ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಅಡಾಕ್ ಕಮಿಟಿ; ಶಿವಾನಂದ ತಗಡೂರು ನೇತೃತ್ವದ ಸಮಿತಿ ಅಧಿಕಾರ ಸ್ವೀಕಾರ
ಮೈಸೂರು:
19/02/204ರ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ನೇತೃತ್ವದ ಅಡಾಕ್ ಕಮಿಟಿ ಅಧಿಕಾರ ಸ್ವೀಕರಿಸಿದೆ.
ಈ ಸಂದರ್ಭದಲ್ಲಿ
ಅಡಾಕ್ ಕಮಿಟಿ ಸದಸ್ಯರಾದ ಮತ್ತಿಕೆರೆ ಜಯರಾಮ್, ಸೋಮಶೇಖರ್ ಕೆರಗೋಡು, ಬಿ.ಎಸ್.ಪ್ರಭುರಾಜನ್, ಬಾಲಕೃಷ್ಣ ಮದ್ದೂರು ಹಾಜರಿದ್ದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆಡಳಿತ ಮಂಡಳಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಜಿಲ್ಲಾ ಸಂಘ
ಅಧ್ಯಕ್ಷರಾದ ಎಸ್ ಟಿ ರವಿಕುಮಾರ್ ಮತ್ತು ಪ್ರದಾನ ಕಾರ್ಯದರ್ಶಿಗಳಾದ ಎಂ ಸುಬ್ರಹ್ಮಣ್ಯ ರವರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ರವರ ನೇತೃತ್ವದ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡಿದರು. ಈ ವೇಳೆ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಬಿ ರಾಘವೇಂದ್ರ ಮತ್ತು ಪದಾಧಿಕಾರಿಗಳು ಹಾಜರಿದ್ದರು.
ದಿನಾಂಕ 11/02/2024 ರ ಭಾನುವಾರ ಬೆಳಿಗ್ಗೆ 11ಗಂಟೆಗೆ ಮೈಸೂರಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ತೀರ್ಮಾನದಂತೆ ಅಡಕ್ ಕಮಿಟಿ ರಚನೆಯಾಗಿದ್ದು
ಅಧಿಕಾರ ವಹಿಸಿಕೊಂಡಿದೆ.
ನೂತನ ಅಡಾಕ್ ಕಮಿಟಿ:
ಶಿವಾನಂದ ತಗಡೂರು (ಅಧ್ಯಕ್ಷರು)
ಅಡಾಕ್ ಕಮಿಟಿ ಸದಸ್ಯರು
ಮತ್ತಿಕೆರೆ ಜಯರಾಮ್,
ಅಜ್ಜಮಾಡ ಕುಟ್ಟಪ್ಪ
ಸೋಮಶೇಖರ್ ಕೆರಗೋಡು, ಬಿ.ಎಸ್.ಪ್ರಭುರಾಜನ್,
ಬಾಲಕೃಷ್ಣ ಮದ್ದೂರು
Comments are closed.