ಕೊಪ್ಪಳ, ೨೬-ಕಲಿಯುಗದಲ್ಲಿ ಪಾದಾಯಾತ್ರೆ ಮಾಡುವುದರಿಂದ ಜನ್ಮ ಜನ್ಮಾಂತರದ ಪಾಪ ತೊಲಗುವುದು, ಒಂದು ಪಾದ ಯಾತ್ರೆ ಮಾಡಿ ಭಗಂತನ ನಾಮ ಸ್ಮರಿಣೆ ಮಾಡುವುದರಿಂದ ಕಾಶಿಯಾತ್ರಯಷ್ಟೆ ಫಲ ದೊರೆಯುವುದು ಎಂದು ಕರ್ಕಿಹಳ್ಳಿಯ ವಿಶ್ವನಾಥ ದೀಕ್ಷಿತರು ಹೇಳಿದರು.
ಅವರು ಶ್ರೀ ಕ್ಷೇತ್ರ ಕರ್ಕಿಹಳ್ಳಿಗೆ ಕೊಪ್ಪಳದಿಂದ ೧೦ನೇ ವರ್ಷದ ಪಾದಯಾತ್ರ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡುತ್ತಿದ್ದರು.
ಮನುಷ್ಯ ಕಲಿಯುಗದಲ್ಲಿ ತನಗರಿವಿಲ್ಲದೇ ನೂರಾರು ಪಾಪಗಳನ್ನು ಮಾಡುತ್ತಿದ್ದು ಪಾಪ ಪರಿಹಾರಕ್ಕೆ ಭಗವಂತನ ನಾಮ ಸ್ಮರಣೆ ಮೂಲಕ ಪಾದಯಾತ್ರೆ ಮಾಡಿದರೆ ಸಕಲ ಪಾಪಗಳು ಪರಿಹಾರ ಆಗುತ್ತವೆ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪದ್ಮನಾಭ ದೀಕ್ಷಿತರು ಮಾತಣಾಡಿ ಭಗವಂತನಲ್ಲಿ ನಿಮ್ಮನ್ನು ನಿವು ಅರ್ಪಿಸಿಕೊಂಡಾಗ ಮಾತ್ರ ಅದರ ಸವಿ ಸವಿಯಲು ಸಾದ್ಯ, ನಿತ್ಯ ಬಗವಂತನ ನಾಮ ಸ್ಮರಣೆ ಮಾಡಿ ಪೂನಿತರಾಗಿ ಎಂದರು. ಪಾದಯಾತ್ರೆಯಲ್ಲಿ ನಾರಾರು ಭಕ್ತಾದಿಗಳು ಭಾಗವಹಿಸಿದ್ದರು.
Comments are closed.