ಕೊಪ್ಪಳ, ೨೬-ತಾಲೂಕಿನ ಕರ್ಕಹಳ್ಳಿ ಗ್ರಾಮದ ಐತಿಹಾಸಿಕ ಹಿನ್ನೆಲೆಯ ನಾಡಿನ ಪ್ರಸಿದ್ಧ ಶ್ರೀ ಮೃತ್ಯುಂಜಯೇಶ್ವರ (ಶಿವಚಿದಂಬರ) ರಥೋತ್ಸವ ಜುಲೈ ೩ರಂದು ಮಧ್ಯಹ್ನ ೧ಕ್ಕೆ ಜರುಗಲಿದೆ.
ರಥೊತ್ಸವ ಅಂಗವಾಗಿ ಎಂಟು ದಿನಗಳಕಾಲ ವಿವಿಧ ದಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ಜರುಗುತ್ತಿವೆ.
ಸಾಪ್ತಾಹ: ಜಾತ್ರಾ ಮಹೋತ್ಸವದ ಅಂಗವಾಗಿ ಅಖಂಡ ಮೀಣಾ ಸಪ್ತಾಹ ಸೋಮವಾರ ಜೂನ್ ೨೬ ರಿಂದ ಎರಡು ದಿನಗಳ ಕಾಲ ಜರುಗಲಿದ್ದು ಮಾಹಾ ಮೃತ್ಯುಂಜಯ ಹೋಮ ಮತ್ತು ಧನ್ವಂತರಿ ಹೋಮ ಜರುಗಲಿವೆ.
ಜೂನ್ ೨೭ ರಂದು ಮಂಗಳವಾರ ಶ್ರೀ ಸೂಕ್ತ ಹೋಮ ಮತ್ತು ಧಾರಣ ಸರಸ್ವತಿ ಹೋಮ, ಜೂನ್ ೨೮ ರಂದು ದತ್ತ ಹೋಮ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದೆ. ಜೂನ್ ೩೦ ರಂದು ನವ ಚಂಡಿ ಹೋಮ ಮತ್ತು ಕುಮಾರಿಕಾ ಪೂಜೆ, ಜುಲೈ ೧ ರಂದು ಪವಮಾನ ಹೋಮ ಮತ್ತು ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಲಿವೆ. ಜುಲೈ ೨ ರಂದು ಮಧ್ಯಹ್ನ ಉಚ್ಚಯ ಕಾರ್ಯಕ್ರಗಳು ಜರುಗಲಿವೆ.
ರಥೋತ್ಸವ ಸೋವವಾರ ಜುಲೈ ೩ ರಂದು ಶ್ರೀ ಮೃತ್ಯುಂಜಯ ಮಹಾ ರಥೋತ್ಸವ ಹಾಗೂ ಅಖಂಡ ಮೀಣಾ ಮಂಗಳ ಹಾಗೂ ಧರ್ಮ ಸಭೆ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮದ ಸಾನಿದ್ಯ ವನ್ನು ಪರಮ ಪೂಜ್ಯ ಮುರಗೋಡ ಶ್ರೀ ದಿವಾಕರ ದೀಕ್ಷಿತರು, ಶ್ರೀ ಸುರೇಶ ದೀಕ್ಷಿತರು ಸೇರಿದಂತೆ ಅನೇಕರು ಸಾನಿಧ್ಯ ವಹಿಸಲಿದ್ದಾರೆ. ಭಕ್ತದಿಗಳು ಆಗಮಿಸಿ ಮತ್ತು ಭಗವಂತನ ಕೃಪೆಗೆ ಪಾತ್ರರಾಗುವಂತೆ ಕೋರಿದ್ದಾರೆ.
Sign in
Sign in
Recover your password.
A password will be e-mailed to you.
Get real time updates directly on you device, subscribe now.
Comments are closed.