ಕ್ಷೇತ್ರದ ಜನತೆಗೆ ನನ್ನ ಚರ್ಮದ ತೆಗೆದು ಚಪ್ಪಲಿ ಮಾಡಿದ್ರೂ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ- ಶಿವರಾಜ್ ತಂಗಡಗಿ
ರಾಜ ಉಡಚ್ಚಪ್ಪ ನಾಯಕ ವೇದಿಕೆಯಲ್ಲಿ ನಡೆದ ಕನಕಗಿರಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿಯವರ ಮಾತುಗಳು
- ರಾಜ್ಯದಲ್ಲಿ ಮಾತ್ರ ಕನಕಗಿರಿ ಪರಿಚಯ ಅಲ್ಲ, ಇಡೀ ರಾಷ್ಟ್ರದಲ್ಲಿ ಪರಿಚಯಿಸುವ ಕೆಲಸ ಮಾಡಲಾಗುವುದು. ಕನಕಗಿರಿ ಉತ್ಸವದ ಜತೆಗೆ ಅಭಿವೃದ್ಧಿ ಉತ್ಸವ ಮಾಡಲಾಗುವುದು.
*ಪಕ್ಷೇತರನಾಗಿ ಗೆದ್ದು ಬಂದಾಗ ನನಗೆ ಯಾವ ಒಂದು ಊರು ಸಹ ಕೊಡ ಗೊತ್ತಿರಲಿಲ್ಲ. ಕ್ಷೇತ್ರದ ಜನತೆಗೆ ನನ್ನ ಚರ್ಮದ ತೆಗೆದು ಚಪ್ಪಲಿ ಮಾಡಿದ್ರೂ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ.
- ಉಡಚಪ್ಪ ನಾಯಕರು ರೈತ, ಸಾಮಾನ್ಯ ಜನರಪರವಾಗಿ, ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದರು. ಅವರ ಆಶಯದಂತೆ ಈ ಐದು ವರ್ಷದಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಿಯೇ ತೀರುತ್ತೇನೆ.
- ಕನಕಗಿರಿ ಜನರ, ತಾಲ್ಲೂಕು ಮಾಡುವ, ಪಟ್ಟಣ ಪಂಚಾಯತಿ ಮಾಡಬೇಕು ಎನ್ನುವ ಬೇಡಿಕೆಯನ್ನು ಪೂರ್ಣ ಗೊಳಿಸಿದ್ದೇನೆ. ಈ ಭಾಗದಲ್ಲಿ ನೀರಿಗೆ ಹಾಹಾಕಾರ ಇತ್ತು. ಕೆರೆ ತುಂಬಿಸುವ ಮೂಲಕ ಜನರ ಮಾಸದಲ್ಲಿರುವ ತೃಪ್ತಿ ಇದೆ. ಮುಂದಿನ ದಿನಗಳಲ್ಲಿ ಉತ್ಸವ ಮಾತ್ರವಲ್ಲ, ಅಭಿವೃದ್ಧಿಯ ಉತ್ಸವ ಮಾಡುತ್ತೇನೆ.
- ನಮ್ಮ ಮೇಲೆ ಕ್ಷೇತ್ರದ ಜನರು ಬಹಳ ನಿರೀಕ್ಷೆ ಇಟ್ಟಿದ್ದಾರೆ. ಐದು ಗ್ಯಾರಂಟಿಗಳನ್ನು ಜಾರಿ ಮಾಡುವ ವಾಗ್ದಾನ ಮಾಡಿದ್ದೆವು. ಆ ಕೆಲಸವನ್ನು ನಮ್ಮ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮಾಡಿದ್ದೇವೆ.
*ಇನ್ನು ಕನಕಗಿರಿ ಪ್ರಾಧಿಕಾರ ರಚನೆ ಬೇಡಿಕೆ ಅಸ್ತು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕನಕಗಿರಿ ಕ್ಷೇತ್ರದ ಜನರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗುವುದು.
- ಮೂರು ಉತ್ಸವ ಪೂರ್ಣಗೊಳಿಸಿದ್ದೇನೆ. ನಾಲ್ಕನೇ ಉತ್ಸವ ಯಶಸ್ವಿ ಉತ್ಸವವಾಗಿದೆ. ಮುಂದೆಯೂ ಕೂಡ ಇದು ಹೀಗೆ ನಿಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಲಿದೆ. ನಿಮ್ಮ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ತಂಗಡಗಿ ಅವರು ನಮ್ಮ ಕೈಗೆ ಸಿಗುವುದಿಲ್ಲ ಎನ್ನುತ್ತೀರಾ. ನಿಮ್ಮಿಂದ ಇಡೀ ರಾಜ್ಯಕ್ಕೆ ಮಂತ್ರಿಯಾಗಿದ್ದೇನೆ. ಹಾಗಾಗಿ ಇಡೀ ರಾಜ್ಯದ ಕೆಲಸ ಮಾಡಬೇಕಿದೆ.
- 203 ಕೋಟಿ ವೆಚ್ಚದಲ್ಲಿ ಕನಕಗಿರಿಗೆ ನೀರು ತರುವ ಕೆಲಸ ಮಾಡಲಾಗುವುದು. ಇದಕ್ಕೆ ಈ ವಾರವೇ ಟೆಂಡರ್ ಕರೆಯಲಾಗುವುದು.
- ತೋಟಗಾರಿಕೆ ಬೆಳೆ ಬೆಳೆಯುವುದು ನಮ್ಮ ಭಾಗದಲ್ಲಿ ಹೆಚ್ಚಾಗಿದೆ. ಮುಂದಿನ ಬಜೆಟ್ ನಲ್ಲಿ ತೋಟಗಾರಿಕೆ ಪಾರ್ಕ್ ನ್ನು ಘೋಷಿಸಿ, ಪಾರ್ಕ್ ನ್ನು ನಿಶ್ಚಿತವಾಗಿ ಮಾಡಲಾಗುವುದು.
- ಇನ್ನು ನಟ ರವಿಚಂದ್ರನ್ ಅವರು ಎಲ್ಲರಿಗೂ ಪ್ರೀತಿ ಕೊಟ್ಟು ಮನಸ್ಸು ಗೆದ್ದವರು. ಇಂತಹ ಪ್ರತಿಭಾವಂತ ಹಿರಿಯ ನಟ ನಮ್ಮ ಉತ್ಸವಕ್ಕೆ ಆಗಮಿಸಿರುವುದು ನಮ್ಮ ಹೆಮ್ಮೆ.
ಕಾರ್ಯಕ್ರಮದಲ್ಲಿ ಚನ್ನಮಲ್ಲ ಸ್ವಾಮೀಜಿ, ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶರಾದ ಚಂದ್ರಶೇಖರ್, ಸದಾನಂದ, ಗೌರವಮ್ಮ ಪಾಟೀಲ್, ರಮೇಶ್, ಹಿರಿಯ ನಟ ರವಿಚಂದ್ರನ್, ನವೀನ್ ಚಂದ್ರನಾಯಕ್, ಜಿಲ್ಲಾಧಿಕಾರಿ ನಳಿನ್ ಅತುಲ್, ಸಿಇಒ ರಾಹುಲ್ ರತ್ನಂಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Comments are closed.