ಭಾಗ್ಯನಗರ ದುಡಿಯುವ ಜನರಿಗೆ ನಿವೇಶನ. ಮನೆಗಳನ್ನು ಒದಗಿಸಲು ಪ್ರತಿಭಟನಾ ಮೆರವಣಿಗೆ

Get real time updates directly on you device, subscribe now.

ಕೊಪ್ಪಳದ ಭಾಗ್ಯನಗರದಲ್ಲಿ ದುಡಿಯುವ ಜನರಿಗೆ ನಿವೇಶನ. ಮನೆಗಳನ್ನು ಒದಗಿಸಲು ಪ್ರತಿಭಟನಾ ಮೆರವಣಿಗೆ.

ಕೊಪ್ಪಳ.ಭಾಗ್ಯನಗರದಲ್ಲಿ ದುಡಿಯುವ ಜನರಿಗೆ ನಿವೇಶನ. ಮನೆಗಳನ್ನು ಒದಗಿಸಲು ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯಿಂದ ಮಂಗಳವಾರ ಭಾಗ್ಯನಗರದ ಪ್ರವೇಶ ದ್ವಾರದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಪಟ್ಟಣ ಪಂಚಾಯಿತಿಗೆ ತೆರಳಿ ಧರಣಿ ನಡೆಸಿ ನಂತರ ಭಾಗ್ಯನಗರದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುರೇಶ್ ಬಬ್ಲದ್ ಅವರಿಗೆ ಮನವಿ ಅರ್ಪಿಸಿದರು. ಮನವಿಯಲ್ಲಿ ನಿವೇಶನ ರಹಿತ ಮತ್ತು ವಸತಿ ರಹಿತರಿಗೆ ಭಾಗ್ಯನಗರ ಪ್ರದೇಶದಲ್ಲಿ ನಿವೇಶನ ಮತ್ತು ವಸತಿಯನ್ನು ಕಲ್ಪಿಸಿಕೊಡಬೇಕು.ದುಡಿಯುವ ಕೈಗಳಿಗೆ ಉದ್ಯೋಗ ಉಣ್ಣಲು ಹೊಟ್ಟೆತುಂಬ ಊಟ ನೆಮ್ಮದಿಯಿಂದ ನಿದ್ರಿಸಲು ಸ್ವಂತದ ಒಂದು ಸೂರು ಈ ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ. ಆದರೆ ಇಂದು ನಮ್ಮದೇಶದಲ್ಲಿ ನಮ್ಮನ್ನು ಆಳುತ್ತಿರುವ ಸರ್ಕಾರಗಳು ದುಡಿಯುವ ಕೈಗಳಿಗೆ ಉದ್ಯೋಗವನ್ನು ನೀಡದೇ ಹೊಟ್ಟೆ ತುಂಬಾ ಅನ್ನ ಸಿಗದಂತೆ ಮಾಡಿ, ಹಸಿವಿನಿಂದ ನರಳುತ್ತಾ, ಮಲಗಲು ಕೂಡ ಸ್ವಂತ ಮನೆ ಇಲ್ಲದ ಸ್ಥಿತಿಗೆ ಜನರನ್ನು ಸರ್ಕಾರಗಳು ದೂಡಿದೆ.ಆದರೆ ಭಾರತದ ಸಿರಿವಂತ ಕಾರ್ಪೋರೇಟ್ ಕಂಪನಿಗಳ ಮಾಲೀಕರು ಮಾತ್ರ ದಿನ ದಿನ ಪ್ರಪಂಚದ ಅತಿ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದು. ದಿನ ನಿತ್ಯ ನಮ್ಮ ಜಲ ನೆಲ ಹಾಗೂ ಜನರಿಗೆ ಸೇರಬೇಕಾದ ಸಾರ್ವಜನಿಕ ಸಂಪತ್ತನ್ನು ಎಗ್ಗಿಲ್ಲದೇ ಲೂಟಿಯನ್ನು ಮಾಡುವುದಕ್ಕೆ ನಮ್ಮ ಸರ್ಕಾರಗಳು ಕಾನೂನು ಬದ್ಧ ಅವಕಾಶಗಳನ್ನು ಮಾಡಿಕೊಡುತ್ತಿದೆ. ಇದರೊಂದಿಗೆ ಸರ್ಕಾರದ ಆಪ್ತ ಸಂಘ ಸಂಸ್ಥೆಗಳು, ಮಠ ಮಂದಿಗಳು, ಹಾಗೂ ವ್ಯಕ್ತಿಗಳಿಗೆ ಈ ನೆಲದ ಕಾನೂನುಗಳನ್ನು ಮೀರಿ ಸರಕಾರಿ ಭೂಮಿಯನ್ನು ಹಂಚಿಕೆ ಮಾಡುತ್ತದೆ, ಆದರೆ ಸೂರಿಲ್ಲದ ಬಡವನೊಬ್ಬ ಸ್ವಂತ ಸೂರಿಗಾಗಿ ಸರಕಾರದ ಬಳಿ ಅಗತ್ಯ ಜಮೀನನ್ನು ಅಥವಾ ನಿವೇಶನ ಕೇಳಿದರೆ ಭೂಮಿ ಲಭ್ಯವಿಲ್ಲ ಎಂದು ಬೇಜವಾಬ್ದಾರಿ ಉತ್ತರ ಸಿಗುತ್ತದೆ ಹೀಗಾಗಿ ನಮ್ಮ ವಸತಿ ಕನಸು ಕಮರಿತ್ತಿದೆ.ನಮ್ಮ ಕರ್ನಾಟಕದಲ್ಲಿ 37 ಲಕ್ಷ ಗಾಯರಾಣ, ಸರಕಾರದ ಭೂಮಿ ಲಭ್ಯವಿರುತ್ತದೆ. ನಗರದಲ್ಲಿ ಆದರೂ ನಾವು ನಿರ್ಗತಿಕರಾಗುತ್ತಿದ್ದೇವೆ. ನಾವು ಹೀಗೆ ವಸತಿ ಇಲ್ಲದೇ ಇರಬೇಕೇ ? ಆದ್ದರಿಂದ ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿರುವ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ದುಡಿಯುವ ಕಾರ್ಮಿಕರು. ಬಡ ರೈತ ಕಾರ್ಮಿಕರಿಗೆ ಇಂದಿಗೂ ನಿವೇಶನ ಇರುವುದಿಲ್ಲ. ಆದ್ದರಿಂದ ನಾವು ನಿಡುವ ವಸತಿ ರಹಿತರ ಅರ್ಜಿಗಳನ್ನು ಸ್ವೀಕರಿಸಿ ಮತ್ತು ಪರಿಶೀಲನೆ ಮಾಡಿ ತಾವುಗಳು ತಮ್ಮ ಕಾರ್ಯಾಲಯದಿಂದ ಭೂಮಿ ಖರೀದಿ ಮಾಡಿ ಬಡ ಕಾರ್ಮಿಕರಿಗೆ.ಬಡ ರೈತರಿಗೆ. ಕೃಷಿ ಕಾರ್ಮಿಕರಿಗೆ.ದೇವದಾಸಿ ಮಹಿಳೆಯರಿಗೆ. ಹಮಾಲಿ ಕಾರ್ಮಿಕರಿಗೆ. ಕಟ್ಟಡ ಕಾರ್ಮಿಕರಿಗೆ. ಹಲವಾರು ದುಡಿಯುವ ವರ್ಗದವರಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು.ನಾವು ನೀಡಿರುವ ಅರ್ಜಿಗಳನ್ನು ಪರಿಶೀಲನೆ ಮಾಡಿ, ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿ.ನಿಜವಾದ ಫಲಾನುಭವಿಗಳನ್ನು ಆಯ್ಕೆ ಮಾಡಿ.ನಿವೇಶನ ನೀಡಬೇಕು.

ನಾವು ನೀಡಿರುವ ಅರ್ಜಿಗಳನ್ನು ಪರಿಶೀಲನೆ ಮಾಡಿ ಜಿಲ್ಲಾಡಳಿತ. ತಾಲೂಕ ಆಡಳಿತಕ್ಕೆ ನಮ್ಮ ಸಂಘಕ್ಕೆ ವರದಿ ನೀಡಲು ನಮ್ಮ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಗೆ ನೀಡಬೇಕೆಂದು ಕೋರಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ಜಿ.ಬಬ್ಲದ್ ಪಟ್ಟಣ ಪಂಚಾಯಿತಿಯಲ್ಲಿ ವಸತಿ ರಹಿತರಿಗೆ ಹೊಲ ಖರೀದಿಸಲು ನಿರ್ಣಯ ಕೈಗೊಳ್ಳಲಾಗಿದ್ದು. ಆದರೆ ಸರ್ಕಾರದ ದರದಂತೆ ಎಕರೆಗೆ 13 ಲಕ್ಷ ರೂಪಾಯಿ ನಿಗದಿಪಡಿಸಿದೆ. ಆದರೆ ಭಾಗ್ಯನಗರದ ಸುತ್ತ ಒಂದರಿಂದ ಒಂದೂವರೆ ಕೋಟಿ ರೂಪಾಯಿಗಳನ್ನು ಹೇಳುತ್ತಿದ್ದಾರೆ. ಹೀಗಾಗಿ ಹೊಲಗಳನ್ನು ಖರೀದಿಸಲು ವಿಳಂಬವಾಗುತ್ತಿದೆ. ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿ ಹಾಗೂ ಶಾಸಕರ ಗಮನಕ್ಕೆ ತಂದು ಆದಷ್ಟು ಬೇಗ ಬೇಡಿಕೆ ಈಡೇರಿಸಲು ಪ್ರಯತ್ನಿಸುವೆ ಎಂದು ಹೇಳಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ಎಸ್.ಎ.ಗಫಾರ್.ಕಾರ್ಯದರ್ಶಿ ತುಕಾರಾಮ್ ಬಿ.ಪಾತ್ರೋಟಿ. ಜಿಲ್ಲಾ ಮುಖಂಡ ಹುಲಗಪ್ಪ ಅಕ್ಕಿರೊಟ್ಟಿ. ಜಿಲ್ಲಾ ಮುಖಂಡ ಏ.ಎಲ್‌.ತಿಮ್ಮಣ್ಣ. ಭಾಗ್ಯನಗರದ ಶ್ರೀ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಮೌಲಾ ಸಾಬ್ ಕಪಾಲಿ. ಗೈಬು ಸಾಬ್ ಮಾಳೆಕೊಪ್ಪ. ನಾಗರಾಜ್. ಜಗದೀಶ್ ಕಟ್ಟಿಮನಿ. ಶ್ರೀದೇವಿ ಹೆಬ್ಬಾಳ.ಕಮಲಾ. ರಾಧಾ. ರಾಜೇಶ್ವರಿ.ಪಾರ್ವತಿ.ಹನುಮಂತ ವಡ್ಡರ್. ಮಂಜುನಾಥ್ ವಡ್ಡರ್. ಅಮೀರ್ ಬಾಷಾ. ನವನಗರ ಚರ್ಚಿನ ಫಾದರ್ ಚನ್ನಬಸಪ್ಪ ಅಪ್ಪಣ್ಣವರ್. ಗಂಗಾಧರ ಪೂಜಾರ್. ಬೀರಪ್ಪ. ಧರ್ಮಣ್ಣ ಬೊಮ್ಮನಾಳ. ನಾಗರಾಜ್ ಮುಂಡರಗಿ. ಸಾಧಿಕ್ ಬಳಿಗಾರ ಮುಂತಾದವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!