ಶಾಸಕ ಹಿಟ್ನಾಳರನ್ನು ಬೋರ್ಡ ಚೇರಮನ್ ಮಾಡಲು ಜ್ಯೋತಿ ಒತ್ತಾಯ

Get real time updates directly on you device, subscribe now.


ಕೊಪ್ಪಳ: ಜಿಲ್ಲಾ ಕೇಂದ್ರದ ಶಾಸಕರಾಗಿರುವ ಕೆ. ರಾಘವೇಂದ್ರ ಹಿಟ್ನಾಳ ಅವರು ಸತತವಾಗಿ ಮೂರು ಬಾರಿ ಆಯ್ಕೆಯಾಗಿದ್ದು, ಇದು ಇತಿಹಾಸದ ಜೊತೆಗೆ ಅವರ ಸಮರ್ಥ ಆಡಳಿತವನ್ನು ತೋರಿಸುತ್ತದೆ ಎಂದು ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಪಕ್ಷದ ಮುಖಂಡರನ್ನು ಒತ್ತಾಯಿಸಿದ್ದಾರೆ.
ಕೊಪ್ಪಳ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿ ಇತಿಹಾಸ ಬರೆದಿರುವ ರಾಘವೇಂದ್ರ ಹಿಟ್ನಾಳ ಅವರು, ಅದಕ್ಕೂ ಮೊದಲು ಎರಡು ಬಾರಿಗೆ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಕಾರ್ಯ ಮಾಡಿದ್ದಾರೆ ಆದರೂ ಅವರಿಗೆ ಈ ಬಾರಿ ಸಚಿವ ಸ್ಥಾನ ಕೈ ತಪ್ಪಿದ್ದು ರಾಜ್ಯದ ಪ್ರತಿಷ್ಠಿತ ಬೋರ್ಡ ಒಂದಕ್ಕೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ ಅವರಿಗೆ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದಾರೆ. ಮುಂಬರುವ ಲೋಕಸಭೆ ಮತ್ತು ಪಂಚಾಯತಿ ಚುನಾವಣೆಗಳಲ್ಲಿ ಇಲ್ಲಿನ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವದು ತುಂಬಾ ಅಗತ್ಯವಾಗಿದ್ದು ಹೆಚ್ಚಿನ ಕ್ರಿಯಾಶೀಲತೆಯಿಂದ ಕೆಲಸ ಮಾಡಲು ಅನುಭವಕ್ಕೆ ತಕ್ಕ ಚೇರ್‍ಮನ್ ಹುದ್ದೆ ಪೂರಕವಾಗಿರಲಿದೆ ಎಂದು ಮುಖಂಡರಲ್ಲಿ ಕೋರಿಕೆ ಇಟ್ಟಿದ್ದಾರೆ.
ನಾಮನಿರ್ದೇಶನಕ್ಕೆ ಅರ್ಜಿ ಸಂತಸ : ಪೂರ್ಣ ಬಹುಮತದಿಂದ ಆಯ್ಕೆಯಾದ ಕಾಂಗ್ರೆಸ್ ಸರಕಾರದಲ್ಲಿ ಇದೇ ಮೊದಲ ಬಾರಿಗೆ ವಿವಿಧ ಹುದ್ದೆಗಳಿಗೆ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲು ಅರ್ಜಿ ಕರೆದಿದ್ದು, ಕ್ಷೇತ್ರದ ಶಾಸಕರು, ಪರಾಭವಗೊಂಡ ಅಭ್ಯರ್ಥಿ ಮತ್ತು ಜಿಲ್ಲಾ ಸಚಿವರು ಹಾಗೂ ಪಕ್ಷದ ಅಧ್ಯಕ್ಷರು ಆಯ್ಕೆ ಮಾಡಿ ರಾಜ್ಯಕ್ಕೆ ಕಳುಹಿಸುವ ಹೊಸ ಸಂಪ್ರದಾಯ ನಿಜವಾದ ಕೆಲಸಗಾರರಿಗೆ ಪಕ್ಷಕ್ಕಾಗಿ ದುಡಿದವರನ್ನು ಗುರುತಿಸುವ ಕೆಲಸವಾಗಿದ್ದು ಕಾರ್ಯಕರ್ತರಲ್ಲಿ ಸಂತಸ ಮನೆ ಮಾಡಿದೆ. ಆದರೆ ಈ ಆಯ್ಕೆಯಲ್ಲಿ ಸ್ಥಳಿಯವಾಗಿ ಉತ್ತಮ ಕೆಲಸ ಮಾಡಿದ ಪ್ರಾಮಾಣಿಕ ಮತ್ತು ಪಕ್ಷ ನಿಷ್ಠೆ ಇರುವವರನ್ನು ಗುರುತಿಸಬೇಕು ಜೊತೆಗೆ ಪಕ್ಷವನ್ನು ಗಟ್ಟಿಯಾಗಿ ಹಿಡಿದುಕೊಂಡ ಜಾತಿಗಳಿಗೆ ಸಂಖ್ಯಾಬಲದಲ್ಲಿ ಆಧ್ಯತೆ ನೀಡಲೇಬೆಕು ವಿಶೇಷವಾಗಿ ಮಹಿಳೆಯರಿಗೂ ಎಲ್ಲಾ ಸಮಿತಿಗಳಲ್ಲಿ ಆಧ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!