ಪ್ರೊ. ಪಂಚಾಕ್ಷರಿ ಹಿರೇಮಠರ ಬಗ್ಗೆ ವಿಚಾರ ಸಂಕಿರಣ
ಸಾಹಿತಿಗಳಾದ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಹಾಗೂ ಅನ್ನದಾನಿ ಹಿರೇಮಠ ನೀಡಿದ ದತ್ತಿ ಉಪನ್ಯಾಸ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ಪ್ರೊ. ಪಂಚಾಕ್ಷರಿ ಹಿರೇಮಠ ಬಿಸರಳ್ಳಿ ಅವರ ಬದುಕು-ಬರಹ ಹಾಗೂ ಹೋರಾಟ ಕುರಿತು ವಿಚಾರ ಸಂಕಿರಣ ದಿನಾಂಕ: ೨೬-೦೨-೨೦೨೪ ಸೋಮವಾರ ಮುಂಜಾನೆ ೧೦-೩೦ ಕ್ಕೆ ಪ್ರಥಮ ದರ್ಜೆ ಮಹಿಳಾ ಕಾಲೇಜ ಕೊಪ್ಪಳದಲ್ಲಿ ನಡೆಯಲಿದೆ.
ಪ್ರೊ. ಪಂಚಾಕ್ಷರಿ ಹಿರೇಮಠರ ಕುರಿತು ಡಿ. ರಾಮಣ್ಣ ಹಾಲ್ಮೊಸರುಕೇರಿ ಮುಖ್ಯಾಧ್ಯಾಪಕರು ಕಾಳಿದಾಸ ಪ.ಪೂ.ಕಾಲೇಜ ಕೊಪ್ಪಳ ಅವರು, ಮುಕ್ತಕಗಳು (ಕೆಳದಿ ಸಂಕಲನ) ಶ್ರೀಮತಿ ಸುಮತಿ ಹಿರೇಮಠ ಉಪನ್ಯಾಸಕರು ಪ.ಪೂ.ಕಾಲೇಜ್ ಹಲಗೇರಿ ಅವರು, ಹೇಮಂತ ಋತುವಿನ ಸ್ವರಗಳು : ಕುರುತ್ತುಲ್ ಹೈನ್ ಹೈದರ್ ಅವರ ಕಥಾನುವಾದ (ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತ ಕೃತಿ) ಕುರಿತು ಪವನಕುಮಾರ ಪಿ.ಕಮ್ಮಾರ ಬಿಸರಳ್ಳಿ ಅವರು ಮಾತನಾಡಲಿದ್ದಾರೆ. ಅತಿಥಿಗಳಾಗಿ ಡಾ.ಗಣಪತಿ ಲಮಾಣಿ ಪ್ರಾಚಾರ್ಯರು ಪ್ರಥಮದರ್ಜೆ ಮಹಿಳಾ ಕಾಲೇಜ್, ಕೊಪ್ಪಳ ಅವರು ಆಗಮಿಸುವರು. ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಪ್ರೊ. ಅನ್ನದಾನಿ ಹಿರೇಮಠ ಬಿಸರಳ್ಳಿ ಅವರು ಉಪಸ್ಥಿತರಿರವರು. ಅಧ್ಯಕ್ಷತೆಯನ್ನು ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ ಕೊಪ್ಪಳ ಇದರ ಅಧ್ಯಕ್ಷರಾದ ಅಲ್ಲಮಪ್ರಭು ಬೆಟ್ಟದೂರು ವಹಿಸಲಿದ್ದಾರೆ.
ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಸ್ವಾಗತವಿದೆ.
Comments are closed.