ಚಳಗೇರಾ, ಹಿರೇಬನ್ನಿಗೋಳದಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಅದ್ದೂರಿ ಸ್ವಾಗತ

Get real time updates directly on you device, subscribe now.

): ಜಿಲ್ಲೆಯಲ್ಲಿ ಜನವರಿ 26 ರಿಂದ ಫೆಬ್ರವರಿ 23 ರವರೆಗೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಮಂಗಳವಾರದAದು (ಫೆ.20) ಕುಷ್ಟಗಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ ನಡೆಯಿತು.
ಕುಷ್ಟಗಿ ತಾಲ್ಲೂಕಿನ ಚಳಗೇರಾ ಗ್ರಾಮದಲ್ಲಿ ಜಾಥಾ ಮೆರವಣಿಗೆಗೆ ಕುಂಭ ಮೆರವಣಿಗೆ, ಪೂಜಾ ಕಾರ್ಯಕ್ರಮದ ಮೂಲಕ ಸಂಭ್ರಮದ ಸ್ವಾಗತ ಕೋರಿದರು. ಅದರಂತೆ ಹಿರೇಬನ್ನಿಗೋಳ, ಹಿರೇನಂದಿಹಾಳ, ಕೊರಡಕೇರಾ, ತಳುವಗೇರಾ ಮತ್ತು ಅಡವಿಭಾವಿ ಗ್ರಾಮಗಳಲ್ಲಿ ಗ್ರಾಮಗಳಲ್ಲಿ ಜಾಥಾ ಮೆರವಣಿಗೆಗೆ ಬೈಕ್ ರ‍್ಯಾಲಿ, ಪೂರ್ಣ ಕುಂಭದ ಮೂಲಕ ಅದ್ದೂರಿ ಸ್ವಾಗತ ಕೋರಲಾಯಿತು. ಜಾಥಾ ವೇಳೆ ಮಕ್ಕಳು ವಿವಿಧ ಛದ್ಮ ವೇಷಗಳಲ್ಲಿ ಮೆರವಣಿಗೆಗೆ ಮೆರುಗು ನೀಡಿದರು. ಹಾಗೂ ಗ್ರಾಮಗಳಲ್ಲಿ ಸಂವಿಧಾನ ಪೀಠಿಕೆ ಓದುವುದು, ಪ್ರಮುಖ ರಸ್ತೆಗಳಲ್ಲಿ ಶಾಲಾ ಮಕ್ಕಳು, ಗ್ರಾಮಸ್ಥರಿಂದ ಜಾಥಾವನ್ನು ನಡೆಸಲಾಯಿತು.
ಈ ಸಂದರ್ಭ ಗ್ರಾಮಗಳ ಮುಖಂಡರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಶಾಲಾ ಮಕ್ಕಳು, ಶಿಕ್ಷಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!