ಜೂ.30 ರಂದು ಬಣಜಿಗ ಸಮಾಜದಿಂದ ಪ್ರತಿಭಾ ಪುರಸ್ಕಾರ ಹಾಗೂ ನೂತನ ಶಾಸಕರಿಗೆ ಸನ್ಮಾನ ಸಮಾರಂಭ

Get real time updates directly on you device, subscribe now.


ಕುಷ್ಟಗಿ ಜೂ.26; ತಾಲೂಕ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜೂ.30 ಶುಕ್ರವಾರ ಬೆಳಗ್ಗೆ 10 ಗಂಟೆಗೆ ಇಲ್ಲಿನ ಎನ್.ಸಿ.ಎಚ್. ಪ್ಯಾಲೇಸ್ ನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ನೂತನ ಶಾಸಕರಿಗೆ ಸನ್ಮಾನ ಸಮಾರಂಭ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ
ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಬಣಜಿಗ ಸಮಾಜದ ತಾಲೂಕ ಅಧ್ಯಕ್ಷ ವಿಶ್ವನಾಥ ಗುರಪ್ಪ ಕನ್ನೂರ ತಿಳಿಸಿದ್ದಾರೆ.
ಮದ್ದಾನಿ ಹಿರೇಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು

ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸುವರು. ಬಣಜಿಗ ಸಮಾಜ ತಾಲೂಕ ಘಟಕದ ಅಧ್ಯಕ್ಷ ವಿಶ್ವನಾಥ ಗುರಪ್ಪ ಕನ್ನೂರ ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು. ಬೆಂಗಳೂರಿನ ಬಣಜಿಗ ಸಮಾಜದ ಖ್ಯಾತ ಚಲನಚಿತ್ರ ಹಿರಿಯ ಕಲಾವಿದ ದೊಡ್ಡಣ್ಣ ಉದ್ಘಾಟಿಸುವರು.
ನೂತನವಾಗಿ ಆಯ್ಕೆಯಾದ ಶಾಸಕರಾದ ದೊಡ್ಡನಗೌಡ ಎಚ್. ಪಾಟೀಲ್, ಹುಬ್ಬಳ್ಳಿಯ ಶಾಸಕ ಮಹೇಶ ಟೆಂಗಿನಕಾಯಿ, ಧಾರವಾಡ ಲೋಕಾಯುಕ್ತ ನಿವೃತ್ತ ಎಸ್.ಪಿ. ವಿಜಯಕುಮಾರ ಬಿಸನಳ್ಳಿ ಅವರಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ.
ಹುನಗುಂದ ತಾಲ್ಲೂಕಿನ ಸುಳೇಭಾವಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಡಾ. ಶಿವಗಂಗಾ ರಂಜಣಗಿ (ದುದ್ದಿ) ಉಪನ್ಯಾಸ ನೀಡುವರು.
ಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ವಿಶ್ವನಾಥ ಬಳ್ಳೊಳ್ಳಿ, ನಿಕಟಪೂರ್ವ ಅಧ್ಯಕ್ಷ ಬಸೆಟ್ಟೆಪ್ಪ

ಕುಂಬಳಾವತಿ, ಮಹಿಳಾ ಘಟಕದ ನಿಕಟಪೂರ್ವ ಅಧ್ಯಕ್ಷೆ ರತ್ನ ಬಸವರಾಜ ಪಡಿ,
ಸರಕಾರಿ ನೌಕರರ ಬಣಜಿಗ ಸಂಘದ ಅಧ್ಯಕ್ಷ ಬಸೆಟ್ಟೆಪ್ಪ ಸಿಳ್ಳಿನ್, ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ ವಿರೇಶ ಬಂಗಾರಶೆಟ್ಟರ, ನಗರ ಘಟಕ ಅಧ್ಯಕ್ಷ ಸಚಿನ್ ಬಿ. ಕುಡತಿನಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಕಾರಣ ಬಣಜಿಗ ಸಮಾಜದ ಗುರು ಹಿರಿಯರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಪ್ರತಿಭಾ ಪುರಸ್ಕಾರ ಹಾಗೂ ನೂತನ ಶಾಸಕರಿಗೆ ಸನ್ಮಾನ ಸಮಾರಂಭ ಮತ್ತು ವಿವಿಧ  ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ  ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಬಣಜಿಗ ಸಮಾಜದ ಪ್ರಧಾನ ಕಾರ್ಯದರ್ಶಿ ಶಶಿಧರ ಮಲ್ಲಪ್ಪ ಕವಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: