ಸಂಯುಕ್ತ ಹೋರಾಟ ಕರ್ನಾಟಕ(SKM ) ಮತ್ತು JCTU ಜಂಟಿ ಪ್ರತಿಭಟನೆ ಮೆರವಣಿಗೆ

Get real time updates directly on you device, subscribe now.

ಕೇಂದ್ರ ಸರ್ಕಾರದ ಜನವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಮತ್ತು ವಿಧ್ಯಾರ್ಥಿ,ಯುವಜನ ಮತ್ತು ಮಹಿಳಾ ವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕ(SKM ) ಮತ್ತು JCTU ಜಂಟಿಯಾಗಿ ಕೊಪ್ಪಳದ ಈಶ್ವರ್ ಪಾರ್ಕ್ ನಿಂದ ಬಸವೇಶ್ವರ ಸರ್ಕಲ್ ನಲ್ಲಿ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಈ ಪ್ರತಿಭಟನೆ ಉದ್ದೇಶಿಸಿ ಕೊಪ್ಪಳದ ಹಿರಿಯ ಬಂಡಾಯ ಸಾಹಿತಿಗಳಾದ  ಅಲ್ಲಮ ಪ್ರಭು ಬೆಟ್ಟದೂರು ಮಾತನಾಡಿ ಕೇಂದ್ರ ಸರ್ಕಾರ  ಡಾ. ಸ್ವಾಮಿನಾಥನರವರ ಶಿಫಾರಸ್ಸಿನಂತೆ ಬೆಂಬಲ ಬೆಲೆ ಕಾನೂನು ರಚಿಸುವುದಾಗಿ ತಿಳಿಸಿದ್ದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಮತ್ತು ಸಬ್ ಕಾ ಸಾಥ್ ತಕ್ಕ ವಿಕಾಸ್ ಎಂಬ ದೊಡ್ಡ ದೊಡ್ಡ ಘೋಷಣೆಗಳನ್ನು ಕೂಗುತ್ತ ದೇಶದ ಜನರ ಭರವಸೆಗಳನ್ನು ಕಳೆದ ಹತ್ತು ವರ್ಷಗಳಲ್ಲಿ ಸುಳ್ಳು ಮಾಡಿದ್ದಾರೆ.  ಇನ್ನೊಂದೆಡೆ  ಕೆಲವೇ ರ್ಪೊರೇಟ್ ಮನೆತನಗಳ ಪರವಾಗಿ ನೀತಿಗಳನ್ನು ಜಾರಿ ಮಾಡಿ ಶ್ರೀಮಂತರನ್ನು ಅಗರ್ಭ ಶ್ರೀಮಂತರನ್ನಾಗಿ ಮಾಡಿದ್ದಾರೆ . ದೆಹಲಿಯ ಗಡಿಯಲ್ಲಿ ನ್ಯಾಯಕ್ಕಾಗಿ ದಿರೋದತ್ತ ಹೋರಾಟ ನಡೆಸುತ್ತಿರುವ ರೈತರ ಮೇಲೆ ದೌರ್ಜನ್ಯ ಮಾಡುವ ಕೇಂದ್ರ ಸರ್ಕಾರದ  ಧೋರಣೆಯನ್ನು ಖಂಡಿಸಿದರು.

ಭಾರತದಲ್ಲಿ ಕರೋನ ನಂತರ ಕಾಲದಲ್ಲಿ ಆರ್ಥಿಕ ಬಿಕ್ಕಟ್ಟು ಸುಧಾರಿಸಿದೆ ಹೇಳಲಾಗುತ್ತಿದೆ. ಆರ್ಥಿಕ ಬಿಕ್ಕಟ್ಟು ಸುಧಾರಿಸಿದರೆ ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಾಡಿ ಮುಷ್ಕರದ ಹಕ್ಕು ಮತ್ತು ಸಾಮೂಹಿಕ ಚೌಕಾಸಿ ಹಕ್ಕನ್ನು ಏಕೆ ಕಸಿಯಲಾಗುತ್ತಿದೆ. ಐದು ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸುವ ಭಾರತದಲ್ಲಿ 42.3% ನಿರುದ್ಯೋಗ ಏಕೆ ಎಂದು ಕಾರ್ಮಿಕ ಮುಖಂಡ ಕಾಸಿಂ ಸರ್ದಾರ್ ಕೇಂದ್ರ ಸರ್ಕಾರವನ್ನು ಟೀಕಿಸಿದರು.
ದೇಶಕ್ಕೆ ಅನ್ನ ನೀಡುವ ರೈತ ಬೆಳೆದ ಬೆಳೆಗೆ ಕೂಡಲೇ ಬೆಂಬಲ ಬೆಲೆ ಕಾನೂನನ್ನು ಜಾರಿ ಮಾಡಬೇಕು. ಕೋಮು ಭಾವನೆಗಳನ್ನು ಪ್ರಚೋದನೆಗೊಳಿಸಿ ಜನರನ್ನು ಧಾರ್ಮಿಕವಾಗಿ ಹೊಡೆದಾಳುವ ಸರ್ಕಾರದ ಕುತಂತ್ರದ ನೀತಿಗಳನ್ನು ಪ್ರಜ್ಞಾವಂತ ಜನ ವಿರೋಧಿಸಿ ರಾಜಿರಹಿತ ಹೋರಾಟದಲ್ಲಿ ಭಾಗವಹಿಸಬೇಕೆಂದು ಎಐಟಿಯುಸಿ ಬಸವರಾಜ ಶೀಲವಂತರ ಹಾಗೂ ಕರ್ನಾಟಕ ರೈತ ಸಂಘದ ಮುಖಂಡರಾದ ಡಿ. ಎಚ್. ಪೂಜಾರ ಕರೆ ನೀಡಿದರು.
ಹೋರಾಟದ ಮನವಿ ಪತ್ರವನ್ನು ಜಿಲ್ಲಾ ಅಧಿಕಾರಿಗಳ ಮುಖಾಂತರ  ಪ್ರಧಾನ ಮಂತ್ರಿಗಳಿಗೆ ಸಲ್ಲಿಸಲಾಗಿದೆ.  ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾ ಮುಖಂಡರಾದ ಶರಣು ಗಡ್ಡಿ ಕರ್ನಾಟಕ ಪ್ರಾಂತ ರೈತ ಸಂಘದ ಜಿ.ನಾಗರಾಜ ಪಿ.ಯು.ಸಿ.ಎಲ್ ನ ಮಹಾಂತೇಶ್ ಕೊತ್ಬಾಳ್, ಟಿಯುಸಿಐ ಕೆ.ಬಿ.ಗೋನಾಳ್, ವಿವಿಧ ಸಂಘಟನೆ ಮುಖಂಡರುಗಳಾದ ಹನುಮಂತಪ್ಪ ಹುಲಿ ಹೈದರ, ಕಾಶಪ್ಪ ಚಲವಾದಿ, ಹನುಮೇಶ್ ಕಲ್ಮಂಗಿ,ಶಿವಪ್ಪ ಹಡಪದ್, ಬಸವರಾಜ್ ನರೇಗಲ್, ದುರ್ಗೇಶ್ ಕೆ.ವಿ.ಎಸ್, ಕಟ್ಟಡ ಕಾರ್ಮಿಕ ಮುಖಂಡರ ರಾಮಲಿಂಗ ಶಾಸ್ತ್ರಿಗಳು, ಗೌಸಸಾಬ್ ನದಾಫ್,ಎಸ್. ಎ.ಗಫಾರ್, ಸುಂಕಪ್ಪ ಗದಗ್, ಹಾಗೂ ಕಾರ್ಮಿಕ ಮಹಿಳೆಯರು, ರೈತ ಕಾರ್ಮಿಕರು, ಎಲ್ಲ ವರ್ಗದ ಜನ ಈ ಹೋರಾಟದಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!