ಮೂರ್ತಿಗಳ ಭವ್ಯ ಮೆರವಣಿಗೆ. ಸಂಭ್ರಮದಿಂದ ಸ್ವಾಗತಿಸಿದ ಭಕ್ತರು
ನಗರದ ಕಿನ್ನಾಳ ರಸ್ತೆಯ ಓಉಔ ಕಾಲೋನಿಯಲ್ಲಿ ನಿರ್ಮಾಣವಾಗಿರುವ ನೂತನ ದೇವಸ್ಥಾನಕ್ಕೆ ಈಶ್ವರ, ಗಣಪತಿ, ನಂದಿ, ಆಂಜನೇಯ ಮೂರ್ತಿಗಳನ್ನು ಪೂರ್ಣ ಕುಂಭ, ಡೊಳ್ಳು, ಭಜನೆ, ಭಜಂತ್ರಿಗಳೊಂದಿಗೆ ಮೆರವಣಿಗೆಯಲ್ಲಿ ಎನ್,ಜಿ.ಓ ಕಾಲೋನಿಗೆ ತರಲಾಯಿತು.
ನೂತನವಾಗಿ ನಿರ್ಮಾಣವಾಗಿರುವ ದೇವಸ್ಥಾನಕ್ಕೆ ಈಶ್ವರ, ನಂದಿ, ಗಣೇಶ,ಆಂಜನೇಯ ಮೂರ್ತಿಗಳನ್ನು ಕೊಪ್ಪಳದ ಕಿನ್ನಾಳ ರಸ್ತೆಯ ಪ್ರವಾಸಿ ಮಂದಿರದ ಹತ್ತಿರದ ಗೋವಿಂದರಾಯನ(ಈಶ್ವರ) ದೇವಸ್ಥಾನದಿಂದ ಇಂದು ಬೆಳಿಗ್ಗೆ ಪೂರ್ಣ ಕುಂಭ, ಡೊಳ್ಳು ಕುಣಿತ, ಭಜಂತ್ರಿ, ಭಜನಾ ಮಂಡಳದೊಂದಿಗೆ ಭವ್ಯ ಮೆರವಣಿಗೆಯ ಮೂಲಕ ಎನ್.ಜಿ.ಓ ಕಾಲೋನಿಯಲ್ಲಿನ ನೂತನ ದೇವಸ್ಥಾನಕ್ಕೆ ಮೂರ್ತಿಗಳನ್ನು ಕರೆತರಲಾಯಿತು.
ಮೆರವಣಿಗೆ ಉದ್ದಕ್ಕೂ ಮಹಿಳೆಯರು, ಹಿರಿಯರು ಮಕ್ಕಳು, ಯುವಕ,ಯುವತಿಯರು ಡೊಳ್ಳು ಬಾರಿಸಿ, ಸಂಭ್ರಮಿಸಿದರು. ಸುಶೀಲೇಂದ್ರ ದೇಶಪಾಂಡೆ, ಬಸವರಾಜ ಸವಡಿ, ಮಂಜುನಾಥ, ನಾಗರಾಜನಾಯಕ ಡೊಳ್ಳಿನ, ರಾಜು ಪುರಾಣಿಕಮಠ, ಪಟ್ಟಣ ಪಂಚಾಯತ ಸದಸ್ಯೆ ಲಲಿತಾ ಡಂಬಳ, ಶಿಲ್ಪಾ ಡೊಳ್ಳು ಬಾರಿಸಿದ್ದು ವಿಶೇಷವಾಗಿತ್ತು
ಮೆರವಣಿಗೆ ನಂತರ ವಿಗ್ರಹಗಳನ್ನು ಜಲಾಧಿವಾಸದಲ್ಲಿ ಇರಿಸಲಾಗಿದೆ. ಎಂದು ಈಶ್ವರ ದೇವಸ್ಥಾನದ ಸಮಿತಿಯ ಪ್ರತಿ?ಪನ ಸಮಿತಿಯ ಶರಣಯ್ಯ ಪುರಾಣಿಕಮಠ, ವಿ.ಹೆಚ್.ಮಂಡಸೊಪ್ಪಿ, ಮಲ್ಲಿಕಾರ್ಜುನಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.