ಹದಗೆಟ್ಟ ರಸ್ತೆಗಳ ಅಭಿವೃದ್ಧಿಗೆ ಅನುದಾನಕ್ಕಾಗಿ ಶಾಸಕ ಹಿಟ್ನಾಳ್ ಮನವಿ

Get real time updates directly on you device, subscribe now.

ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು  ಭೇಟಿಯಾದ ಶಾಸಕ ರಾಘವೇಂದ್ರ ಹಿಟ್ನಾ   ಕೊಪ್ಪಳ ವಿಧಾನಸಭ ಕ್ಷೇತ್ರದಲ್ಲಿನ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಸಿ,ಅನುಧಾನ ಮಂಜೂರು ಮಾಡುವಂತೆ ಸಚಿವರಿಗೆ ಮನವಿ ಮಾಡಿದರು, ಸಚಿವರು ಕೂಡ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕರು ಹೇಳಿದ್ದಾರೆ. 

ಹೀಗಾಗಲೇ ಕೊಪ್ಪಳ ವಿಧಾನಸಭ ಕ್ಷೇತ್ರ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವವನ್ನು ನೀಡಿ ರಸ್ತೆ ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತಿದ್ದೇವೆ.ಕೊಪ್ಪಳ -ಕಿನ್ನಾಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ 9.50 ಕೋಟಿ ಅನುಧಾನ ಮಂಜೂರು ಆಗಿದ್ದು ಟೆಂಡರ್ ಸಹ ಆಗಿದ್ದು ನಾಳೆಯಿಂದಲೇ ಕಾಮಗಾರಿಯನ್ನೂ ಪ್ರಾರಂಭ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ.ಕಲ್ಮಲಾ – ಶಿಗ್ಗಾವ್ ರಸ್ತೆ ಅಭಿವೃದ್ಧಿಯ ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ಅಳವಂಡಿಯ ಕಂಪ್ಲಿ ಕ್ರಾಸ್ ನಿಂದ ಬೆಳಗಟ್ಟಿ ವರೆಗಿನ ರಸ್ತೆ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಹೊಸಳ್ಳಿ -ಕೊಪ್ಪಳ ರಸ್ತೆಯ ವ್ಹಾಯ ಹೊಸಳ್ಳಿ -ಕಾಸನಕಂಡಿ-ಹಿರೇಬಗನಾಳ -ಹಾಲವರ್ತಿ -ಕೊಪ್ಪಳ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಪ್ಪಳ ತಾಲೂಕಿನ ಕವಲೂರು -ಬನ್ನಿಕೊಪ್ಪ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ, ಕವಲೂರು -ಮುರ್ಲಾಪುರ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ, ಕವಲೂರು -ಘಟ್ಟರಡ್ಡಿಹಾಳ ರಸ್ತೆಯ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.ಗಿಣಗೇರಿ -ಗೊಂಡಬಾಳ ರಸ್ತೆಯ ಅಭಿವೃದ್ಧಿಯ ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ಹೀಗಾಗಲೇ ಗಿಣಗೇರಿಯಿಂದ ಅಲ್ಲಾನಗರ -ಹಿರೇಬಗನಾಳ ವರೆಗೆ ಸಿಸಿ ರಸ್ತೆ ನಿರ್ಮಾಣ ಆಗಿದೆ.ಹಿರೇಬಾಗನಾಳ ದಿಂದ -ಚಿಕ್ಕಬಗನಾಳ -ಲಾಚನಕೇರಿ -ಮುಂಡರಗಿ -ಹ್ಯಾಟಿ -ಗೊಂಡಬಾಳ ವರೆಗಿನ ರಸ್ತೆಯನ್ನೂ ಕೂಡ ಅಭಿವೃದ್ಧಿ ಪಡಿಸುತ್ತೇವೆ. ಎಂದು ಹೇಳಿದ್ದಾರೆ.

ಈ ರಸ್ತೆಗಳಸ್ಟೆ ಅಲ್ಲದೆ  ಹದಗೆಟ್ಟಿರುವ ಇನ್ನುಳಿದ ಎಲ್ಲಾ ರಸ್ತೆ ಅಭಿವೃದ್ಧಿಗೆ ಕೂಡ ಪ್ರಾಮುಖ್ಯತೆ ನೀಡಿ ಅನುಧಾನ ಮಂಜೂರು ಮಾಡಿಸಿ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಹೇಳಿದ್ದಾರೆ.

 

Get real time updates directly on you device, subscribe now.

Comments are closed.

error: Content is protected !!