ಮಹಾತ್ಮರ ಜಯಂತ್ಯೋತ್ಸವ ಆಚರಣೆ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೆಲಸ ಸರಕಾರ ಮಾಡುತ್ತಿದೆ; ಸುವರ್ಣ ಕುಂಬಾರ

Get real time updates directly on you device, subscribe now.

 

ಕುಷ್ಟಗಿ, ಫೆ,20; ಸರಕಾರದ ವತಿಯಿಂದ ತ್ರಿಪದಿ ಕವಿ ಸರ್ವಜ್ಞರ    ಜಯಂತ್ಯೋತ್ಸವ ಆಚರಣೆ ಮಾಡುತ್ತಿರುವುದರ ಜೊತೆಗೆ ಸಮಾಜದವರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ ಇವರ ಕಾರ್ಯ ತುಂಬಾ ಸ್ಲಾಘನೀಯವಾಗಿದೆ ಎಂದು ಕುಂಬಾರ ಸಮಾಜದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸುವರ್ಣ ಕುಂಬಾರ  ಹೇಳಿದರು. ತಾಲೂಕು ಆಡಳಿತ ಮತ್ತು ತಾಲೂಕು ಕುಂಬಾರ ಸಮಾಜದ ವತಿಯಿಂದ ಮಂಗಳವಾರ ಬೆಳಗ್ಗೆ ಇಲ್ಲಿನ ಬಸವ  ಭವನದಲ್ಲಿ ಏರ್ಪಡಿಸಿದ್ದ ತ್ರಿಪದಿ ಕವಿ ಸರ್ವಜ್ಞ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ  ಪ್ರಸ್ತಾವಿಕವಾಗಿ ಮಾತನಾಡಿದ ಅವರು ಕುಂಬಾರ ಸಮಾಜದವರು ತಮ್ಮ ವಿವಿಧ ಸರಕಾರಿ ಕೆಲಸಗಳಿಗೆ ದಿನನಿತ್ಯ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಣ್ಣ ಸಮಾಜವನ್ನು ನಿರ್ಲಕ್ಷ್ಯವಹಿಸದೇ ಸಮಾಜವನ್ನು ಮೇಲೆತ್ತುವ ಕಾರ್ಯವಾಗಬೇಕಿದೆ ಎಂದು ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದ ಬಗ್ಗೆ ಮನೆಯಲ್ಲಿ ಕುಳಿತು ಚಿಂತನೆ ಮಾಡುವ ಬದಲು ಸಂಘದ ಹಲವಾರು ಚಟುವಟಿಕೆಗಳಲ್ಲಿ ಭಾಗವಸಿ ತಮ್ಮ ಹಕ್ಕು ಬಾದ್ಯತೆ ಪಡೆದುಕೊಳ್ಳಬೇಕು ಎಂದು ಹೇಳಿದರು. 

ತಾಲೂಕು ದಂಡಾಧಿಕಾರಿ ರವಿ.ಎಸ್ ಅಂಗಡಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶರಣರು, ಸಂತರು, ದಾಸರು ಹಾಗೂ ವಿದ್ವಾಂಸರ ಜೀವನ ಚರಿತ್ರೆ ಹಾಗೂ ಅವರ ತತ್ವ ಸಿದ್ದಾಂತ್ ಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕತೆಯಾಗುತ್ತದೆ. ತ್ರಿಪದಿ ಕವಿ ಸರ್ವಜ್ಞರು ಸಹಸ್ರಾರು ವಚನಗಳನ್ನು ಬರೆದು ತಮ್ಮ ಜೀವನವನ್ನು ಮುಡುಪಾಗಿಟ್ಟು ಮನಕುಲಕ್ಕೆ ದಾರಿದೀಪ ವಾಗಿದ್ದಾರೆ. ಪ್ರತಿಯೊಬ್ಬ ಶರಣರು ನಾಡಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರಲ್ಲಿ ಸರ್ವಜ್ಞರ ವಚನಗಳು ನಾಡಿಗೆ ಕೀರ್ತಿ ತಂದಿವೆ ಎಂದು ಬಣ್ಣಿಸಿದರು. ವಚನಗಳ ಮೂಲಕ ಕವಿ ಸರ್ವಜ್ಞರು ಜಗತ್ತಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕುಂಬಾರ ಸಮಾಜದ   ತಾಲೂಕು ಅಧ್ಯಕ್ಷ ರಾಮಣ್ಣ ಕುಂಬಾರ, ಗೌರವಾಧ್ಯಕ್ಷ ಚನ್ನಬಸಪ್ಪ ಕುಂಬಾರ,

 

ಉಪಾಧ್ಯಕ್ಷ ರವಿಕುಮಾರ ಕುಂಬಾರ,  ಪುರಸಭೆ ಅಧ್ಯಕ್ಷ ಜಿ.ಕೆ ಹಿರೇಮಠ, ಪುರಸಭೆ ಸದಸ್ಯ ಮಹಾಂತೇಶ ಕಲ್ಲಬಾವಿ, ನಿವೃತ್ತ ತಹಶೀಲ್ದಾರ್ ಹಾಗೂ ಕೆ.ಆರ್.ಪಿ.ಪಿ ಮುಖಂಡ ಸಿ.ಎಂ ಹಿರೇಮಠ, ಶಿಕ್ಷಣ ಇಲಾಖೆಯ ಸಿಬ್ಬಂದಿ ಎಂ ಸರಸ್ವತಿ, ಸಮಾಜದ ಹಿರಿಯ ಮುಖಂಡರಾದ ಬಸವರಾಜ ಕುಂಬಾರ, ರಾಜಕುಮಾರ ಕುಂಬಾರ, ವಿಕಲಚೇತನರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಕುಂಬಾರ, ಶಶಿಧರ ಮುದೇನೂರ, ಶೇಖರಪ್ಪ ಕುಂಬಾರ, ವಿಶ್ವನಾಥ ಕುಂಬಾರ, ಆನಂದ.ಬಿ.ಕುಂಬಾರ, ಸಂತೋಷ ಕುಂಬಾರ ಹಾಗೂ ಕುಂಬಾರ ಸಮಾಜದ ಗುರು ಹಿರಿಯರು ಮತ್ತು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಸವರಾಜ ಕುಂಬಾರ ನಿರೂಪಿಸಿ, ವಂದಿಸಿದರು.

ನಂತರ ಉಪನ್ಯಾಸಕ ಡಾ.ನಾಗರಾಜ ಹೀರಾ

 

ಅವರು ತ್ರಿಪದಿ ಕವಿ ಸರ್ವಜ್ಞ (ಪುಷ್ಪ ದತ್ತ) ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ದಂಡಾಧಿಕಾರಿ ರವಿ.ಎಸ್ ಅಂಗಡಿ ಅವರಿಗೆ ಸಮಾಜದ ವತಿಯಿಂದ ಮನವಿ ಪತ್ರ ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: