ಬಂಜಾರ ಲಿಪಿ ಅನಾವರಣ     

Get real time updates directly on you device, subscribe now.

                   ಕೊಪ್ಪಳ : ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂದು ಬಂಜಾರ ಲಿಪಿ ಅನಾವರಣ ಕಾರ್ಯಕ್ರಮ ಜರುಗಿತು . ಪ್ರಸ್ತಾವಿಕವಾಗಿ ಮಾತನಾಡಿದ ಡಾ. ತುಕಾರಾಮ ನಾಯ್ಕ ಅವರು ಭಾಷೆ ಮಾನವ ಬದುಕಿನ ಬೆಲೆಯುಳ್ಳ ಸಂಪತ್ತು ಪ್ರಪಂಚದಲ್ಲಿ ಭಾಷೆ ತಿಳಿಯದ ಸಮುದಾಯಗಳಿಲ್ಲ ಭಾಷೆ ಮನುಷ್ಯ ನಾಡುವ ಮಾತಾದರೆ ಅದನ್ನು ವಿನ್ಯಾಸದಲ್ಲಿ ಹಿಡಿದಿರುವ ಸಾಧನವೇ ಲಿಪಿ ಇದು ನಾಗರಿಕತೆಯ ಮಾನದಂಡವಾಗಿ ಇಂದು ಬದಲಾವಣೆಗೊಂಡಿರುವುದರಿಂದ ಲಿಪಿಯ ಮಹತ್ವ ಹೆಚ್ಚಾಗಿದೆ ಲಿಪಿರಹಿತ ಸಮುದಾಯಗಳ ಬದುಕು ಅವರ ಜ್ಞಾನ ಪರಂಪರೆ ಹೊರಲೋಕಕ್ಕೆ ಅನಾವರಣಗೊಳ್ಳಲು ಅತಿ ಅಗತ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಲಷ್ಕರ್ ನಾಯ್ಕ ಮಾತನಾಡಿ ಡಿ.ಎಚ್ ನಾಯ್ಕ ಅವರ ಲಿಪಿ ಕುರಿತಾದ ಕಾರ್ಯವು ಶ್ಲಾಘನೀಯವಾದದು ಲಿಪಿ ಸಾಧಕ ಬಾದಕಗಳನ್ನು ಪರಾಮರ್ಶಿಸಿ ವಿಮರ್ಶಗೊಳಿಸಿ ಅಂತಿಮಗೊಳಿಸಿಕೊಂಡಲ್ಲಿ ಅದಕ್ಕೆ ಮಾನ್ಯತೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.  ಕೊಪ್ಪಳ ಗಡ ಬಹಾದ್ದೂರ ಬಂಡಾ ಟ್ರಸ್ಟ್  ಅಧ್ಯಕ್ಷ ರಾದ ಭರತ್ ನಾಯ್ಕ ಅವರು ಮಾತನಾಡಿ ಡಿ.ಹೆಚ್ ನಾಯ್ಕ ಅವರ ಲಿಪಿ ಕುರಿತಾದ ಶೋಧ ಕಾರ್ಯವು ಬಂಜಾರ ಜನಾಂಗದ ಆಧುನಿಕತೆಯ ಹೆಬ್ಬಾಗಿಲು ಎಂದು ಅಭಿಪ್ರಾಯಪಟ್ಟರು ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿಯ ಮರೆವು ಯುವ ಜನಾಂಗದಲ್ಲಿ ಕಾಣೆಯಾಗುತ್ತಿರುವಾಗ ಲಿಪಿಯ ಮೂಲಕ ಭಾಷೆ ಸಂಸ್ಕೃತಿಯನ್ನು ಅಭಿಮಾನ ಪೂರಕವಾಗಿ ಕಾಣಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಿದ್ದಲಿಂಗಪ್ಪ ಕೊಟ್ನೆಕಲ್ ಮಾತನಾಡಿ ಯಾವ ಭಾಷೆಗಳ ಪ್ರಭಾವ ಪ್ರೇರಣೆಯಿಂದ ಲಿಪಿಗಳನ್ನು ಸಿದ್ಧಪಡಿಸಿದಿರಿ ಅವುಗಳ ವಿವರ ನೀಡಲು ಸಲಹೆ ನೀಡಿದರು.ಗ್ರಾಮೀಣ ನಗರ ಠಾಣೆಯ ಸಿಪಿಐ ಶ್ರೀ ಸುರೇಶ್ ದೊಡ್ಮನಿ ಅವರು ಮಾತನಾಡಿ ಲಿಪಿಕಾರ್ಯದ ತಮ್ಮ ಸಹೋದರರ ಕಾರ್ಯಕ್ಕೆ ಪ್ರೀತಿಯಿಂದ ಮೆಚ್ಚುಗೆ ವ್ಯಕ್ತಪಡಿಸಿ ಅವರ ಶ್ರಮವನ್ನು ಅವರ ಬದ್ಧತೆಯನ್ನು ಕೊಂಡಾಡಿದರು. ಸಹೋದರರ ಮಾತೃ ವಾತ್ಸಲ್ಯದಿಂದ ಕಿರಿಯ ಸಹೋದರರು ಒಳ್ಳೊಳ್ಳೆಯ ಹುದ್ದೆಗಳನ್ನ ಹೊಂದುವಂತಾಯಿತು ಎಂದು ಸ್ಮರಿಸಿಕೊಂಡರು.
   ಇದೆ ಸಂದರ್ಭದಲ್ಲಿ  ಲಂಬಾಣಿ ಲಿಪಿ ರಚನೆಕಾರರು ಮತ್ತು ಪ್ರಾಧ್ಯಾಪಕರಾದ ಡಾ. ದೊಡ್ಡಮನಿ ಹನುಮಂತನಾಯ್ಕ  ಮಾತನಾಡಿ ಕರ್ನಾಟಕ ಹಾಗೂ ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಅನೇಕರು ಬಂಜಾರ / ಲಂಬಾಣಿ ಲಿಪಿಗಳನ್ನು ರಚಿಸಿರುತ್ತಾರೆ. ಈ  ನಿಟ್ಟಿನಲ್ಲಿ ನನಗೂ ಆಸಕ್ತಿ ಇದ್ದಿದ್ದರಿಂದ ನಾನು ಬಂಜಾರ ಲಿಪಿಗಳನ್ನು ರಚಿಸುವ   ಪ್ರಯತ್ನ ಮಾಡಿರುತ್ತೇನೆ. ನಮ್ಮ ಸಮುದಾಯದಲ್ಲಿ ಇದೀಗ ನಮ್ಮ ಲಂಬಾಣಿ ಭಾಷೆಯನ್ನು ಮಾತನಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಈ ದಿಸೆಯಲ್ಲಿ  ಲಂಬಾಣಿ ಸಮುದಾಯದ ಪ್ರತಿಯೊಬ್ಬರಲ್ಲಿ ನಮ್ಮ ಭಾಷೆಯ ಅರಿವು ಮತ್ತು ಪ್ರಜ್ಞೆಯನ್ನು ಮೂಡಿಸುವಲ್ಲಿ ಲಿಪಿಗಳ ರಚನೆ ಅಗತ್ಯವಾಗಿ ಬೇಕಿತ್ತು ಎಂದರು.
  ಬಂಜಾರ ಧರ್ಮ ಗುರುಗಳಾದ  ಹೇಮಗಿರಿ  ಗೋಸಾವಿ ಬುವಾನವರು  ಮಾತನಾಡಿ ಯುವ ಪೀಳಿಗೆ ತಮ್ಮ ಕಲೆ ಸಂಸ್ಕೃತಿ ಇತಿಹಾಸ ಮರೆಯಬಾರದೆಂದು ಸಲಹೆ ನೀಡಿದರು. ಅಧ್ಯಕ್ಷತೆ ಪ್ರಾಚಾರ್ಯ ರಾದ ಡಾ. ಗಣಪತಿ ಲಮಾಣಿ ವಹಿಸಿದ್ದರು.   ವೇದಿಕೆಯ ಮೇಲೆ ಕೊಪ್ಪಳ ಗಡ ಬಹಾದ್ದೂರ ಬಂಡಾ ಟ್ರಸ್ಟ್ ಅಧ್ಯಕ್ಷರಾದ ಭರತ ನಾಯ್ಕ , ಹ್ಯಾಟಿ ಎಂ ಎಚ್. ಪಿ. ಎಸ್ ಮುಖ್ಯ ಗುರುಗಳಾದ ಲಷ್ಕರ್ ನಾಯ್ಕ, ಡಾ. ಡಿ. ಎಚ್ ನಾಯ್ಕ, ಸಿ. ಪಿ. ಐ ಸುರೇಶ  ದೊಡ್ಡಮನಿ, ಡಾ. ಸಿದ್ದಲಿಂಗಪ್ಪ ಕೊಟ್ಟನೇಕಲ್ ಹಾಗೂ ಡಾ. ಗಣಪತಿ ಲಮಾಣಿ ಇದ್ದರು. ಕಾರ್ಯಕ್ರಮದಲ್ಲಿ  ಗಾಯತ್ರಿ ಭಾವಿಕಟ್ಟಿ, ಶರಣಪ್ಪ ಚೌಹಾಣ್, ವೆಂಕಟೇಶ್ ನಾಯ್ಕ,  ಪ್ರದೀಪ್,  ಡಾ. ಹುಲಿಗೆಮ್ಮ,    ಮಾನಪ್ಪ ರಾಥೋಡ್, ಅನಿಲ್ ನಾಯ್ಕ, ಸಂಗೀತಾ ನಾಯ್ಕ , ರವಿನಾಯ್ಕ         ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಅಶೋಕ್ ನಿರ್ವಹಿಸಿದರೆ  ರವಿನಾಯಕ್ ವಂದನಾರ್ಪಣೆ ಮಾಡಿದರು   

Get real time updates directly on you device, subscribe now.

Comments are closed.

error: Content is protected !!
%d bloggers like this: