ಸವಿತಾ ಮಹರ್ಷಿ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ
ಸವಿತಾ ಮಹರ್ಷಿ ಜಯಂತಿ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಸವಿತಾ ಮಹರ್ಷಿರವರ ಭಾವಚಿತ್ರಕ್ಕೆ ಫೆಬ್ರವರಿ.16 ರಂದು ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ಮರಬನಳ್ಳಿ ಹಾಗೂ ಸಮಾಜದ ಮುಖಂಡರುಗಳಾದ ಗಂಗಾವತಿ ಮಾರೇಶ, ತುಕಾರಾಮ ನರಸಪ್ಪ ಎಚ್, ಮಾರುತಿ ಸೂಗೂರು, ಕಲ್ಲಪ್ಪ ಹೊನ್ನುಂಚಿ, ನಾಗರಾಜ ಕಂಪ್ಲಿ, ಯಲ್ಲಪ್ಪ ಬಲರಾಮ ಎಚ್.ಸಿ, ಈಶಪ್ಪ ಮಾದಿನಾಳ, ಶ್ರೀ ಗೊನ್ನುಂಚಿ, ರಾಘವೇಂದ್ರ ಎಚ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Comments are closed.