ಅಂಬಾಜಿ ಅವರಿಂದ ಜಾನಪದ ಸಂಗೀತ, 5.40 ರಿಂದ 5.50ರವರೆಗೆ ಎಸ್.ಕೆ. ಜೀಲಾನಿ ಬಾಷಾ ಅವರಿಂದ ನೃತ್ಯ, 5.50 ರಿಂದ 5.55 ರವರೆಗೆ ವಿರುಪಾಕ್ಷಪ್ಪ ಇಟಗಿ ಅವರಿಂದ ಶಾಸ್ತಿçÃಯ ಸಂಗೀತ, 5.55 ರಿಂದ 6ವರೆಗೆ ಅಉðನ್ ಇಟಗಿ ಅವರಿಂದ ಯುಗಳ ಗೀತೆ, 6 ರಿಂದ 6.10 ರವರೆಗೆ ಶಕುಂತಲಾ ಬೆನ್ನಾಳ ಅವರಿಂದ ಸುಗಮ ಸಂಗೀತ, 6.10 ರಿಂದ 6.20 ರವರೆಗೆ ಕೆ.ಸಿ.ಸುಂಕಣ್ಣ ಅವರಿಂದ ನವಿಲು ನೃತ್ಯ, 6.20 ರಿಂದ 6.25 ರವರೆಗೆ ಕೆಂಚಪ್ಪ ಬಡಿಗೇರ ಅವರಿಂದ ಸ್ಥಳದಲ್ಲೇ ಚಿತ್ರ ಬಿಡಿಸುವುದು, 6.25 ರಿಂದ 6.30 ರವರೆಗೆ ಮಹಮ್ಮದ್ ರಿಜ್ವಾನ್ ಮುದ್ದಾಬಳ್ಳಿ  ಹಾಗೂ ತಂಡದವರಿAದ  ನಾಡಗೀತೆ.
ಸಂಜೆ ಕಾರ್ಯಕ್ರಮಗಳು:
ಸಂಜೆ 6.30 ರಿಂದ 07.30 ರವರೆಗೆ ಆನೆಗೊಂದಿ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ಚಲನಚಿತ್ರನಟ ಧ್ರುವ ಸರ್ಜಾ ಉಪಸ್ಥಿತರಿರುವರು. ದಿವ್ಯಾ ಆಲೂರ ಅವರು ಕಾರ್ಯಕ್ರಮ ನಿರೂಪಿಸುವರು.
ಸಂಜೆ 07.30 ರಿಂದ 7.45 ರವರೆಗೆ ಅನುರಾಧಾ ವಿಕ್ರಾಂತ್ ಹಾಗೂ ತಂಡದವರಿAದ ನೃತ್ಯ, 07.45 ರಿಂದ 08 ರವರೆಗೆ ಸಂಗೀತ ನೃತ್ಯ ಭಾರತಿ ಅಕಾಡೆಮಿ ಅವರಿಂದ ಭರತನಾಟ್ಯ/ಕೃಷ್ಣ ರಾಧೆ ನೃತ್ಯ/ ಮಹಿಷಾಸುರ ಮರ್ದಿನಿ ನೃತ್ಯ, ರಾತ್ರಿ 8ರಿಂದ 8.30ರವರೆಗೆ ದಶರಥ ಮಲ್ಲಕಂಬ ತಂಡದಿAದ ಮಲ್ಲಕಂಬ, 8.30 ರಿಂದ 9 ರವರೆಗೆ ಸರಿಗಮಪ ಹನುಮಂತು ಅವರಿಂದ ಜಾನಪದ ಸಂಗೀತ ಗಾಯನ, 9 ರಿಂದ 9.30 ರವರೆಗೆ ಕರ‍್ಸ್ ಡ್ಯಾನ್ಸ್ ತಂಡದಿAದ ನೃತ್ಯ/ರೆಟ್ರೋ ನೃತ್ಯಗಳು, ಹನುಮ ಡ್ಯಾನ್ಸ್/ಅಪ್ಪು ಟ್ರಿಬ್ಯೂಟ್ ಡ್ಯಾನ್ಸ್, 9.30 ರಿಂದ 10 ರವರೆಗೆ ಅಪ್ಪಣ್ಣ ತಂಡದವರಿAದ ಹಕ್ಕರಾಯ-ಬುಕ್ಕರಾಯ ಕಿರುನಾಟಕ, ಸುಂದರಕಾAಡ ನಾಟಕ, 10 ರಿಂದ 10.30 ರವರೆಗೆ ಕಂಬದ ರಂಗಯ್ಯ ಹಾಗೂ ಸುಪ್ರೀತ್ ಅವರಿಂದ ಚಲನಚಿತ್ರ ಗೀತೆ ಜುಗಲ್‌ಬಂದಿ ಗಾಯನ, 10.30 ರಿಂದ 11 ರವರೆಗೆ ಮಸ್ಕರಿ ತಂಡ ಮಂಗಳೂರ ಅವರಿಂದ ಕಾಮಿಡಿ ಪ್ರದರ್ಶನ, 11 ರಿಂದ 11.10 ರವರೆಗೆ ಶಿವಾನಿ ತಂಡದಿAದ ಭಕ್ತಿಗೀತೆ, 11.10 ರಿಂದ 11.30 ರವರೆಗೆ ತುಕಾಲಿ ಸಂತು ತಂಡದಿAದ ಕಾಮಿಡಿ ಪ್ರದರ್ಶನ, 11.30 ರಿಂದ 1 ಗಂಟೆಯವರೆಗೆ ನಾದಬ್ರಹ್ಮ ಶ್ರೀ ಹಂಸಲೇಖ ಮತ್ತು ತಂಡದಿAದ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ.
ಶಬರಿ ವೇದಿಕೆಯಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು
ಮಾರ್ಚ್ 11 ರಂದು ಬೆಳಿಗ್ಗೆ 11 ರಿಂದ 2 ರವರೆಗೆ ಗಗನ್ ಮಹಲ್ ಹತ್ತಿರದ ಶಬರಿ ವೇದಿಕೆಯಲ್ಲಿ  ಆನೆಗೊಂದಿ ಪರಂಪರೆ ಮತ್ತು ಅಭಿವೃದ್ಧಿ ವಿಚಾರಗೋಷ್ಠಿ ಕಾರ್ಯಕ್ರಮಗಳು ನಡೆಯಲಿವೆ.  ಈ ಕಾರ್ಯಕ್ರಮವನ್ನು ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ ಅವರು ಉದ್ಘಾಟಿಸುವರು.
ಸಂಶೋಧಕರಾದ ಡಾ.ಶರಣಬಸಪ್ಪ ಕೋಲ್ಕಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಪ್ರಾಧ್ಯಾಪಕರಾದ ಪ್ರೊ.ಎಸ್ ಕರಿಗೂಳಿ ಅವರು ಆಶಯ ನುಡಿ ನುಡಿಯುವರು.
ಸಂಶೋಧಕರಾದ ಡಾ.ಗೀತಾ ಪೊಲೀಸ್ ಪಾಟೀಲ್, ಸಾಹಿತಿಗಳಾದ ಪವನಕುಮಾರ ಗುಂಡೂರ, ಸಂಶೋಧಕರಾದ ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್, ಉದಯವಾಣಿ ದಿನಪತ್ರಿಕೆ ವರದಿಗಾರರಾದ ಕೆ.ನಿಂಗಜ್ಜ, ಕೃಷಿ ವಿಜ್ಞಾನಿಗಳಾದ ಡಾ.ಎಸ್.ಎ ಗೌಡರ್, ಶೈಲಜಾ ಹಿರೇಮಠ ಅವರು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುವರು.  ಪತ್ರಿಕಾ ವರದಿಗಾರರು, ಸಾಹಿತಿಗಳು, ಪ್ರಗತಿಪರ ಕೃಷಿಕರು, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಮಧ್ಯಾಹ್ನ 3 ರಿಂದ 3.05 ರವರೆಗೆ ಅವನಿ ಗಂಗಾವತಿಯವರಿAದ ಭರತನಾಟ್ಯ, 3.05 ರಿಂದ 3.10ರವರೆಗೆ ತಿಮ್ಮಪ್ಪ÷ ಇವರಿಂದ ಶಾಸ್ತಿçÃಯ ಸಂಗೀತ, 3.10 ರಿಂದ 3.20ರ ವರೆಗೆ ಸುಧಾ ಇವರಿಂದ ಸುಗಮ ಸಂಗೀತ, 3.20 ರಿಂದ 3.30 ರವರೆಗೆ ಶಿವರಂಜನಿ ಇವರಿಂದ ವಚನಗೀತೆ, 3.30 ರಿಂದ 3.40 ರವರೆಗೆ ಹಂಸಿಕಾ ಇವರಿಂದ ಭಕ್ತಿಗೀತೆ, 3.40 ರಿಂದ 3.50 ರವರೆಗೆ ಮುದಕವ್ವ ಅವರಿಂದ ಗೀಗೀ ಪದ, 3.50 ರಿಂದ 4 ರವರೆಗೆ ಹನಮಂತ ದಾಸರ ಕುಷ್ಟಗಿ ಅವರಿಂದ ತತ್ವಪದ , 4.ರಿಂದ 4.10 ರವರೆಗೆ ಮಹಾದೇವ ಬಸರಕೋಡ ಇವರಿಂದ ವಚನ ಸಂಗೀತ, 4.10ರಿಂದ 4.20 ರವರೆಗೆ ಭಾಷಾಸಾಬ್ ಸಾ-ಹಿರೇಮನ್ನಾಪೂರ ಇವರಿಂದ ತಬಲಾ ಸೋಲೊ, 4.20 ರಿಂದ 4.20 ರಿಂದ 4.30 ರವರೆಗೆ ಮಂಜುನಾಥ ಕಟ್ಟಿಮನಿ ಅವರಿಂದ ಜಾನಪದ ಸಂಗೀತ, 4.30 ರಿಂದ 4.40 ರವರೆಗೆ ಶರಾವತಿ ಎಸ್ ಕೆ ಅವರಿಂದ ಸುಗಮ ಸಂಗೀತ, 4.40 ರಿಂದ 4.50 ರವರೆಗೆ ಬಾಬುರಾವ ಕೋಬಾಳ ಅವರಿಂದ ತತ್ವಪದ, 4.50 ರಿಂದ 5 ರವರೆಗೆ ಪ್ಮಜಾ ಜಯರಾಮ್ ಅವರಿಂದ ನೃತ್ಯ, 5 ರಿಂದ 5.10 ರವರೆಗೆ ಹೆಚ್ ಈಶ್ವರಪ್ಪ ಅವರಿಂದ ವಚನ ಸಂಗೀತ, 5.10 ರಿಂದ 5.20 ರವರೆಗೆ ಜಮನಮ್ಮ ಪಮ್ಮಾರ ಅವರಿಂದ ಜಾನಪದ ನೃತ್ಯ, 5.20 ರಿಂದ 5.30 ರವರೆಗೆ ಮಧು ಕವಲೂರ ಅವರಿಂದ ಸುಗಮ ಸಂಗೀತ, 5.30 ರಿಂದ 5.40 ರವರೆಗೆ ಸುಕಮುನಿಯಪ್ಪ ಗಡಗಿ ಅವರಿಂದ ಜಾನಪದ ಸಂಗೀತ, 5.40 ರಿಂದ 5.50 ರವರೆಗೆ ಪೃಥ್ವಿ ಕೆ.ಎನ್ ಅವರಿಂದ ಸಮೂಹ ನೃತ್ಯ, 5.50 ರಿಂದ 6 ರವರೆಗೆ ಭವಾನಿ ಬಡಿಗೇರ ಅವರಿಂದ ವಚನ ಸಂಗೀತ, 6 ರಿಂದ 6.10 ರವರೆಗೆ ಶ್ರೀಮನ್ನಾರಾಯಾಣ ಕೋಲಾಟ ತಂಡದಿAದ ಕೋಲಾಟ, 6.10 ರಿಂದ 6.20 ರವರೆಗೆ ರಾಹುಲ್ ಅವರಿಂದ ಸಮೂಹ ನೃತ್ಯ, 6.20 ರಿಂದ 6.30 ರವರೆಗೆ ನಾಗೇಶ್ ಅವರಿಂದ ಸುಗಮ ಸಂಗೀತ, 6.30 ರಿಂದ 6.40 ರವರೆಗೆ ಲಲಿತಮ್ಮ ಹಿರೇಮಠ ಅವರಿಂದ ಜಾನಪದ ಸಂಗೀತ, 6.40 ರಿಂದ 6.50 ರವರೆಗೆ ಶರಣಪ್ಪ ಅರಕೇರಿ ಅವರಿಂದ ಜಾನಪದ ಹಾಸ್ಯ, 6.50 ರಿಂದ 7 ರವರೆಗೆ ಶರಣಕುಮಾರ ಬಂಡಿ ಅವರಿಂದ ಸುಗಮ ಸಂಗೀತ, 7 ರಿಂದ 7.10 ರವರೆಗೆ ರಾಚಯ್ಯ ಅವರಿಂದ ವಚನ ಸಂಗೀತ, 7.10 ರಿಂದ 7.20 ರವರೆಗೆ ಹೆಚ್.ಎಂ ಕೊಟ್ರಯ್ಯ ಅವರಿಂದ ರಂಗಗೀತೆ, 7.20 ರಿಂದ 7.30 ರವರೆಗೆ ಡಿ ಶರಣಕುಮಾರ ಅವರಿಂದ ಸುಗಮ ಸಂಗೀತ, 7.30 ರಿಂದ 7.40 ರವರೆಗೆ ದಂಡೆಮ್ಮ ಅವರಿಂದ ಸೋಬಾನ ಪದಗಳು, 7.40 ರಿಂದ 7.50 ರವರೆಗೆ ಅನ್ನಪೂರ್ಣ ಎಂ ಮನ್ನಾಪೂರ ಅವರಿಂದ ಜಾನಪದ ಸಂಗೀತ, 7.50 ರಿಂದ 8 ರವರೆಗೆ ಶರಣಪ್ಪ ಎಸ್ ಅವರಿಂಧ ವಚನ ಸಂಗೀತ, 8 ರಿಂದ 8.10 ರವರೆಗೆ ಶ್ರೀಶೈಲ ಬಡಿಗೇರ ಅವರಿಂದ ಸುಗಮ ಸಂಗೀತ, 8.10 ರಿಂದ 8.20 ರವರೆಗೆ ನಾಗಯ್ಯ ಅವರಿಂದ ಜಾನಪದ ನೃತ್ಯ ರೂಪಕ,  8.20 ರಿಂದ 8.30 ರವರೆಗೆ ಮುರಾರಿ ಭಜಂತ್ರಿ ಅವರಿಂದ ಸುಗಮ ಸಂಗೀತ, 8.30 ರಿಂದ 8.40 ರವರೆಗೆ ಯಮನೂರಪ್ಪ ಅವರಿಂದ ಜಾನಪದ ಸಂಗೀತ, 8.40 ರಿಂದ 8.50 ರವರೆಗೆ ರಾಮಪ್ಪ ಶಿಳ್ಳೆಕ್ಯಾತರ ಅವರಿಂದ ತೊಗಲುಗೊಂಬೆ, 8.50 ರಿಂದ 9 ರವರೆಗೆ ಉಮೇಶ ಸುರತಾನಿ ಅವರಿಂದ ವಚನ ಸಂಗೀತ, 9 ರಿಂದ 9.10 ರವರೆಗೆ ಚೇತನರೆಡ್ಡಿ ಅವರಿಂದ ಹಾರ್ಮೋನಿಯಂ ಸೋಲೊ, 9.10 ರಿಂದ 9.20 ರವರೆಗೆ ವೈಷ್ಣವಿ ದೇಶಪಾಂಡೆ ಅವರಿಂದ ದಾಸವಾಣಿ, 9.20 ರಿಂದ 9.30 ರವರೆಗೆ ರಾಜು ಎಮ್ಮಿಗನೂರ ಅವರಿಂದ ಸುಗಮ ಸಂಗೀತ, 9.30 ರಿಂದ 9.40 ರವರೆಗೆ ರಾಮಲಿಂಗಪ್ಪ ಅವರಿಂದ ಜಾನಪದ ಸಂಗೀತ, 9.40 ರಿಂದ 9.50 ರವರೆಗೆ ಕನಕರಾಯ ಅವರಿಂದ ವಚನ ಸಂಗೀತ, 9.50 ರಿಂದ 10 ರವರೆಗೆ ಪಾಂಡುರAಗ ಅವರಿಂದ ಸಮೂಹ ನೃತ್ಯ, 10 ರಿಂದ 10.10 ರವರೆಗೆ ಜಗದಯ್ಯ ಸಾಲಿಮಠ ಅವರಿಂದ ಜಾನಪದ ಸಂಗೀತ, 10.20 ರಿಂದ 10.30 ರವರೆಗೆ ವಿನಾಯಕ ಎಚ್ ಅವರಿಂದ ಸುಗಮ ಸಂಗೀತ, 10.30 ರಿಂದ 10.40 ರವರೆಗೆ ಹೆಚ್ ಭಾವನಾ ಅವರಿಂದ ಭರತನಾಟ್ಯ, 10.40 ರಿಂದ 10.50 ರವರೆಗೆ ಚಂದನ ಬೇರಿಗಿ ಅವರಿಂದ ಸುಗಮ ಸಂಗೀತ, 10.50 ರಿಂದ 11ರವರೆಗೆ ಪ್ರಾರ್ಥನಾ ಅವರಿಂದ ಭರತನಾಟ್ಯ, 11 ರಿಂದ 11.10ರವರೆಗೆ ಜಮುನಾ ಅವರಿಂದ ಸುಗಮ ಸಂಗೀತ, 11.10 ರಿಂದ 11.20 ರವರೆಗೆ ಹೆಚ್ ಶಾರದಾ ಅವರಿಂದ ಸುಗಮ ಸಂಗೀತ, 11.20 ರಿಂದ 11.30 ರವರೆಗೆ ಸುಚಿತ್ರಾ ಗಡ್ಡಿ ಅವರಿಂದ ಶಾಸ್ತಿçÃಯ ಸಂಗೀತ, 11.30 ರಿಂದ 11.40 ರವರೆಗೆ ಸ್ನೇಹಾ ಕೆ.ಎಮ್ ಅವರಿಂದ ಸುಗಮ ಸಂಗೀತ, 11.40 ರಿಂದ 11.45 ರವರೆಗೆ ವಾರುಣಿ ಆರ್ ನವಲಿ ಅವರಿಂದ ಭರತನಾಟ್ಯ, 11.45 ರಿಂದ 11.50 ರವರೆಗೆ ಡಾ.ಸಿ ಮಹಾಲಕ್ಷಿö್ಮà ಕೇಸರಹಟ್ಟಿ ಅವರಿಂದ ಜಾನಪದ, 11.50 ರಿಂದ 12ರವರೆಗೆ ರೇಖಾ ವಿರುಪಾಕ್ಷಪ್ಪ ಅವರಿಂದ ಶಾಸ್ತಿçÃಯ ಸಂಗೀತ, 12 ರಿಂದ 12.10 ರವರೆಗೆ  ಭವಾನಿ ಅವರಿಂದ ಜಾನಪದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!