ಭಾರತ ಹುಣ್ಣಿಮೆ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ವಿಶೇಷ ಪೂಜಾ
ಪ್ರತಿಯೊಬ್ಬರೂ ಆಧ್ಯಾತ್ಮಿಕವಾಗಿ ದೇವರಲ್ಲಿ ಪಾಲಕರಲ್ಲಿ ನಂಬಿಕೆಯುಳ್ಳವರಾಗಬೇಕು
ಗಂಗಾವತಿ: ಪ್ರತಿಯೊಬ್ಬರೂ ದೇವರು ಹಾಗೂ ಪಾಲಕರಲ್ಲಿ ನಂಬಿಕೆಯುಳ್ಳವರಾಗುವಂತೆ ರಾಷ್ಟ್ರೀಯ ಪಟ್ಟಣ ಸೌಹಾರ್ದ ಸಹಕಾರಿ ಮಹಾಮಂಡಳದ ರಾಜ್ಯದ ನೂತನ ನಿರ್ದೇಶಕ ಕೆ. ಕಾಳಪ್ಪ ಹೇಳಿದರು.
ಅವರು ಇಸ್ಲಾಂಪೂರ ಅಂಗಡಿ ಸಂಗಣ್ಣ ಕ್ಯಾಂಪಿನಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಭಾರತ ಹುಣ್ಣಿಮೆ ನಿಮಿತ್ತ ಆಯೋಜಿಸಿದ್ದ ವಿಶೇಷ ಪೂಜಾ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಳೆದ ೭೦ ವರ್ಷಗಳಿಂದ ಅಂಗಡಿ ಸಂಗಣ್ಣಕ್ಯಾಂಪ್‌ನಲ್ಲಿ ರೇಣುಕಾ ಯಲ್ಲಮ್ಮ ಉದ್ಭವವಾಗಿ ನೆಲೆಸಿದ್ದು, ಈ ಭಾಗದ ಭಕ್ತರ ಬೇಡಿಕೆ ಈಡೇರಿಸುತ್ತಿದ್ದಾಳೆ. ನಗರದ ಆರಾಧ್ಯ ದೈವ ಶ್ರೀ ಚನ್ನಬಸವಸ್ವಾಮಿ ಆಶೀರ್ವಾದದಿಂದ ಸಿಬಿಎಸ್ ಬ್ಯಾಂಕ್ ಮೂಲಕ ದೆಹಲಿಯಲ್ಲಿ ರಾಷ್ಟ್ರೀಯ ಸೌಹಾರ್ದತಾ ಸಹಕಾರಿ ಮಹಾಮಂಡಳದ ರಾಜ್ಯ ನಿರ್ದೇಶಕರನ್ನಾಗಿ ಎರಡು ಭಾರಿ ಆಯ್ಕೆಯಾಗಲು ರಾಜ್ಯದ ಹಿರಿಯ ಸಚಿವರಾದ ಎಚ್.ಕೆ. ಪಾಟೀಲ್, ಮಾಜಿ ಸಚಿವ ಎಂ. ಮಲ್ಲಿಕಾರ್ಜುನ, ಕೆ.ಸಿ. ಕೊಂಡಯ್ಯ ಸೇರಿ ಎಲ್ಲಾ ಹಿರಿಯ ಸಹಕಾರಿ ಧುರೀಣರು ಕಾರಣರಾಗಿದ್ದು, ಸಹಕಾರಿ ಕ್ಷೇತ್ರ ರಾಜ್ಯದಲ್ಲಿ ಬೆಳವಣಿಗೆ ಕಾರ್ಯ ಮಾಡಲಾಗುತ್ತದೆ ಎಂದರು. ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಸಮಿತಿ ನೂತನ ಅಧ್ಯಕ್ಷ ಬಸವರಾಜ ರಾಮತ್ನಾಳ, ಉಪಾಧ್ಯಕ್ಷ ಸಿಂಗನಾಳ ಕುಮಾರೆಪ್ಪ ಇವರನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಮುಖ್ಯಸ್ಥರಾದ ಗಂಗಮ್ಮ ತಾಯಿ, ದೇವಾಲಯದ ಪದಾಧಿಕಾರಿಗಳಾದ ಕೆ. ನಿಂಗಜ್ಜ, ಅಶೋಕ ಗೌಡ, ಲಕ್ಷ್ಮಣ ಗೌಡ, ಸಂಜೀವಕುಮಾರ ನೇಕಾರ, ವಿರೇಶ ಮಳ್ಳಿ, ನೀಲಕಂಠ ಗಿಟ್ಗಿ, ನಾಗರಾಜ ಮೇದಾರ್, ಪ್ರಸಾದ, ಪರಶುರಾಮ ಇಟಗಿ, ನೀಲಕಂಠಪ್ಪ ಮೆಟ್ರಿ, ಬಸವರಾಜ ಶಿಡ್ಲಗಟ್ಟಿ, ನಿವೃತ್ತ ಎ.ಎಸ್. ಚಂದ್ರಶೇಖರ, ಶಾವಿ ತಿಪ್ಪಣ್ಣ, ಶಿವರಾಜ ನಾಯಕ, ಕೋಟಿ ರಾಮ್, ಮಹಾಲಿಂಗಪ್ಪ ಸೌದ್ರಿ, ನಾಗರಾಜ ಕುರುಗೋಡು, ಮಸ್ಕಿ ಶೇಖರಪ್ಪ, ಕುಡತಿನಿ ವೆಂಕಟೇಶ ಸೇರಿ ಅನೇಕರಿದ್ದರು. ಲ್ಲಮ್ಮ ದೇವಾಲಯದ ವತಿಯಿಂದ ಸನ್ಮಾನಿಸಲಾಯಿತು.
Comments are closed.