ಕನಗಿರಿ ಮತ್ತು ಕಾರಟಗಿ ತಾಲ್ಲೂಕನ್ನು ಪ್ರವಾಸೋದ್ಯಮ ತಾಣವಾಗಿಸುವ ಚಿಂತನೆ – ಶಿವರಾಜ್ ಎಸ್.ತಂಗಡಗಿ

Get real time updates directly on you device, subscribe now.

Kanakagiri Utsav :  ಅಂಜನಾದ್ರಿ ಅಭಿವೃದ್ಧಿ ಬಗ್ಗೆ ಬಜೆಟ್ ನಲ್ಲಿ 100 ಕೋಟಿ ಅನುದಾನ ಮೀಸಲಿಟ್ಟಿದ್ದು, ಮುಂದಿನ‌ ತಿಂಗಳು ಅಭಿವೃದ್ಧಿಗೆ ವೇಗ ಕೊಡಲಾಗುವುದು. ಕನಕಗಿರಿ ಉತ್ಸವದ ಬಗ್ಗೆ ಯುವ ಪೀಳಿಗೆಗೆ ತಿಳಿಸಬೇಕಿದೆ. ಇಲ್ಲಿನ ರಾಜರ ಇತಿಹಾಸವನ್ನು ತಿಳಿಸಿ ರೈತರ ಬಗ್ಗೆ ಅವರಿಗಿದ್ದ ಅಂದಿನ ಚಿಂತನೆಗಳು ಬಗ್ಗೆ ಚರ್ಚೆ ನಡೆಯಲಿ. ಕನಕಗಿರಿಯಲ್ಲಿ‌ 701 ಬಾವಿವಳಿವೆ. ಪುರಾತನ ಕಾಲದ ಗತವೈಭವನ್ನು, ಕನಕಗಿರಿಯ ಪಾಳೇಗಾರರು ನೀಡಿದ ಅಭಿವೃದ್ಧಿ ಕೆಲಸಗಳನ್ನು ನೆನೆಯಬೇಕಿದೆ.

ಕನಕಗಿರಿ ಕೊಪ್ಪಳಕ್ಕೆ ಮಾತ್ರ ಸೀಮಿವಲ್ಲ. ಇದರ ಚರಿತ್ರೆ ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು.

ಏಷ್ಯಾ ಖಂಡದಲ್ಲೇ ಅತಿದೊಡ್ಡದ ರೈಸ್ ಟೆಕ್ನಾಲಜಿ ಪಾರ್ಕ್ ನ್ನು ನಮ್ಮ ಅವಧಿಯಲ್ಲಿ ಸ್ಥಾಪಿಸಿದ್ದೇವೆ. ಬೀಜ ಬಿತ್ತುವ ಕೆಲಸ ಮಾಡಬೇಕು.ಆ ಬಳಿಕ ಅದರ ಫಲಕಾಣಬೇಕು.

ಗೋಷ್ಠಿಯಲ್ಲಿ ಇಂದು, ನಾಳೆಯ ಅಭಿವೃದ್ಧಿ ಬಗ್ಗೆ ಚಿಂತನೆ ಆಗಲಿ. ರೈತ, ಬಡವ, ಸಾಮಾನ್ಯ ಜನರ ಬಗ್ಗೆ ಚರ್ಚೆಯಾಗಬೇಕು. ಕೆರೆ ತುಂಬಿಸುವ ಕೆಲಸ ಮಾಡಿ ಎಂದು ಯಾರು ಹೇಳಲಿಲ್ಲ. ಆಗ ಕೆಲವರು ಕೆರೆ ತುಂಬುವುದಿಲ್ಲ. ತಂಗಡಗಿ ಮನೆ ತುಂಬಿದೆ‌ ಎಂದು ಹಾಸ್ಯ ಮಾಡಿದರು. ಆದರೆ ಆ ಕೆಲಸ ಮಾಡಿದ ಜಬಳಿಕ ನಾನು ಜನರ ಮನಸ್ಸಿನಲ್ಲಿದ್ದೇನೆ ಎಂಬುದನ್ನು ತಿಳಿದು ತೃಪ್ತಿಪಟ್ಟಿದ್ದೇನೆ.
ರಾಜಕೀಯಕ್ಕಿಂತಲ್ಲೂ ಹೆಚ್ಚು ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕಿದೆ.‌

ಕನಕಗಿರಿಯನ್ನು ಇಡೀ ರಾಜ್ಯಕ್ಕೆ ಪರಿಚಯಿಸುವ ಕೆಲಸವಾಗಬೇಕು.

ಸಮಾನಾಂತರ ಜಲಾಶಯದ ಬಗ್ಗೆ ಎಲ್ಲರೂ ವಿರೋಧ ವ್ಯಕ್ತಪಡಿಸಿದರು. ನೀರು ಇದ್ರೂ
14 ಸಮಾನಾಂತರ ಜಲಾಶಯಗಳು ಆದರೆ ನೀರಾವರಿ, ಪೂರ್ಣ ಪ್ರಮಾಣದ ‌ಒಣಬೇಸಾಯಕ್ಕೆ ಒಳಿತಾಗಲಿದೆ. ನೀರಿನ‌ ವಿಚಾರದಲ್ಲಿ ಯಾವುದೇ ವಿರೋಧ ಬೇಡ.

ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಗುರುತಿಸಿ ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ಮಾಡಿದ ಹೆಮ್ಮೆ ನಮಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣ ಅವರ ಮಾದರಿಯಲ್ಲೇ ಹೆಜ್ಜೆ ಇಟ್ಟಿದ್ದಾರೆ‌.

Get real time updates directly on you device, subscribe now.

Comments are closed.

error: Content is protected !!
%d bloggers like this: