ಬಂಕಾಪುರ ಗ್ರಾಮಕ್ಕೆ ಬಸ್ ಸೌಕರ್ಯವನ್ನು ಒದಗಿಸಲು ಆಗ್ರಹಿಸಿ ಎಐಡಿಎಸ್ಓ ಪ್ರತಿಭಟನೆ

Get real time updates directly on you device, subscribe now.

ಗಂಗಾವತಿ : ಬಂಕಾಪುರ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸೌಕರ್ಯ ಒದಗಿಸಲು ಆಗ್ರಹಿಸಿ ಎಐಡಿಎಸ್ಓ ನೇತೃತ್ವದಲ್ಲಿ ಗಂಗಾವತಿಯ ಶ್ರೀ ಕೃಷ್ಣದೇವರಾಯ ವೃತದ ಬಳಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ ಮಾತನಾಡಿ ಬಂಕಾಪುರದಿಂದ ಉಡಮಕಲ್ ಮತ್ತು ಗಂಗಾವತಿಯ ಕಾಲೇಜುಗಳಿಗೆ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಸಿಸಲು ಹೋಗುತ್ತಾರೆ. ಆದರೆ ಸಮರ್ಪಕ ಬಸ್ ಸೌಕರ್ಯ ಇಲ್ಲದೆ ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳನ್ನು ತಲುಪುವುದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಕೆಲವು ಬಾರಿ ತರಗತಿ ಮುಗಿಸಿ ಶಾಲಾ ಕಾಲೇಜುಗಳಿಂದ ಮರಳುವಾಗ ಸಂಜೆ 7:00 ರ ವರೆಗೂ ಶಾಲಾ ಮಕ್ಕಳು ನಡೆದುಕೊಂಡೆ ಹೋಗಬೇಕಾಗುತ್ತದೆ, ಇದು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಸಂಜೆ ಶಾಲೆಯಿಂದ ನಡೆದುಕೊಂಡೆ. ಶಾಲಾ ಮಕ್ಕಳು ಹೋಗುತ್ತಿರುವುದರಿಂದ ಅವರಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿರುವ ಕರಡಿ ಮತ್ತು ಇನ್ನಿತರ ಪ್ರಾಣಿಗಳ ಬಗ್ಗೆ ಆತಂಕ ಇದೆ, ಹೀಗಾಗಿ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಹಿಂಜರಿಯುತ್ತಿದ್ದಾರೆ ಹೆಚ್ಚು ಜನ ಹುಡುಗಿಯರು ಇರುವುದರಿಂದ ಅವರಿಗೆ ತುಂಬ ಸಮಸ್ಯೆ ಆಗುತ್ತಿದೆ. ಹಾಗಾಗಿ ಕನಕಗಿರಿ ಯಿಂದ ಬಂಕಾಪುರ ಮಾರ್ಗವಾಗಿ ಗಡ್ಡಿ ಉಡುಮ್ಮಲ್ ಆರಳ ವಡ್ರಟ್ಟಿ ಮಾರ್ಗವಾಗಿ ಗಂಗಾವತಿಗೆ ಬೆಳಗ್ಗೆ 8: 00 ಕ್ಕೆ ಹಾಗೇ ಮಧ್ಯಾಹ್ನ
2: 00 ಕ್ಕೆ ಕನಕಗಿರಿ ಯಿಂದ ಮತ್ತು ಗಂಗಾವತಿಗೆ ಮತ್ತು ಸಾಯಂಕಾಲ 4:30 ಕ್ಕೆ ಗಂಗಾವತಿಯಿಂದ ಕನಕಗಿರಿಗೆ ಹೋಗುತ್ತಾ ಮತ್ತು ಬರುತ್ತಾ ಬಸ್ ಸೌಕರ್ಯ ಒದಗಿಸಬೇಕೆಂದು ಎಐಡಿಎಸ್ಓ ಆಗ್ರಹಿಸುತ್ತದೆ, ಇಲ್ಲದಿದ್ದರೆ ಮುಂದಿನ ದಿನದಲ್ಲಿ ಬೃಹತ್ ಹೋರಾಟವನ್ನೇ ಕೈಗೊಳ್ಳಲಾಗುವುದು ಎಂದರು. ನಂತರ ಡಿಪೋ ಮುಖ್ಯಸ್ಥರಿಗೆ ಮನವಿಯನ್ನು ಸಲ್ಲಿಸಲಾಯಿತು.
ಪ್ರತಿಭಟನೆ ಯಲ್ಲಿ ಕಾರ್ಯಕರ್ತರಾದ ಬಸವರಾಜ್ ದೇವರಾಜ್ ಸಂಜಯ್ ಲಕ್ಷ್ಮಣ್, ಪ್ರಶಾಂತ್ ವಿದ್ಯಾರ್ಥಿಗಳಾದ ಜಯ ರಮೇಶ್, ರವಿ, ಚಂದ್ರಶೇಖರ್ ಮಲ್ಲೇಶ್ ಹಾಗೂ ಇನ್ನಿತರ ಗ್ರಾಮದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!